ನನ್ನಮ್ಮ ಸೂಪರ್ ಸ್ಟಾರ್ ಅನ್ನೋ ರಿಯಾಲಿಟಿ ಶೋ ಶುರುವಾಗಿದ್ದು, ಅದರಲ್ಲಿ ಭಾಗವಹಿಸಿರುವ ಮಾಸ್ಟರ್ ಆನಂದ್ ಮಗಳಾದ ವಂಶಿಕಾ ಅಂಜನಿ ಕಶ್ಯಪ್ ಸಖತ್ ಫೇಮಸ್ ಆಗಿದ್ದಾಳೆ. ತನ್ನ ಮುದ್ದು ಮುದ್ದಾದ ತೊದಲು ನುಡಿಯಿಂದ ಎಲ್ಲರ ಮನೆ ಮಾತಾಗಿರುವ ಈ ಪುಟ್ಟ ಕಂದ, ಮಾಸ್ಟರ್ ಆನಂದ್ ಅವರ ಮಗಳು. ಅಪ್ಪನಂತೆ ಅರಳು ಹುರಿದಂತೆ ಮಾತನಾಡುವ ಈ ಕಂದಮ್ಮ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದಾಳೆ.
https://www.instagram.com/p/CXDvaLxB3q2/
ವಂಶಿಕಾಳ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಇದ್ದು. ಈ ಅಕೌಂಟ್‌ನಲ್ಲಿ ವಂಶಿಕಾ ಹಾಡಿನ ವೀಡಿಯೋ, ಡಾನ್ಸ್ ವೀಡಿಯೋವನ್ನೆಲ್ಲ ಹಾಕಲಾಗಿದೆ. ಅಲ್ಲದೇ ವಂಶಿಕಾಳ ಅಪ್ಪ ಅಮ್ಮನ ಇನ್‌ಸ್ಟಾ ಅಕೌಂಟ್‌ನಲ್ಲೂ ವಂಶಿಕಾಳ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ವಂಶಿಕಾ ರಿಯಾಲಿಟಿ ಶೋನಲ್ಲಿ ಬಂದಾಗಿಂದ, ಅವಳ ಫ್ಯಾನ್ ಫಾಲೋವರ್ಸ್ ಜಾಸ್ತಿಯಾಗಿದ್ದು, ಇವತ್ತು ವಂಶಿಕಾಳ ಯಾವ ವೀಡಿಯೋ ಬರತ್ತೆ ಅಂತಾ ಕಾತುರದಿಂದ ಕಾಯ್ತಾ ಇರ್ತಾರೆ.
https://www.instagram.com/p/CXLGpf6ImCB/
ವಂಶಿ ತಾಯಿ ಯಶಸ್ವಿನಿ ತಮ್ಮ ಅಕೌಂಟ್‌ನಲ್ಲಿ ಒಂದು ವೀಡಿಯೋ ಹಾಕಿದ್ರು. ಅದರಲ್ಲಿ ನಮ್ಮ ವಂಶಿಕಾ ಬಿಡುವು ಸಿಕ್ಕಾಗ ಮೊಬೈಲ್ ನೋಡುವುದಿಲ್ಲ. ಬದಲಾಗಿ ಅವಳ ಅಡಿಗೆ ಆಟಿಕೆಯಿಂದ ಆಟವಾಡ್ತಾಳೆ. ಇದು ಅವಳ ಕಿಚನ್ ಸೆಟಪ್ ಅಂತಾ ಹೇಳಿದ್ರು.
https://www.instagram.com/p/CW3wWQMBPLc/
ಇನ್ನು ವಂಶಿಕಾ ಎರಡು ವರ್ಷದವಳಿದ್ದಾಗ ಹಾಡಿದ ಹಾಡಿನ ತುಣುಕುಗಳ ವೀಡಿಯೋ ಕೂಡ ಹರಿಬಿಡಲಾಗಿದೆ. ಇದರಲ್ಲಿ ವಂಶಿ ಸಖತ್ ಕ್ಯೂಟ್ ಆಗಿ ಹಾಡಿದ್ದಾರೆ. ಆಕೆಯ ಮುದ್ದಾದ ತೊದಲು ಹಾಡಿಗೆ, ಅವಳ ಫ್ಯಾನ್ಸ್ ಫುಲ್ ಫೀದಾ ಆಗಿದ್ದಾರೆ.
https://www.instagram.com/p/CXDSnDFhHey/
ಇನ್ನು ಅಮ್ಮನ ಜೊತೆ ಕಂದಮ್ಮ ಸಖತ್ ಸ್ಟೆಪ್ ಹಾಕಿದ್ದು, ಮುತ್ತಿನಂಥ ಜೋಡಿ ನಮ್ಮದು ಅಂತಾ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಇಷ್ಟೇ ಅಲ್ಲದೇ ಡಬ್‌ಸ್ಮ್ಯಾಶ್‌ಗೂ ಈ ಗೊಂಬೆ ಆ್ಯಕ್ಟ್ ಮಾಡಿದ್ದು, ಈಕೆಯ ಆಕ್ಟಿಂಗ್ ಯಾವ ಸಿನಿಮಾ ನಟಿಯರಿಗೂ ಕಡಿಮೆ ಇಲ್ಲಾ ಎಂಬಂತಿದೆ.
https://www.instagram.com/p/CXDWBdJBRNp/
https://www.instagram.com/p/CXDSFlehaWz/