Tuesday, October 14, 2025

Latest Posts

ಬೀದಿನಾಯಿ ಹಾವಳಿಗಿಲ್ಲ ಬ್ರೇಕ್ : ಭಯದಿಂದ ಬೇಸತ್ತ ಜನ !

- Advertisement -

ಬೀದಿ ನಾಯಿಗಳಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರು ಬೇಸತ್ತು ಹೋಗಿದ್ದಾರೆ. ಇಷ್ಟು ದಿನ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದ ಪಾಲಿಕೆ ಈಗ ಜವಾಬ್ದಾರಿತನ ತೋರಿಸಲು ಮುಂದಾಗಿತ್ತು. ಆದರೂ ಕೂಡ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯೇ ಉಳಿದಿರುವ ಮಾರ್ಗ ಎಂಬುವುದನ್ನು ಅರ್ಥ ಮಾಡಿಕೊಂಡಿದ್ದ ಪಾಲಿಕೆಯು, ದತ್ತು ಕಾರ್ಯ ಆರಂಭಿಸಿತ್ತು. ಆದರೂ ಕೂಡ ಕಂಟ್ರೋಲ್ ಆಗುತ್ತಿಲ್ಲ.

ಸಿಕ್ಕಸಿಕ್ಕವರನ್ನು ಕಚ್ಚುತ್ತ ಓಡಾಡಿ ಕೊಂಡಿದ್ದ ಹುಚ್ಚುನಾಯಿ ಗಳನ್ನು ಸೆರೆಹಿಡಿಯಲೂ ಕಷ್ಟಪಡುತ್ತಿದೆ. ಅವಳಿ ನಗರದಲ್ಲಿ 25 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ. ಕಳೆದೆರಡು ವರ್ಷಗಳಿಂದ ಪಾಲಿಕೆ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಹೆಚ್ಚಿಸಿದೆಯಾದರೂ ಬೀದಿ ನಾಯಿಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಉಪಟಳ ಮಾಡುವ ಅಥವಾ ಹುಚ್ಚುನಾಯಿ ಸೆರೆಹಿಡಿಯುವ ಪರಿಣಿತರ ತಂಡಗಳ ಸಂಖ್ಯೆ ಕಡಿಮೆ ಇದ್ದು ಜನರ ನೋವಿಗೆ ತಕ್ಷಣವೇ ಸ್ಪಂದನೆ ಸಿಗುತ್ತಿಲ್ಲ. ಹುಬ್ಬಳ್ಳಿಯಲ್ಲಿ ಮಾತ್ರ ಈ ತಂಡವಿದೆ. ಧಾರವಾಡದಲ್ಲಿ ಹುಚ್ಚುನಾಯಿ ಕಂಡರೂ ಅದನ್ನು ಹಿಡಿಯಲು ವಿಳಂಬವಾಗುತ್ತಿದೆಯಂತೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಬಗ್ಗೆ ಉಪ ಮಹಾಪೌರರು ಏನಂತಾರೇ ನೋಡಿ.

ಈಗ ಚಾಲ್ತಿಯಲ್ಲಿರುವ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಸಾಲಿನಲ್ಲಿ ಶಸ್ತ್ರಚಿಕಿತ್ಸೆಯ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss