ಹಾಸನ-ಬೀದಿನಾಯಿಗಳು ಕಡಿದು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ, ಅಜಾದ್ ಮೊಹಲ್ಲಾದ ನಿವಾಸಿ ಮೊಹಮ್ಮದ್ ಯಾಸಿನ್ ಎಂಬುವವರ ಮಕ್ಕಳಾದ ಉಸ್ಮಾನ್ ಅಲಿ ಹಾಗು ಶೌಕತ್ ಅಲಿ ಗೆ ನಾಯಿ ಕಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ
ನಗರದಲ್ಲಿ ಬೀದಿನಾಯಿಗಳ ಹಾವಳಿ ತೀವೃಗೊಂಡಿದ್ದು ಸಂಕಷ್ಟ ಜನರು ನಾಯಿ ಕಡಿತಕ್ಕೆ ಒಳಗಾಗುತ್ತಿರೊ ಬಗ್ಗೆ ದೂರು ಕೇಳಿ ಬಂದ ಎರಡು ದಿನಗಳ ಹಿಂದೆ ಬುಧವಾರ ಮಕ್ಕಳು ಮನೆ ಸಮೀಪ ಆಟವಾಡುತ್ತಿದ್ದಾಗ ದಾಳಿ ಮಾಡಿರೊ ಬೀದಿ ನಾಯಿಗಳು ಮಕ್ಕಳನ್ನು ಕಡಿದು ತೀವೃವಾಗಿ ಗಾಯಗೊಳಿಸಿವೆ.
ಗಾಯಗೊಂಡಿರುವ ಮಕ್ಕಳಿಗೆ ಹಾಸನದ ಹಿಮ್ಸ್ ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಬೀದಿ ನಾಯಿಗಳ ಹಾವಳಿ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
Camera : ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ : ಖುಷ್ಬೂ
Pramod Muthalik : ಶಾಸಕ ತನ್ವೀರ್ ಸೇಠ್ ವಿರುದ್ಧ ಪ್ರಮೋದ್ ಮುತಾಲಿಕ್ ಗರಂ