Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವವನ್ನು ಲೆಕ್ಕಿಸದೇ, ಬಸ್ ಬಾಗಿಲಿಗೆ ನೇತಾಡುತ್ತಾ ಹೋಗುವ ದೃಶ್ಯ ವೈರಲ್ ಆಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಬಾಗಿಲ ಬಳಿ ಇರುವವರ ಜೀವವೇ ಹೊರಟು ಹೋಗಬಹುದು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಸಮರ್ಪಕ ಬಸ್ ಇಲ್ಲದೇ, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರಗಾಂವ, ಡೋಣವಾಡ, ಬೆಳಕೂಡ, ಉಮರಾಣಿ ಸೇರಿದಂತೆ ಏಳೆಂಟು ಗ್ರಾಮಗಳಿಗೆ ಒಂದೇ ಬಸ್ ಇದೆ.
ಈ ಬಸ್ ಬಂದಾಗ, ಎಲ್ಲಾ ಗ್ರಾಮದ ವಿದ್ಯಾರ್ಥಿಗಳು ಆ ಬಸ್‌ಗೆ ಹತ್ತುವ ಕಾರಣಕ್ಕೆ, ಎಲ್ಲರಿಗೂ ಸೀಟ್ ಸಿಗುವುದಿಲ್ಲ. ಅಲ್ಲದೇ, ಬಸ್ ಫುಲ್ ರಶ್ ಆಗಿ, ವಿದ್ಯಾರ್ಥಿಗಳು ಬಸ್ ಬಾಗಿಲಿಗೆ ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದು ಜೀವಕ್ಕೆ ಅಪಾಯ ತಂದೊಡ್ಡುವ ಸಂಗತಿ. ಆದರೆ ಈ ಬಗ್ಗೆ ಅಧಿಕಾರಿಗಳ ಬಳಿ ಹೇಳಿದರೂ, ಅವರು ಡೋಂಟ್ ಕೇರ್ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.