Sunday, July 6, 2025

Latest Posts

ಶಾಲೆಗೆ ಹೋಗಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ, ಈ ಪಟ್ಟಣದ ವಿದ್ಯಾರ್ಥಿಗಳು

- Advertisement -

Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ, ಇರುವ ಬಸ್‌ಗಳಿಗೆ ವಿದ್ಯಾರ್ಥಿಗಳು ಜೋತು ಬಿದ್ದು ಪ್ರಯಾಣ ಮಾಡುತ್ತಿರುವ ಭಯಾನಕ ದೃಶ್ಯ, ವೈರಲ್ ಆಗಿದೆ.

ವಿದ್ಯಾರ್ಥಿಗಳು ಶಾಲೆಗೆ ಹೋಗಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ್ಲಲಿ ಈ ದೃಶ್ಯ ಕಂಡುಬಂದಿದ್ದು, ವಿದ್ಯಾರ್ಥಿಗಳು ಸ್ವಲ್ಪ ಯಾಮಾರಿದರೂ, ಅವರ ಪ್ರಾಣ ಹಾರಿಹೋಗುವ ಸಂಭವವಿದೆ. ಆ ವಿಷಯ ಗೊತ್ತಿದ್ದರೂ ಕೂಡ, ವಿದ್ಯಾರ್ಥಿಗಳು ಬಸ್‌ಗೆ ಜೋತು ಬಿದ್ದು, ಹೇಗಾದರೂ ಮಾಡಿ, ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

ಬಸ್‌ಗಳ ಕೊರತೆ ಇದ್ದು, ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಿಕ್ಕ ಬಸ್‌ಗಳನ್ನು ಹತ್ತಿ ಹೋಗುತ್ತಿದ್ದಾರೆ. ಬಸ್‌ಗಳು ರಶ್ ಇದ್ದಾಗ, ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ಇಂಥ ವಿದ್ಯಾರ್ಥಿಗಳಿಗೊಂದು ಬಸ್ ವ್ಯವಸ್ಥೆ ಮಾಡಬೇಕು ಎಂಬುದು, ಜನರ ಆಗ್ರಹ.

- Advertisement -

Latest Posts

Don't Miss