ವಿಶಾಖಪಟ್ಟಣಂ ನಲ್ಲಿ ಸೋರಕೆಯಾದ ಸ್ಟೆರೀನ್ ಅನಿಲದ ಇತಿಹಾಸ..!

ಕರ್ನಾಟಕ ಟಿವಿ : ವಿಶಾಖಪಟ್ಟಣಂ ಇದೀಗ ವಿಷದ ಪಟ್ಟಣವಾಗಿ ಬದಲಾಗಿದೆ. 10 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 5000 ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಸ್ಟೆರೀನ್ ಅನಿಲದ ಬಳಕ್ಕೆ ಮಾಡೋದ್ಯಾಕೆ..? ಇದರ  “ವಿಷ’’ಶೇಷತೆ ಏನು ಅಂತ ನೋಡೋದಾದ್ರೆ, ಈ ಸ್ಟೆರೀನ್ ಅನ್ನ ರಬ್ಬರು ಹಾಗೂ ಪ್ಲಾಸ್ಟಿಕ್ ತಯಾರಿಕೆ ಸಂದರ್ಭದಲ್ಲಿ ಬಳಸಲಾಗುತ್ತೆ.. ಡಿಸ್ಪೋಸೇಬಲ್ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತೆ.. ಅಂದ್ರೆ ಒಂದು ಸಾರಿ ಬಳಸಿ ಬಿಸಾಕುವ ಪ್ಲಾಸ್ಟಿಕ್ ಲೋಟ, ಸಿಡಿ, , ವಿಡಿಯೋ ಕ್ಯಾಸೆಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇಂತಹ ಪ್ಲಾಸ್ಟಿಕ್ ನಿಂದ ತಯಾರಿಸಿದ ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಹಾಗೂ ನೀರು ಶೇಖರಣೆ ಸೂಕ್ತವಲ್ಲ..

About The Author