Hubli News: ಹುಬ್ಬಳ್ಳಿ: ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಪಕ್ಕಿರಪ್ಪ ಡಿಗ್ಗಿ (34) ಬಂಧಿತ ಆರೋಪಿಯಾಗಿದ್ದಾನೆ. ಈತ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕೈಚಳಕದಿಂದ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಅದರಂತೆ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜ.8 ರಂದು ಬೈಕ್ ಕಳ್ಳತನವಾಗಿದ್ದ ಪ್ರಕರಣವೊಂದರ ತನಿಖೆಯಲ್ಲಿ ತೊಡಗಿದ್ದ ಪೊಲೀಸರು ಜಾಡು ಹಿಡಿದು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕದ್ದಿದ್ದ 80 ಸಾವಿರ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ.
ಇನ್ನು ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಮ್.ಎಸ್.ಹೂಗಾರ ಅವರ ನೇತೃತ್ವದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಹೊಸೂರ, ಸಿಬ್ಬಂದಿಗಳಾದ ಎಸ್.ವಿ.ಯರಗುಪ್ಪಿ, ಗೂಳೇಶ ಎಮ್.ಎಚ್, ನಾಗರಾಜ್ ಗುಡಿಮನಿ, ಜ್ಞಾನೇಂದ್ರ ಮಾಂಗ, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ಎಸ್.ಟಿ.ಯಳವತ್ತಿ, ರೇಣಪ್ಪ ಶಿಕ್ಕಲಗಾರ, ತರುಣ ಗಡ್ಡದವರ, ಆರೂಢ ಕರೆಣ್ಣವರ, ಅರುಣ ಡೊಳ್ಳಿನ ಅವರನ್ನೊಳಗೊಂಡ ತಂಡ ಪ್ರಕರಣವನ್ನು ಬೇಧಿಸಿದೆ.
11 ಲಕ್ಷ ಮೌಲ್ಯದ 202 ಸೈಲೆನ್ಸರ್ ನಾಶ ಮಾಡಿದ್ದೇವೆ, ನಿಯಮ ಉಲ್ಲಂಘಿಸಿದರೆ ಹುಷಾರ್: ಕಮೀಷನರ್ ಎಚ್ಚರಿಕೆ
ಚೆನ್ನಮ್ಮ ವೃತ್ತದ ಬಳಿಯಲ್ಲಿ 200ಕ್ಕೂ ಅಧಿಕ ಸೈಲೆನ್ಸರ್ ನಾಶ: ಕರ್ಕಶ ಶಬ್ದ ಮಾಡಿದರೇ ಹುಷಾರ್..!
ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಸಂತ್ರಸ್ತನ ವಿರುದ್ಧ ಪ್ರಕರಣ ದಾಖಲು