Friday, October 24, 2025

Latest Posts

ಪ್ರಿನ್ಸ್ ಮಹೇಶ್ ಬಾಬು ಎದುರು ವಿಲನ್ ಆಗಿ ಅಬ್ಬರಿಸ್ತಾರಾ ಕಿಚ್ಚ ಸುದೀಪ್..?

- Advertisement -

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ, ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲೂ ಸಖತ್ ಹವಾ ಮೆಂಟೇನ್ ಮಾಡಿರೋ ನಟ.

ಹಿಂದಿಯಲ್ಲಿ ರಣ್, ಫೂಂಕ್, ದಬಂಗ್-3 ಸಿನಿಮಾದಲ್ಲಿ, ತೆಲುಗಿನ ಈಗ, ಬಾಹುಬಲಿ, ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡ ಸುದೀಪ್ ಇದೀಗ ಪ್ರಿನ್ಸ್ ಮಹೇಶ್ ಬಾಬು ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಮಹೇಶ್ ಬಾಬು ಅಭಿನಯದ ಸರಕಾರು ವಾರಿ ಪಟ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ರೋಲ್ ಪ್ಲೇ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಸದ್ಯ ಇದೊಂದು ಊಹಾಪೋಹ ಎಂದು ಹೇಳಲಾಗಿದ್ದು, ಚಿತ್ರದ ನಿರ್ದೇಶಕ ಪರಶುರಾಮ್ ಈ ಬಗ್ಗೆ ಕಿಚ್ಚನಿಗೆ ಆಫರ್ ನೀಡಿ, ಸುದೀಪ್ ಈ ಪಾತ್ರ ಮಾಡಲು ಒಪ್ಪಕೊಂಡರೆ ಸರಕಾರು ವಾರಿ ಪಟ ಚಿತ್ರದಲ್ಲಿ ಕಿಚ್ಚನನ್ನ ನಾವು ಕಾಣಬಹುದು.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ರಿಲೀಸ್ ಆಗಲಿದೆ.ಅಲ್ಲದೇ, ಡೈರೆಕ್ಟರ್ ನಿರೂಪ್ ಭಂಡಾರಿ ಮತ್ತು ಕಿಚ್ಚನ ಕಾಂಬಿನೇಶನ್‌ನಲ್ಲಿ ಫ್ಯಾಂಟಮ್ ಸಿನಿಮಾ ಶೂಟಿಂಗ್ ಈ ವರ್ಷ ಮುಗಿಯುವ ಸಾಧ್ಯತೆ ಇದ್ದು, ಮುಂದಿನ ವರ್ಷ ದೊಡ್ಡ ಪರದೆ ಮೇಲೆ ಫ್ಯಾಂಟಮ್ ಮ್ಯಾಜಿಕ್ ಕಾಣಬಹುದು.

https://youtu.be/uQobu3qtHQk

- Advertisement -

Latest Posts

Don't Miss