ತಮ್ಮ ಡೀಪ್ ಫೇಕ್ ವೀಡಿಯೋ ಬಗ್ಗೆ ಎಚ್ಚರಿಕೆ ನೀಡಿದ ಸುಧಾಮೂರ್ತಿ, ಹೇಳಿದ್ದೇನು..?

Web News: ಲೇಖಕಿ, ಸಮಾಜ ಸೇವಕಿ ಸುಧಾ ಮೂರ್ತಿಯವರು ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೋ ಹಾಕಿ, ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಏನಿದು ಎಚ್ಚರಿಕೆ ಸಂದೇಶವೆಂದು ನೋಡಿದಾಗ, ನೀವು ಫೇಸ್‌ಬುಕ್ ಓಪನ್ ಮಾಡಿದಾಗ, ನಿಮಗೆ ನನ್ನ ವೀಡಿಯೋ ಕಾಣುತ್ತದೆ. ಅದರಲ್ಲಿ ನನ್ನ ಹೆಸರಿನಲ್ಲಿ ಡೀಪ್ ಫೇಕ್ ವೀಡಿಯೋ ಮಾಡಿ, ದುಡ್ಡು ಹೂಡಿಕೆ ಮಾಡಲು, ಹೇಳಲಾಗುತ್ತಿದೆ. ಇದರಲ್ಲಿ ನಾನು 20 ಸಾವಿರ ಹೂಡಿಕೆ ಮಾಡಿದ್ರೆ, ನಿಮ್ಮ ಹಣ ಡಬಲ್ ಆಗತ್ತೆ ಎಂದು ಹೇಳಿದಂತೆ ವೀಡಿಯೋ ಮಾಡಲಾಗಿದೆ. ಆದರೆ ನಾನು ಎಂದಿಗೂ ಯಾವುದೇ ಹೂಡಿಕೆ ಸಲಹೆ ನೀಡುವವಳಲ್ಲ. ಹಾಗಾಗಿ ಇಂಥ ವೀಡಿಯೋ ನಿಮಗೂ ಕಂಡರೆ, ಆ ವೀಡಿಯೋವನ್ನು ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಇದನ್ನು ಹೇಳಲು ನನಗೆ ಬೇಸರವಾಗುತ್ತದೆ. ಎರಡರಿಂದ ಮೂರು ಇಂಥ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ಇದನ್ನು ನಂಬಿ ಹಲವರು ಹಣ ಹೂಡಿಕೆ ಮಾಡಿ, ನಷ್ಟ ಅನುಭವಿಸಿದ್ದಾರೆ. ಆದರೆ ಇಂಥ ವೀಡಿಯೋವನ್ನು ನಾನೆಂದಿಗೂ ಮಾಡುವುದಿಲ್ಲ. ಇದನ್ನು ನಂಬಿ ನಿಮ್ಮ ಹಣವನ್ನು ಕಳೆದುಕ“ಳ್ಳಬೇಡಿ ಎಂದು ಸುಧಾಮೂರ್ತಿ ಮನವಿ ಮಾಡಿದ್ದಾರೆ.

ಇಂಥ ವೀಡಿಯೋ ನೋಡಿ ನಿಮಗೆ ಹಣ ಹೂಡಿಕೆ ಮಾಡಬೇಕು ಎಂದು ಎನ್ನಿಸಿದರೆ, ಇಂಥ ವೀಡಿಯೋವನ್ನು ಬ್ಯಾಂಕ್‌ಗೆ ತೋರಿಸಿ, ವಿಚಾರಿಸಿ ಬಳಿಕ ನಿರ್ಧಾರ ಮಾಡಿ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಬರುವ ಆ್ಯಡ್‌ಗಳನ್ನು ನೋಡಿ, ಹಣ ಹೂಡಿಕೆ ಮಾಡಬೇಡಿ ಎಂದು ಸುಧಾಮೂರ್ತಿ ಎಚ್ಚರಿಸಿದ್ದಾರೆ.

About The Author