Thursday, December 12, 2024

Latest Posts

ಜಯಲಲಿತಾ ಪುತ್ರ ಜೈಲಿನಿಂದ ರಿಲೀಸ್..!

- Advertisement -

www.karnatakatv.net : ಜಯಲಲಿತಾ ದತ್ತು ಪುತ್ರ ಸುಧಾಕರನ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

5 ವರ್ಷಗಳಿಂದ ಜೈಲುವಾಸದಲ್ಲಿದ್ದ ಜಯಲಲಿತಾ ಅವರ ದತ್ತು ಪುತ್ರ ಇಂದು ರಿಲಿಸ್ ಆಗಿದ್ದಾರೆ. ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ರಿಲಿಸ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಅವರ ಪರವಾಗಿ ಘೋಷಣೆಯನ್ನು ಕೂಗಿ ಅವರನ್ನು ಸ್ವಾಗತಿಸಿದ್ರು, ಹಾಗೇಯೇ ಶಶಿಕಲಾ ಜೊತೆಗೆಯೇ ಸುಧಾಕರನ್ ಅವರು ಬಿಡುಗಡೆಯಾಗಬೇಕಿತ್ತು ಆದರೆ ದಂಡವನ್ನು ಕಟ್ಟದ ಹಿನ್ನಲೇ ಒಂದು ವರ್ಷ ಹೆಚ್ಚು ಜೈಲಿನಲ್ಲಿ ಇರಬೇಕಾಗಿತ್ತು.

ಅಕ್ರಮ ಆಸ್ತಿ ಸಂಪಾದಿಸದ್ದಕ್ಕೆ ಶಶಿಕಲಾ ನಟರಾಜನ್ ಮೇಲೆ ಆರೋಪವಿದ್ದು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಸುಮಾರು 4 ವರ್ಷಗಳ ನಂತರ ಇವರನ್ನು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು. ಅದೇ ದಿನದಂದು ಸುಧಾಕರನ್ ಅವರನ್ನು ಕೂಡಾ ಬಿಡುಗಡೆ ಮಾಡಲಾಗುತ್ತಿತ್ತು ಆದರೆ ದಂಡ ಕಟ್ಟು ಆಗದ ಕಾರಣ ಅವರನ್ನು ಬಿಡುಗಡೆಗೊಳಿಸಿರಿಲಿಲ್ಲ. ಇನ್ನು ಸುಧಾಕರನ್ ಆಸ್ತಿಗೆ ಸರ್ಕಾರ 2017ರಂದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಫೆಬ್ರವರಿ 10ಕ್ಕೆ ಸುಧಾಕರನ್ ಆಸ್ತಿಗೆ ಮುಟ್ಟುಗೋಲು ಹಾಕಿತ್ತು.

- Advertisement -

Latest Posts

Don't Miss