ಬಿಗ್ ಬಾಸ್ʼ ಮನೆಯಿಂದ ಈ ವಾರ ಯಾರು ಔಟ್ ಆಗ್ತಾರೆ? ಯಾರು ಔಟ್ ಆಗಬೇಕು? ಅನ್ನೋ ದೊಡ್ಡ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಮೊದಲು ಕೇಳಿಬಂದ ಹೆಸರು ಕಾಕ್ರೋಚ್ ಸುಧಿ, ಅಂತೆಯೇ ಈ ವಾರ ಕಾಕ್ರೋಚ್ ಸುಧಿ ʻಬಿಗ್ ಬಾಸ್ʼ ಮನೆಯಿಂದ ಎಲಿಮಿನೇಟ್ ಆಗಿ ದೊಡ್ಮನೆ ಜರ್ನಿಗೆ ಗುಡ್ ಬೈ ಹೇಳಿದ್ದಾರೆ.49 ದಿನಗಳ ನಂತರ ಕಾಕ್ರೋಚ್ ಸುಧಿ ʻಬಿಗ್ ಬಾಸ್ʼ ಮನೆಯಿಂದ ಹೊರ ಬಂದಿದ್ದಾರೆ.
ಕಾಕ್ರೋಚ್ ಸುಧಿ, ʻಬಿಗ್ ಬಾಸ್ʼ ಕನ್ನಡ ಹಿಸ್ಟರಿಯಲ್ಲಿ ಅಚ್ಚರಿಯ ಎಂಟ್ರಿ ಪಡೆದುಕೊಂಡಿದ್ದ ಕಂಟೆಸ್ಟೆಂಟ್. ಜನಗಳ ಬಳಿ ಹೋಗಿ ಸ್ವತಃ ʻಬಿಗ್ ಬಾಸ್ʼಗೆ ಹೋಗಬೇಕಾ ಅಥವಾ ಬೇಡ್ವಾ ಅನ್ನೋ ಅಭಿಪ್ರಾಯವನ್ನ ಕೇಳಿದ್ದರು. ಸ್ಪರ್ಧಿಯೇ ಜನಗಳ ಬಳಿ ಹೋಗಿ ಈ ರೀತಿ ಅಭಿಪ್ರಾಯ ಕೇಳಿ ʻಬಿಗ್ ಬಾಸ್ʼ(Bigg Boss) ಮನೆಗೆ ಎಂಟ್ರಿ ಕೊಟ್ಟಿದ್ದು ಇದೇ ಮೊದಲು. ಹೀಗಾಗಿ ಅವರ ಎಂಟ್ರಿ ಇಂಟರೆಸ್ಟಿಂಗ್ ಆಗಿತ್ತು. ಕಾಕ್ರೋಚ್ ಎಂಟ್ರಿ ಕೊಡ್ತಿದ್ದಾರೆ ಅಂತ ಗೊತ್ತಾದಾಗ, ಅಥವಾ ಎಂಟ್ರಿ ಕೊಟ್ಮೇಲೆ, ಫೈನಲಿಸ್ಟ್ನಲ್ಲಿ ಕಾಕ್ರೋಚ್ ಸುಧಿ ಇರೋದು ಫಿಕ್ಸ್ ಅಂತೆಲ್ಲಾ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಕಾಕ್ರೋಚ್ ಸುಧಿ ಈ ನಂಬಿಕೆಯನ್ನ ಅಷ್ಟಾಗಿ ಉಳಿಸಿಕೊಳ್ಳಲಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.
ಕಾಕ್ರೋಚ್ ಸುಧಿ ಈ ವಾರ ಎಲಿಮಿನೇಟ್(Eliminate) ಆಗ್ತಾರೆ ಎಂದು ಅನೇಕರು ಊಹಿಸಿದ್ದರು. ಅದರಂತೆ ಈ ವಾರ ಕಾಕ್ರೋಚ್ ಸುಧಿ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಈ ಮೂಲಕ ʻಬಿಗ್ ಬಾಸ್ʼ ಜರ್ನಿಗೆ ಗುಡ್ ಬೈ ಹೇಳಿದ್ದಾರೆ ಸುಧಿ. ಅಂದಹಾಗೆ ಇದು ದೊಡ್ದ ವಿಪರ್ಯಾಸವೇ ಸರಿ. ಯಾಕೆಂದರೆ, ಮಿನಿ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ ಆಗಿ ಸ್ಪೆಷಲ್ ಪವರ್ ಪಡೆದುಕೊಂಡಿದ್ದರು. ಕಳೆದ ವಾರ ನಾಮಿನೇಟ್ ಆದಾಗ, ಆ ಪವರ್ ಅನ್ನು ಬಳಸಿ ಕಾಕ್ರೋಚ್ ಮನೆಯಲ್ಲೇ ಉಳಿದುಕೊಂಡರು. ಆದರೆ, ಈ ವಾರ ಸುಧಿಗೆ ಯಾವುದೇ ಪವರ್ ಇರಲಿಲ್ಲ. ಅಲ್ಲದೇ, ಈ ವಾರ ನಾನು ಪಕ್ಕಾ ಹೊರಗೆ ಹೋಗ್ತೀನಿ, ಹೊರಗೆ ಹೋಗ್ತೀನಿ ಎಂದು ಸುಧಿ ಹೇಳಿಕೊಳ್ಳುತ್ತಿದ್ದರು. ನಾಮಿನೇಷನ್ ಬಲೆಗೆ ಸಿಕ್ಕಿಕೊಂಡು ಭಯದಿಂದ ಸುಧಿ ಒದ್ದಾಡಿದ್ದರು. ಆದಾಗ್ಯೂ ಸುಧಿ ಸೇಫ್ ಆಗಿ ಮತ್ತೆ ನಾಮಿನೇಟ್ ಆಗಿದ್ದರು. ಆದರೆ, ಲಕ್ ಅವರ ಕೈ ಹಿಡಿಯಲಿಲ್ಲ. ಪರಿಣಾಮ, ಕಾಕ್ರೋಚ್ ಸುಧಿ ʻಬಿಗ್ ಬಾಸ್ʼನಿಂದ ಎಲಿಮಿನೇಟ್ ಆಗಿದ್ದಾರೆ.
ಕಾಕ್ರೋಚ್ ಸುಧಿ ಎಂದ ಕೂಡಲೇ ಜನಕ್ಕೆ ತುಂಬಾ ಎಕ್ಸ್ಪೆಕ್ಟೇಶನ್ಸ್ ಇತ್ತು, ಆದ್ರೆ ಎಲ್ಲೋ ತಮ್ಮ ಸಾಮರ್ಥ್ಯವನ್ನ ತಾವೇ ಅರ್ಥ ಮಾಡಿಕೊಳ್ಳದೆ ಸುಧಿ ಬಿಗ್ ಬಾಸ್ ಕೊಟ್ಟಂತಹ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳಲು ವಿಫಲರಾಗಿ ಫೈನಲಿಸ್ಟ್(Finalist Contender) ಕಂಟೆಂಡರ್ ಆಗ್ಬೇಕಿದ್ದವರು ಅತಿ ಬೇಗ ಮನೆಯಿಂದ ಹೊರಬರುವಂತಾಯ್ತು…..
ವರದಿ : ಗಾಯತ್ರಿ ಗುಬ್ಬಿ

