ಕೋವಿಡ್ ಬಂದು ಹೋದ ಮೇಲೆ ಮೊದಲ ಬಾರಿ ಸೋಶಿಯಲ್ ಮೀಡಿಯಾಗೆ ಬಂದು ಮಾತನಾಡಿರುವ ಸುಮಲತಾ ಅಂಬರೀಷ್, ಕೆಲ ಸಲಹೆಗಳನ್ನ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಅಂಬರೀಷ್ ನನಗೆ ಯಾವಾಗಲೂ ಒಂದು ಮಾತು ಹೇಳ್ತಿದ್ರು. ಕಷ್ಟ ಬಂದ್ರೆ ಅದು ಹೇಗ್ ಬಂದ್ರೂ ಯಾವಾಗ ಬಂದ್ರು ಅದನ್ನ ಧೈರ್ಯವಾಗಿ ಎದುರಿಸಿ ಹೋರಾಡ್ಬೇಕು. ಇತ್ತೀಚೆಗೆ ನನಗೂ ಒಂದು ಕಷ್ಟ ಬಂದಿತ್ತು. ಅದರ ಹೆಸ್ರು ಕೋವಿಡ್ 19. ಹೌದು ನಾನೊಬ್ಳು ಕೊರೊನಾ ಸೋಂಕಿತೆ ಆದ್ರೀಗ ಸಂಪೂರ್ಮವಾಗಿ ಗುಣಮುಖಳಾಗಿದ್ದೇನೆ.
ಹಾಗೇ ನೋಡಿದ್ರೆ ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದೀನಿ. ಅದನ್ನೆಲ್ಲಾ ಹೋಲಿಸೋಕ್ಕೆ ಹೋದ್ರೆ ಇದು ಅಷ್ಟು ಕಷ್ಟಾ ಏನಲ್ಲಾ ಅಂತಾ ನನಗನಿಸುತ್ತೆ. ಆದ್ರೆ ಮೊದಲು ನನಗೆ ಕೊವಿಡ್ ಪಾಸಿಟ್ ಎಂಬ ರಿಸಲ್ಟ್ ಬಂದಾಗ ಭಯ ಆಗಿತ್ತು.
ಈ ವೇಳೆ ನಾನು ಮೊದಲು ಧೈರ್ಯ ತೊಕೊಂಡೆ, ಜ್ವರ ಬಂದ ಬಳಿಕ ಸ್ವಾಬ್ ಟೆಸ್ಟ್‌ಗೆ ಕಳಿಸಿದೆ. ಪಾಸಿಟಿವ್ ಅಂತಾ ರಿಸಲ್ಟ್ ಬಂತು. ಆ ರಿಸಲ್ಟ್ ಬರೋಕಿಂತಾ ಮುಂಚೆನೇ ನಾನು ಕ್ವಾರಂಟೈನ್ ಆಗಿದ್ದೆ. ಈ ವಿಷಯವನ್ನ ನನ್ನ ಕಾಂಟ್ಯಾಕ್ಟ್‌ನಲ್ಲಿದ್ದ ಎಲ್ಲರಿಗೂ ತಿಳಿಸಿದೆ.
ನೀವು ಕೂಡಾ ನಿಮ್ಮ ಡಾಕ್ಟರ್ ಕೊಟ್ಟ ಸಲಹೆಯನ್ನ ತಪ್ಪದೇ, ಪಾಲಿಸಿ. ನಾನು ನನ್ನ ಡಾಕ್ಟರ್ ಕೊಟ್ಟ ಮಾತ್ರೆಯನ್ನ ಟೈಮ್ ಟೈಮ್ ತೊಗೋಳ್ತಿದ್ದೆ. ಒಳ್ಳೆ ಊಟ, ತಿಂಡಿ ಮಾಡ್ತಿದ್ದೆ. ಉಸಿರಾಟದ ವ್ಯಾಯಾಮ, ಯೋಗ , ಪ್ರಾಣಾಯಮ ಮಾಡ್ತಿದ್ದೆ. ಇದರ ಜೊತೆ ತುಳಸಿ ನೀರು, ಕಷಾಯ ತೊಗೊಂಡಿದ್ದೆ. ಜನರ ಪ್ರೀತಿ ಆಶೀರ್ವಾದದಿಂದ ನಾನು ಗುಣಮುಖಳಾಗಿದ್ದೇನೆ.
ನಾನು ಚಿಕ್ಕಂದಿನಲ್ಲಿ ನನ್ನ ಮಗನನ್ನ ಹೇಗೆ ನೋಡ್ಕೋತಿದ್ನೋ ನನ್ನ ಮಗ ನನ್ನನ್ನು ಅಷ್ಟೇ ಚೆನ್ನಾಗಿ ನೋಡಿಕೊಂಡಿದ್ದಾನೆ. ಒಂದೇ ಮನೆಯಲ್ಲಿದ್ರು ನಾವಿಬ್ರು ಫೋನ್ ಮೂಲಕ ಮಾತಾಡ್ತಿದ್ವಿ.
ಕೊರೊನಾ ಬಂದ್ರೆ ಧೈರ್ಯಗೆಡಬೇಡಿ. ಅದನ್ನ ಎದುರಿಸಿ. ಒಳ್ಳೆಯ ಆಹಾರ. ಔಷಧಿ ತೊಗೊಳ್ಳಿ. ಖಂಡಿತ ನೀವು ಬೇಗ ಗುಣಮುಖರಾಗ್ತಿರಾ ಎಂದು ಸುಮಲತಾ ಅಂಬರೀಷ್ ಸಲಹೆ ನೀಡಿದ್ದಾರೆ.
