Thursday, November 30, 2023

Latest Posts

ಕಾವೇರಿ ಬಗ್ಗೆ ಸಂಸತ್ತಿನಲ್ಲಿ ಮೊದಲ ವರ್ಷವೇ ಗಟ್ಟಿ ದನಿ ಎತ್ತಿದ್ದೆ-ಸಂಸದೆ ಸುಮಲತಾ ಅಂಬರೀಶ್..!

- Advertisement -

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ  ಆಡಿದ ನನ್ನ ಮಾತುಗಳಲ್ಲಿ ಇಂದಿಗೂ ಏನೇನೂ ಬದಲಾವಣೆ ಆಗಿಲ್ಲ. ಇವತ್ತೂ ನನ್ನ ರೈತರಿಗೆ ನೀರಿನ ವಿಚಾರದಲ್ಲಿ ಅನ್ಯಾಯ ಆಗುತ್ತಲೇ ಇದೆ.

ಕಾವೇರಿ ನದಿ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳಿಗೆ ಸಮನಾದ ನ್ಯಾಯ ಸಲ್ಲಬೇಕಿತ್ತು. ಅದು ಆಗುತ್ತಿಲ್ಲ. ಪದೇ ಪದೇ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ.

ನೀರು ಇದ್ದಾಗ ಹಂಚಿಕೊಳ್ಳುವುದರಲ್ಲಿ ಅರ್ಥವಿದೆ. ಇಲ್ಲದೇ ಇರುವ ಸಮಯದಲ್ಲೂ ನೀರು ಕೊಡುವುದು ನನ್ನ ನಾಡಿನ ರೈತರಿಗೆ ಮಾಡುವ ಅನ್ಯಾಯ. ಅದಕ್ಕೆ ಯಾವಾಗಲೂ ನನ್ನ ವಿರೋಧವಿದೆ.

ನದಿ ನೀರಿನ ವಿಚಾರದಲ್ಲಿ ರಾಜಿ ಆಗುವ ಮಾತೇ ಇಲ್ಲ. ಸಂಕಷ್ಟದಲ್ಲಿ ಇರುವ ನನ್ನ ರೈತರ ಪರವಾಗಿ, ಅದು ಲೋಕಸಭೆಯೇ ಆಗಲಿ, ಯಾವುದೇ ವೇದಿಕೆ ಇರಲಿ, ನನ್ನ ಮಾತುಗಳು ನಮ್ಮ ರೈತರ ಪರವಾಗಿಯೇ ಇರಲಿವೆ. ನನಗೆ ನಮ್ಮ ರೈತರ ಹಿತದೃಷ್ಠಿಯೆ ಮುಖ್ಯ.

ನನ್ನ ನಾಡಿನ ರೈತರ ಪರವಾಗಿ ಯಾವಾಗಲೂ, ನನ್ನ ಧ್ವನಿ ಮತ್ತು ಹೋರಾಟ ಇದ್ದೇ ಇರುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

congress joining: ಕಾಂಗ್ರೆಸ್ಸಿನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ: ಲಿಂಬಿಕಾಯಿ

ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ಜಿಲ್ಲಾಧಿಕಾರಿ ಸ್ಫಷ್ಟನೆ..

Haveri Bus stand: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಬೆಂಡೆತ್ತಿದ ಧೀರ ನಾರಿ..!

- Advertisement -

Latest Posts

Don't Miss