- Advertisement -
www.karnatakatv.net ಬೆಂಗಳೂರು: ಮಂಡ್ಯದ ಜನ ಅತ್ಯಂತ ಮುಗ್ಧರು ಅದಕ್ಕೇ ಅನುಕಂಪದ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿದ್ದಾರೆ ಎಂದ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ ಮಂಡ್ಯದ ಜನ ಮುಗ್ಧರೇ ಆಗಿರಬಹುದು ಆದರೆ ಅವರಿಗೆ ಸ್ವಾಭಿಮಾನ ಇದೆ. ಅದು ಇರುವುದರಿಂದಲೇ ಮಂಡ್ಯ ಜಿಲ್ಲಾ ಜನತೆ ನಿಮಗೆ ಪಾಠ ಕಲಿಸಿದ್ದು. ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದರೆ ನನ್ನ ಬಗ್ಗೆಯೇ ಹೀಗೆ ಮಾತನಾಡುವುದೇ ನಿಮ್ಮ ರಾಜಕೀಯ ಎಂದು ಕಿಡಿ ಕಾರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾಗಿದ್ದವರು ನೀವು. ಇದೇನಾ ನಿಮ್ಮ ಜವಾಬ್ದಾರಿ ಎಂದರು.
- Advertisement -