Sunday, September 8, 2024

Latest Posts

ಬೇಸಿಗೆ ಗಾಲಕ್ಕೆ ತಂಪು ಪಾನೀಯ ರೆಸಿಪಿ..

- Advertisement -

ಬೇಸಿಗೆಗಾಲ ಶುರುವಾಗಿದೆ. ದೇಹಕ್ಕೆ ತಂಪು ನೀಡುವ ಪದಾರ್ಥ ತಿನ್ನಬೇಕು. ಏನಾದ್ರೂ ಕೂಲ್‌ ಕೂಲ್ ಆಗಿರೋ, ಜ್ಯೂಸ್, ಮಿಲ್ಕ್ ಶೇಕ್ ಕುಡಿಬೇಕು ಅಂತಾ ಅನ್ನಿಸೋದು ಸಹಜ. ಹಾಗಾಗಿಯೇ ಇಂದು ನಾವು, ಎರಡು ರೀತಿಯ ಸಮ್ಮರ್ ಡ್ರಿಂಕ್ಸ್ ರೆಸಿಪಿ ತಂದಿದ್ದೇವೆ. ಹಾಗಾದ್ರೆ ಬನ್ನಿ ಯಾವುದು ಆ ಸಮ್ಮರ್ ಡ್ರಿಂಕ್ಸ್ ಅಂತಾ ತಿಳಿಯೋಣ.

ಮೊದಲನೇಯ ರೆಸಿಪಿ ಆಮ್ ಪನ್ನಾ. ಅರ್ಧ ಮಾವಿನ ಹಣ್ಣು, ಅರ್ಧ ಕಪ್ ಪುದೀನಾ ಎಲೆ, 5 ಬೀಜ ತೆಗೆದ ಹಸಿ ಖರ್ಜೂರ, 3 ಟೇಬಲ್ ಸ್ಪೂನ್ ನಿಂಬೆ ರಸ, 1 ಟೇಬಲ್ ಸ್ಪೂನ್ ಜೀರಿಗೆ, ಚಿಟಿಕೆ ಸೇಂಧವ ಲವಣ. ಬೇಕಾದಷ್ಟು ನೀರು. ಇವೆಲ್ಲವನ್ನು ಜೂಸ್ ಜಾರ್‌ಗೆ ಹಾಕಿ, ಮಿಕ್ಸ್ ಮಾಡಿದ್ರೆ, ಆಮ್ ಪನ್ನಾ ರೆಡಿ. ಬೇಕಾದಲ್ಲಿ ಇದಕ್ಕೆ ಐಸ್ ಕ್ಯೂಬ್ಸ್ ಸೇರಿಸಿ.

ಎರಡನೇಯದು ತೆಂಗಿನ ಹಾಲಿನ ಜ್ಯೂಸ್.  ಎರಡು ಕಪ್ ತೆಂಗಿನ ಹಾಲು, ಒಂದು ಕಪ್ ನೀರು, ಕಾಲು ಕಪ್ ಪುದೀನಾ ಎಲೆ, ಒಂದು ಸ್ಪೂನ್ ನಿಂಬೆ ರಸ, ಒಂಟು ಟೀ ಸ್ಪೂನ್  ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. ಉಪ್ಪಿನ ಬದಲು ಸೇಂಧವ ಲವಣ ಬಳಸಿದರು ಒಳ್ಳೆಯದು. ಇವೆಲ್ಲವನ್ನು ಜೂಸ್ ಜಾರ್‌ಗೆ ಹಾಕಿ, ಮಿಕ್ಸ್ ಮಾಡಿದ್ರೆ, ತೆಂಗಿನ ಹಾಲಿನ ಜ್ಯೂಸ್ ರೆಡಿ.

ಈಗ ನಾವು ತಿಳಿಸಿಕೊಟ್ಟ ಸಮ್ಮರ್ ಡ್ರಿಂಕ್ಸ್ ಸಾತ್ವಿಕ ಆಹಾರವಾಗಿದೆ. ಇದನ್ನ ಕುಡಿಯುವುದರಿಂದ ದೇಹ ತಂಪಾಗುವುದಲ್ಲದೇ, ನಮ್ಮ ಆರೋಗ್ಯ ಕೂಡಾ ವೃದ್ಧಿಸುತ್ತದೆ. ಸಾಧ್ಯವಾದಷ್ಟು ಫ್ರಿಜ್‌ನಲ್ಲಿರಿಸಿ ಕುಡಿಯುವುದು. ಐಸ್‌ ಕ್ಯೂಬ್ಸ್ ಹಾಕಿ ಕುಡಿಯುವುದನ್ನ ಕಡಿಮೆ ಮಾಡಿ. ಯಾಕಂದ್ರೆ ಇದು ಫ್ರೆಶ್‌ ಆಗಿ ಕುಡಿದರಷ್ಟೇ ಅದರ ಲಾಭ ಸಿಗುತ್ತದೆ. ಫ್ರಿಜ್‌ನಲ್ಲಿರಿಸಿ, ಅಥವಾ ಐಸ್ ಕ್ಯೂಬ್ಸ್ ಬಳಸಿ ಕುಡಿದ್ರೆ, ಸಂಪೂರ್ಣ ಆರೋಗ್ಯದ ಲಾಭ ಪಡೆಯಲು ಸಾಧ್ಯವಿಲ್ಲ.

- Advertisement -

Latest Posts

Don't Miss