ಬೇಸಿಗೆಯಲ್ಲೂ ಬಿಯರ್‌ ಗೆ ಭಾರೀ ಡಿಮ್ಯಾಂಡ್!

ರಾಜ್ಯದಲ್ಲಿ ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಚಿತ್ರಣದಲ್ಲೂ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಕಡು ಬಿಸಿಲಿನಿಂದಾಗಿ ಮದ್ಯಪ್ರಿಯರು ಇದೀಗ ರಮ್ ಮತ್ತು ಬ್ರ್ಯಾಂಡಿಗಳಿಗಿಂತ ಹೆಚ್ಚು ಚಿಲ್ ಬಿಯರ್ ಕಡೆಗೆ ಮುಖ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗಳು ಹಾಗೂ ಬಾರ್‌ಗಳ ಮಾಹಿತಿಯ ಪ್ರಕಾರ, ಕಳೆದ ಕೆಲವು ವಾರಗಳಿಂದ ಬಿಯರ್ ಮಾರಾಟದಲ್ಲಿ ಶೇ 20 ರಿಂದ 25 ರಷ್ಟು ಏರಿಕೆ ಕಂಡುಬಂದಿದೆ. ಸಾಮಾನ್ಯ ದಿನಗಳಲ್ಲಿ ಕಂಡುಬರುವ ಮಾರಾಟಕ್ಕಿಂತ ಈಗ ಬಿಯರ್‌ಗೆ ಹೆಚ್ಚಿದ ಬೇಡಿಕೆ ಕಾಣಿಸುತ್ತಿದ್ದು, ಸಂಜೆ ವೇಳೆಗೆ ಅನೇಕ ಅಂಗಡಿಗಳಲ್ಲಿ ಸ್ಟಾಕ್ ಕಡಿಮೆಯಾಗುತ್ತಿರುವ ಪರಿಸ್ಥಿತಿ ಉಂಟಾಗಿದೆ.

ಬಾರ್ ಮಾಲೀಕರು ಹೇಳುವಂತೆ, ತಾಪಮಾನ ಹೆಚ್ಚಾದಂತೆ ಗ್ರಾಹಕರು ಹೆಚ್ಚು ಶೀತಲ ಪಾನೀಯಗಳತ್ತ ಆಕರ್ಷಿತರಾಗುತ್ತಾರೆ. ಅದರಲ್ಲೂ ಬಿಯರ್‌ಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಸರಬರಾಜು ಆಗದೇ ಇರುವುದರಿಂದ ವ್ಯಾಪಾರಿಗಳಿಗೆ ಸ್ವಲ್ಪ ತೊಂದರೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ರಮ್ ಮತ್ತು ಬ್ರ್ಯಾಂಡಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದ್ದು, ಕೆಲವು ಅಂಗಡಿಗಳಲ್ಲಿ ಈ ಮದ್ಯಗಳ ಬೇಡಿಕೆ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಹವಾಮಾನದಲ್ಲಿನ ಬದಲಾವಣೆಗಳು ಮದ್ಯದ ಆಯ್ಕೆ ಮೇಲೆ ನೇರ ಪರಿಣಾಮ ಬೀರುತ್ತಿರುವುದು ಈ ಬೆಳವಣಿಗೆಯಿಂದ ಗೋಚರಿಸುತ್ತದೆ.

ಮದ್ಯ ವ್ಯಾಪಾರಿಗಳ ಅಭಿಪ್ರಾಯದಂತೆ, ಬೇಸಿಗೆ ಮುಂದುವರಿದಂತೆ ಬಿಯರ್ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಸರಬರಾಜು ಹೆಚ್ಚಿಸುವ ಕುರಿತು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ, ಬೇಸಿಗೆಯ ತಾಪಮಾನ ಏರಿಕೆ ಮದ್ಯ ಮಾರುಕಟ್ಟೆಯಲ್ಲೂ ಬದಲಾವಣೆ ತರಿದ್ದು, ಬಿಯರ್ ಈಗ ಮದ್ಯಪ್ರಿಯರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ.

About The Author