Sunday, June 22, 2025

Latest Posts

ಸನ್‍ರೈಸರ್ಸ್ ಎದುರು ಆರ್‍ಸಿಬಿಗೆ ಹೀನಾಯ ಸೋಲು

- Advertisement -

ಮುಂಬೈ:ವೇಗಿ ಮಾರ್ಕೊ ಜೆನೆಸೆನ್ ದಾಳಿಗೆ ತತ್ತರಿಸಿದ ಆರ್‍ಸಿಬಿ ಸನ್‍ರೈಸರ್ಸ್ ಎದುರು 9 ವಿಕೆಟ್‍ಗಳ ಹೀನಾಯ ಸೋಲು ಅನುಭವಿಸಿದೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು.


ಆರ್‍ಸಿಬಿಗೆ ವೇಗಿ ಮಾರ್ಕೊ ಜೆನೆಸೆನ್ ಆಘಾತದ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ (5)ಹಾಗೂ ಅನೂಜ್ ರಾವತ್ (0) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ನಂತರ ಬಂದ ವಿರಾಟ್ ಕೊಹ್ಲಿ (0) ಮತ್ತೆ ವೈಫಲ್ಯ ಅನುಭವಿಸಿ ಜೆನೆಸೆನ್‍ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್‍ವೆಲ್ 12 ರನ್ ಗಳಿಸಿ ಕೇನ್ ವಿಲಿಯಮ್ಸನ್‍ಗೆ ಕ್ಯಾಚ್ ಕೊಟ್ಟರು.

ಸೂಯಶ್ ಪ್ರಭುದೇಸಾಯಿ ಸುಚಿತ್‍ಗೆ ಬಲಿಯಾದರು. ಶಾಬಾಜ್ ಅಹಮದ್ ವಿಕೆಟ್ ಕೀಪರ್ ಪೂರನ್‍ಗೆ ಕ್ಯಾಚ್ ಕೊಟ್ಟರು. ದಿನೇಶ್ ಕಾರ್ತಿಕ್ (0), ಹರ್ಷಲ್ ಪಟೇಲ್ 0, ವನಿಂದು ಹಸರಂಗ 8.

ಜೋಶ್ ಹೆಜ್ಲ್‍ವುಡ್ ಅಜೇಯ 3 ರನ್ ಗಳಿಸಿದರು. ಆರ್‍ಸಿಬಿ 16.1 ಓವರ್‍ಗಳಲ್ಲಿ 68 ರನ್‍ಗಳಿಗೆ ಸರ್ವಪತನ ಕಂಡಿತು. ಸನ್‍ರೈಸರ್ಸ್ ಪರ ಜೆನೆಸೆನ್ 3, ನಟರಾಜನ್ 3, ಜಗದೀಶ್ ಸುಚಿತ್ 2, ಭುವನೇಶ್ವರ್ ಹಾಗೂ ಉಮ್ರಾನ್ ಮಲ್ಲಿಕ್ ತಲಾ 1 ವಿಕೆಟ್ ಪಡೆದರು.

69 ರನ್‍ಗಳ ಕಡಿಮೆ ಟಾರ್ಗೆಟ್ ಬೆನ್ನತ್ತಿದ ಸನ್‍ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ 47, ಕೇನ್ ವಿಲಿಯಮ್ಸನ್ ಅಜೇಯ 16, ರಾಹುಲ್ ತ್ರಿಪಾಠಿ ಅಜೆಯ 7 ರನ್ ಗಳಿಸಿದರು.

ಸನ್‍ರೈಸರ್ಸ್ 8 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ ಪೇರಿಸಿ ಗೆಲುವು ದಾಖಲಿಸಿತು. 3 ವಿಕೆಟ್ ಪಡೆದ ಜೆನೆಸೆನ್ ಪಂದ್ಯ ಶೇಷ್ಠ ಪ್ರಶಸ್ತಿ ಪಡೆದರು. ಸತತ ಐದನೆ ಗೆಲುವು ದಾಖಲಿಸಿದ ಸನ್‍ರೈಸರ್ಸ್ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆಯಿತು.

- Advertisement -

Latest Posts

Don't Miss