ಸೂಪರ್ ಸಿಎಂ ಶ್ರೀ ಸೂರ್ಜೇವಾಲಾ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ: ನಿಖಿಲ್ ಕುಮಾರ್ ವ್ಯಂಗ್ಯ

Political News: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿಂದ, ಹಲವು ಜನರಿಗೆ ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ.

ಅದಕ್ಕೆ ತಕ್ಕಂತೆ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು, ಜನ ತಾವು ಮನೆಗೆ ಹೋಗಿ ತಲುಪುವವರೆಗೂ ಜೀವ ಕೈಯಲ್ಲೇ ಹಿಡಿದು ಹೋಗುತ್ತಿದ್ದಾರೆ.

ಇನ್ನು ಕೆಲ ಐಟಿ ಕಂಪನಿಗಳು ರಸ್ತೆ ಗುಂಡಿ ಕಾರಣಗಳಿಂದ ನಾವು ರಾಜ್ಯ ಬಿಡುತ್ತಿದ್ದೇವೆ ಎಂದು ಹೇಳುತ್ತಿದೆ. ಅಂಥವರನ್ನು ಹೈದರಾಬಾದ್ ಆಮಂತ್ರಿಸುತ್ತಿದೆ. ಇಷ್ಟು ವರ್ಷದವರೆಗೂ ಐಟಿ ಸಿಟಿ, ಶ್ರೀಮಂತ ನಗರ ಎನ್ನಿಸಿಕ“ಂಡಿರುವ ಬೆಂಗಳೂರು, ಇದೀಗ ರಸ್ತೆ ಗುಂಡಿಗಳಿಂದಾಗಿ, ಅಪಖ್ಯಾತಿಗೆ ಗುರಿಯಾಗುತ್ತಿದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಎಂದು ಬಿಜೆಪಿಗರು, ಜೆಡಿಎಸ್‌ನವರು ಕಿಡಿ ಕಾರುತ್ತಿದ್ದಾರೆ.

ಇಂದು ಬೆಂಗಳೂರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸೂರ್ಜೇವಾಲ ಭೇಟಿ ನೀಡಿದ್ದು, ಈ ಭೇಟಿಯನ್ನು ಜೆಡಿಎಸ್ ಯುವ ನಾಯಕ ನಿಖಿಲ್ ವ್ಯಂಗ್ಯ ಮಾಡಿದ್ದಾರೆ.

ಸೂಪರ್ ಸಿಎಂ ಶ್ರೀ ಸೂರ್ಜೇವಾಲಾ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ. ಸ್ಟಾರ್ ಹೋಟೆಲ್ ಒಳಗೆ ಇದ್ದು ನಿಮ್ಮ ಸಭೆಗಳನ್ನು ಅಲ್ಲಿಯೇ ಮುಗಿಸುವುದು ಉತ್ತಮ. ಹೊರಗೆ ಬಂದರೆ ಬೆಂಗಳೂರಿನ ರೋಲರ್-ಕೋಸ್ಟರ್ ರಸ್ತೆಗಳಿಗೆ ಸುರಕ್ಷತಾ ಸಾಧನಗಳು ಮತ್ತು ಕಸದ ದುರ್ವಾಸನೆಗೆ ಮೂಗಿನ ಕ್ಲಿಪ್ ಬೇಕಾಗುತ್ತದೆ. ನೆನಪಿಡಿ, ನಿಮ್ಮ ಡಿಸಿಎಂಗೆ ದೂರು ನೀಡಬೇಡಿ, ಅವರು ಅದನ್ನು “ಬ್ಲ್ಯಾಕ್‌ಮೇಲ್” ಎಂದು ಕರೆಯುತ್ತಾರೆ ಎಂದು ನಿಖಿಲ್ ವ್ಯಂಗ್ಯ ಮಾಡಿದ್ದಾರೆ.

About The Author