- Advertisement -
www.karnatakatv.net :ಐಪಿಎಲ್ ದ್ವಿತೀಯ ಹಂತದ ಪಂದ್ಯವು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆಯಿಂದ ಶುರುವಾಗಿದ್ದು, ಮೊದಲ ಪಂದ್ಯವು ಚೆನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮದ್ಯ ನಡೆಯಿತು.
ಈ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ವಿಶೇಷ ದಾಖಲೆ ನಿರ್ಮಿಸಿದ್ದು, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಋತುರಾಜ್ ಮೊದಲನೇ ಸ್ಥಾನದಲ್ಲಿದ್ದಾರೆ. ಆರಂಭಿಕರಾಗಿ ಬ್ಯಾಟಿಂಗ್‌ಗೆ ಬಂದಿದ್ದ ಋತುರಾಜ್ ಗಾಯಕ್ವಾಡ್ 58 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಇದರಲ್ಲಿ 9 ಫೋರ್ಸ್, 4 ಸಿಕ್ಸರ್ ಸೇರಿತ್ತು. ಋತುರಾಜ್ 2ನೇ ಅಂತಾರಾಷ್ಟ್ರೀಯ ಟೀ ಟ್ವೆಂಟಿ ಪಂದ್ಯದಲ್ಲಿ 35 ರನ್ ಗಳಿಸಿ 14 ಐಪಿಎಲ್ ಪಂದ್ಯದಲ್ಲಿ 488 ರನ್ ಗಳಿಸಿದ್ದಾರೆ.
- Advertisement -