ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪಕ್ಷವನ್ನ ಮುಂಬರುವ ಜನವರಿಯಲ್ಲಿ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ಈ ಬಾರಿಯ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ.
ಹಲವಾರು ಪಕ್ಷಗಳನ್ನ ಬೆಂಬಲಿಸಿದ ನಂತರ ರಜನಿಕಾಂತ್ ತಮ್ಮದೇ ಆದ ರಾಜಕೀಯ ಪಕ್ಷ ರಜನಿ ಮಕ್ಕಳ್ ಮಂಡ್ರಂ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ರಜನಿ ಪಕ್ಷ ಲಾಂಚ್ ಆಗಲಿದೆ ಎಂದು ಘೋಷಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ರಜನಿಕಾಂತ್, ಜನರ ಬೆಂಬಲದಿಂದ ನಾವು ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇವೆ. ತಮಿಳುನಾಡಿನಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕ ಒಂದು ಹೊಸ ಬಗೆಯ ರಾಜಕೀಯ ಬರಲಿದೆ. ಭ್ರಷ್ಟಾಚಾರ ಮತ್ತು ಧರ್ಮಬೇಧವಿಲ್ಲದ ಪಕ್ಷ ಇದಾಗಿದೆ ಎಂದು ರಜನಿಕಾಂತ್ ಭರವಸೆ ನೀಡಿದ್ದಾರೆ.
ಇನ್ನು ತಮಿಳುನಾಡಿಗರು, ರಜನಿಕಾಂತ್‌ಗೆ ಫುಲ್ ಸಪೋರ್ಟ್ ಮಾಡುತ್ತಿದ್ದು, ಕೆಲವರ ಪ್ರಕಾರ, ರಜನಿಕಾಂತ್ ಪಕ್ಷ ಚುನಾವಣೆಗಿಳಿದರೆ, ಡಿಎಂಕೆ ಪಕ್ಷ ಮನೆಗೆ ಹೋಗುತ್ತದೆ ಅಂತಾನೂ ಹೇಳಲಾಗಿದೆ. ಆ ರೇಂಜ್‌ಗೆ ತಮಿಳಿಗರು, ತಲೈವಾಗೆ ಸಪೋರ್ಟ್ ಮಾಡ್ತಿದ್ದಾರೆ.