ಪಿಎಸ್‌ಐ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಇದೆ – ಸಿದ್ಧರಾಮಯ್ಯ

ಮೈಸೂರು: ಪಿಎಸ್‌ಐ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಇದೆ. ಪರಿಕ್ಷೆಯಲ್ಲಿ ಯಾರು ಅಕ್ರಮ ಮಾಡಿದ್ದಾರೆ, ಯಾರು ಸರಿಯಾಗಿ ಬರೆದಿದ್ದಾರೆ ಗೊತ್ತಾಗಲ್ಲ. ತನಿಖೆ ಮುಂದುವರಿದು 20 ಜನರ ಬಂಧನ ಆಗಿದೆ. ಹೀಗಾಗಿ ಮರು ಪರೀಕ್ಷೆ ಮಾಡುವುದು ಸರಿ ಇದೆ. ಆದರೆ ಈಗ ಪರೀಕ್ಷೆ ಬರೆದಿರುವ ಯಾರ ಬಳಿಯೂ ಪರಿಕ್ಷಾ ಶುಲ್ಕ ಪಡೆಯಬಾರದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಟಿ. ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಸ್ಲಿಂಮರ ಮಟನ್ ಸ್ಟಾಲ್, ಕಸಾಯಿಖಾನೆ ಮುಚ್ಚಲು ನೋಟಿಸ್ ಕೊಟ್ಟಿರುವ ವಿಚಾರ. ಕೇವಲ ಮುಸ್ಲೀಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿರಾ. ಒಂದು ಧರ್ಮ, ಒಂದು ಜಾತಿ ಟಾರ್ಗೆಟ್ ಮಾಡಬೇಡಿ. ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತಿದ್ದರೆ ಮಾಡಿ ಎಂದು ಹೇಳಿದರು.

ಕಾನೂನು ಎಲ್ಲರಿಗೂ ಒಂದೇ. ರಾಜಕೀಯ ಲಾಭಕ್ಕಾಗಿ ಒಂದು ಧರ್ಮವನ್ನ ಟಾರ್ಗೆಟ್ ಮಾಡಬೇಡಿ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೆ ತಪ್ಪು ಮಾಡಿದ್ರು ಕ್ರಮ ತಗೊಳ್ಳಿ. ಒಂದು ವರ್ಗವನ್ನ ಟಾರ್ಗೆಟ್ ಮಾಡಿದರೆ ಮತ ದೃವೀಕರಣ ಆಗತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಅದು ಅಸಾಧ್ಯ. ಈಗಾಗಲೇ ಅವರಿಗೆ ತಿರುಗುಬಾಣ ಆಗಿದೆ ಎಂದು ತಿಳಿಸಿದರು.

ಸುಮ್ನೆ ಏನೇನೋ ಮಾತಾಡೋದಲ್ಲ. ನಮ್ಮ ಕಾಲದಲ್ಲೂ ಪಿಎಸ್‌ಐ ನೇಮಕಾತಿ ಆಯ್ತು.  ಬೇರೆ ಬೇರೆ ನೇಮಕಾತಿಗಳಾದವು.
ಆಗೆಲ್ಲ ಇಂತಹ ಭ್ರಷ್ಟಾಚಾರ ನಡೆದಿತ್ತ ? ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ. ಪಿಎಸ್‌ಐ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಇದೆ.  ಪರಿಕ್ಷೆಯಲ್ಲಿ ಯಾರು ಅಕ್ರಮ ಮಾಡಿದ್ದಾರೆ, ಯಾರು ಸರಿಯಾಗಿ ಬರೆದಿದ್ದಾರೆ ಗೊತ್ತಾಗಲ್ಲ. ತನಿಖೆ ಮುಂದುವರಿದು 20 ಜನರ ಬಂಧನ ಆಗಿದೆ. ಹೀಗಾಗಿ ಮರು ಪರೀಕ್ಷೆ ಮಾಡುವುದು ಸರಿ ಇದೆ. ಆದರೆ ಈಗ ಪರೀಕ್ಷೆ ಬರೆದಿರುವ ಯಾರ ಬಳಿಯೂ ಪರಿಕ್ಷಾ ಶುಲ್ಕ ಪಡೆಯಬಾರದು. ಬಿಜೆಪಿ ದುರಾಡಳಿತದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ಕ್ಷಣವೂ ಪದವಿಯಲ್ಲಿ ಮುಂದುವರಿಯಬಾರದು ಎಂದು ವಾಗ್ದಾಳಿ ನಡೆಸಿದರು.

About The Author