- Advertisement -
ಇವತ್ತು ಭಾರತ್ ಬಂದ್ ಇದ್ದ ಪ್ರಯುಕ್ತ ತುಮಕೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಪ್ರಧಾನಿ ಮೋದಿಯ ಅಣುಕು ಶವ ಯಾತ್ರೆ ಮಾಡಿ, ಆ ಪ್ರತಿಮೆಯನ್ನ ಸುಟ್ಟರು.

ಇನ್ನು ಇದೇ ವೇಳೆ ರಾಷ್ಟ್ರಪತಿಗಳಿಗೆ ರೈತರು ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಕೃಷಿ ನೀತಿಗಳನ್ನ ಕೈಬಿಡಲು ಒತ್ತಾಯಿಸಲಾಯಿತು. ಭಾರತ ಕೃಷಿ ಪ್ರಧಾನ ಮತ್ತು ಕೃಷಿ ಆದಾರಿತ ದೇಶವಾಗಿದ್ದು, ಇಂತಹ ದೇಶಕ್ಕೆ ಕೃಷಿ ಮಾರಕವಾದ, ಕೃಷಿಯನ್ನೇ ದಿವಾಳಿ ಮಾಡುವ ಕಾನೂನುಗಳನ್ನು ಹೊರಡಿಸಿರುವ ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮತ್ತು ಈ ಕೆಳಗಿನ ಕಾನೂನುಗಳನ್ನು ಕೈಬಿಡಬೇಕಾಗಿ ವಿನಂತಿಸಲಾಗಿದೆ.

- ಭೂ ಸುಧಾರಣಾ ನೀತಿ, 2. ಭೂಸ್ವಾಧೀನ ರೀತಿ, 3.ಕು.ಉ.ಮಾರುಕಟ್ಟೆ ಕಾಯ್ದೆ, 4. ವಿದ್ಯುತ್ ಖಾಸಗೀಕರಣ ಕಾಯ್ದೆ, 5. ನಿತ್ಯ ಬಳಕೆ ವಸ್ತುಗಳ ನೀತಿ
ಈ ಕಾಯ್ದೆಗಳನ್ನ ಕೈಬಿಡಬೇಕೆಂದು ರೈತರು ವಿನಂತಿಸಿದ್ದಾರೆ.

- Advertisement -