Saturday, April 12, 2025

Latest Posts

ಶಾರುಖ್ ಖಾನ್ ಸಿನಿಮಾದಿಂದ ಮೋಸ- ಸುಪ್ರೀಂ ಕೋರ್ಟ್ ದಂಡ..!

- Advertisement -

www.karnatakatv.net: 2017ರಲ್ಲಿ ತೆರೆ ಕಂಡಿದ್ದ ಬಾಲಿವುಡ್ ಚಿತ್ರ ಜಬ್ರಾ ಫ್ಯಾನ್ ಅಭಿಮಾನಿಗಳಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಈ ಚಿತ್ರದಲ್ಲಿ ಶಾರುಖ್ ಖಾನ್ ಸಣಕಲು ದೇಹದ ಸಾಮಾನ್ಯ ಅಭಿಮಾನಿಯಾಗಿ ಕಾಣಿಸಿಕೊಂಡಿದ್ರು. ಚಿತ್ರ ರಿಲೀಸ್ ಆಗೋ ಮುನ್ನ ಬಿಡುಗಡೆಯಾಗಿದ್ದ ಟೈಟಲ್ ಸಾಂಗ್ ನೋಡಿ ಶಾರೂಖ್ ಅಭಿಮಾನಿಗಳು ವಾರೆವ್ಹಾ ಅಂದಿದ್ರು. ಅಷ್ಟರಮಟ್ಟಿಗೆ ಡಿಫರೆಂಟ್ ಆಗಿ ಶಾರೂಖ್ ಈ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ರು. ಸಿನಿಮಾ ಥಿಯೇಟರ್ ನಲ್ಲಿ ಈ ಸಾಂಗ್ ನೋಡ್ಬೇಕಪ್ಪಾ ಅಂತ ಅಭಿಮಾನಿಗಳು ಕಾತುರರಾಗಿದ್ರು.

ಹೀಗೆಯೇ ಮಹಾರಾಷ್ಟ್ರದ ಶಾರೂಖ್ ಖಾನ್ ಅಭಿಮಾನಿ ಅಫ್ರೀನ್ ಫಾತೀಮಾ ಎಂಬ ಶಿಕ್ಷಕಿ ಕೂಡ ಅಂದುಕೊಂಡಿದ್ರು, ಮನೆ ಮಂದಿಯ ಜೊತೆ ಜಬ್ರಾ ಫ್ಯಾನ್ ನೋಡೋಕೆ ಹೋಗಿದ್ದ ಆ ಮಹಿಳೆಗೆ ಚಿತ್ರ ಮುಗಿಯೋ ವರೆಗೂ ಆ ಸಾಂಗ್ ನೋಡೋಕೆ ಸಾಧ್ಯವಾಗಲಿಲ್ಲ. ಯಾಕಂದ್ರೆ ಚಿತ್ರ ತಂಡ ಆ ಹಾಡನ್ನು ಕಾರಣಾಂತರ ಗಳಿಂದ ಕಟ್ ಮಾಡಿತ್ತು. ಇನ್ನು ಈ ಚಿತ್ರದ ಸಾಂಗನ್ನು ತೆರೆ ಮೇಲೆ ನೋಡಲೇಬೇಕು ಅಂತ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಬಂದಿದ್ದ ಫಾತೀಮಾಗೆ ನಿರಾಶೆಯಾಯ್ತು. ಅಲ್ಲದೆ ಜೊತೆಗೆ ಬಂದಿದ್ದ ಆಕೆಯ ಮಕ್ಕಳೂ ಕೂಡ ಬೇಸರಪಟ್ಟು ಮನೆಗೆ ನಡೆದ್ರು. ಊಟವನ್ನೂ ಮಾಡದೆ ಮಕ್ಕಳು ಮಲಗಿದ್ರಂತೆ. ಇದರಿಂದಾಗಿ ಮರುದಿನ ಮಕ್ಕಳಿಗೆ ಗ್ಯಾಸ್ಟ್ರಿಕ್ ಆಗಿ ಆಸ್ಪತ್ರೆ ಸೇರುವಂತಾಯ್ತು.

ಈ ವಿಚಾರವನ್ನ ಅಷ್ಟಕ್ಕೇ ಬಿಡದ ಫಾತೀಮಾ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋದ್ರು.

ಯಶ್ ರಾಜ್ ಫಿಲಂಸ್ಗೆ 10 ಸಾವಿರ ಹಾಗೂ ಫಾತೀಮಾ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡಬೇಕು ಅಂತ ಹೇಳಿತು. ಈ ಆದೇಶವನ್ನು ಪ್ರಶ್ನಿಸಿ ಚಿತ್ರ ನಿರ್ಮಿಸಿದ್ದ ಯಶ್ ರಾಜ್ ಫಿಲಂಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ  ಸಿನಿಮಾ ಟ್ರೇಲರ್ನಲ್ಲಿ ಒಂದು ತೋರಿಸಿ, ಸಿನಿಮಾದಲ್ಲಿ ಅದನ್ನು ತೋರಿಸದೇ ಇದ್ದ ಕಾರಣಕ್ಕೆ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆ ನೀಡಿದ್ದ ಆದೇಶವನ್ನೇ ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ. ದೂರು ದಾಖಲಿಸಿದ ಫಾತೀಮಾಗೆ 15 ಸಾವಿರ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

ಒಟ್ಟಾರೆ ಬಾಲಿವುಡ್ನ ಹೈ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಯಶ್ ರಾಜ್ ಫಿಲಂಸ್ ಗೆ ಸದ್ಯ ದಂಡ ತೆತ್ತು ಮುಖಭಂಗವಾಗಿದೆ.

ಫಿಲಂ ಬ್ಯೂರೋ , ಕರ್ನಾಟಕ ಟಿವಿ

- Advertisement -

Latest Posts

Don't Miss