News: ಉದ್ಯೋಗ ಮಾಡುವವರು ಆಫೀಸಿಗೆ ಹೋದರೆ, ಅವರು ವಾಪಸ್ ಬರುವವರೆಗೂ ಮನೆಯವರು ಜೀವ ಕೈಯಲ್ಲಿ ಹಿಡಿದು ಕೂರಬೇಕಾಗುತ್ತದೆ. ಏಕೆಂದರೆ, ಆ ವ್ಯಕ್ತಿ ಆರಾಮವಾಗಿ ಬಂದರೆ ಸಾಕು ಅಂತಾ. ಏಕೆಂದರೆ, ಆ ಮನೆಯ ಜವಾಾಬ್ದಾರಿ ಆ ವ್ಯಕ್ತಿಯ ಕೈಯಲ್ಲಿರುತ್ತದೆ. ಆ ವ್ಯಕ್ತಿಗೇನಾದರೂ ಆದರೆ, ಆ ಸಂಸಾರದ ಸ್ಥಿತಿ ಅದೋಗತಿಯಾಗುತ್ತದೆ. ಆದರೆ ಸುಪ್ರೀಂ ಇದೀಗ ಪವರ್ಫುಲ್ ಆದೇಶ ನೀಡಿದ್ದು, ಇದರಿಂದ ಇಂಥ ಕುಟುಂಬದವರಿಗೆ ತುಂಬಾ ಸಹಕಾರಿಯಾಗಲಿದೆ.
ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ನೀವು ಆಫೀಸಿಗೆ ಹೋಗುವಾಗ ಅಥವಾ ಬರುವಾಗ ಅಥವಾ ಆಫೀಸಿನಲ್ಲಿ ಕೆಲಸ ಮಾಡುವಾಗ, ನಿಮ್ಮ ಜೀವಕ್ಕೇನಾದರೂ ಹೆಚ್ಚು ಕಡಿಮೆಯಾದರೆ, ಅದಕ್ಕೆ ಆಫೀಸಿನವರು ಪರಿಹಾರ ನೀಡಬೇಕು ಎಂದು ಆದೇಶ ನೀಡಲಾಗಿದೆ. ಅಪಘಾತವಾದರೆ, ಹೃದಯಾಘಾತವಾದರೆ ಹೀಗೆ ಏನೇ ಆರೋಗ್ಯ ಸಮಸ್ಯೆ ಆದರೂ ಅದಕ್ಕೆ ಆಫೀಸಿನವರೇ ಪರಿಹಾರ ನೀಡಬೇಕು. ಕೆಲಸದ ವಿಷಯಕ್ಕೆ ಎಲ್ಲಾದರೂ ಹೋದಾಗ, ಏನೇ ಆದರೂ ಕೂಡ, ಅದಕ್ಕೂ ಆಫೀಸಿನವರೇ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ.
ಆದರೆ ಉದ್ಯೋಗಿಗಳು ಕೂಡ ಕೆಲವು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಅವರು Traffic Rules ಫಾಲೋ ಮಾಡಬೇಕು. ಆಫೀಸ್ ವೇಳೆ, ಪಂಚ್ ಮಾಡಿ, ತಿರುಗಾಡಲು ಹೋಗುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅಥವಾ ಬ್ರೇಕ್ ತೆಗೆದುಕ“ಂಡು, ಸುತ್ತಾಡಲೂ ಹೋಗುವವರಿದ್ದಾರೆ. ಇಂಥ ವೇಳೆ ನಿಮಗೇನಾದರೂ ಆದರೆ, ಆಫೀಸಿನವರು ನಿಮ್ಮ ಜವಾಬ್ದಾರಿ ತೆಗೆದುಕ“ಳ್ಳುವುದಿಲ್ಲ. ಹಾಗಾಗಿ ಕೆಲಸಕ್ಕೆ ಹೋಗುವಾಗ, ಬರುವಾಗ, ಆಫೀಸಿನಲ್ಲಿರುವಾಗ ಎಲ್ಲಾ ರೂಲ್ಸ್ ಫಾಲೋ ಮಾಡಿದಾಗ ಮಾತ್ರ, ನಿಮಗೇನಾದರೂ ಆದಲ್ಲಿ ಆಫೀಸು ಅದರ ಜವಾಬ್ದಾರಿ ತೆಗೆದುಕ“ಳ್ಳುತ್ತದೆ.