Thursday, August 21, 2025

Latest Posts

ಭಾರತೀಯ ಕ್ರಿಕೇಟ್ ತಂಡ ಏಕೆ ಪಾಕಿಸ್ತಾನಕ್ಕೆ ಹೋಗುತ್ತಿಲ್ಲವೆಂದು ಹೇಳಿದ ಸೂರ್ಯಕುಮಾರ್‌

- Advertisement -

Sports News: ಈ ಬಾರಿ ಚಾಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಾಗಾಗಿ ಪಾಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆದರೆ, ಭಾರತ ತಂಡ ಬರುವುದಿಲ್ಲವೆಂದು ಬಿಸಿಸಿಐ ಹೇಳಿದೆ. ಅಲ್ಲದೇ ಪಂದ್ಯವನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಬೇಕು. ಶ್ರೀಲಂಕಾದಲ್ಲಿ ನಡೆಸಿದರೆ, ಭಾಗವಹಿಸುತ್ತೇವೆ ಎಂದಿದ್ದಾರೆ.

ಇನ್ನು ಭಾರತೀಯ ಕ್ರಿಕೇಟ್ ತಂಡದ ಆಟಗಾರ, ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ವೀಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಭಾರತೀಯ ಕ್ರಿಕೇಟ್‌ ತಂಡದ ಆಟಗಾರರು ಏಕೆ ಪಾಕಿಸ್ತಾನಕ್ಕೆ ಬರುವುದಿಲ್ಲವೆಂದು ಕೇಳಿದ್ದಕ್ಕೆ, ಸೂರ್ಯಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸೌತ್‌ಆಫ್ರಿಕಾದಲ್ಲಿ ಪಾಕ್ ಅಭಿಮಾನಿಗಳನ್ನು ಭೇಟಿಯಾಗಿರುವ ಸೂರ್ಯಕುಮಾರ್‌ಗೆ ಪಾಕ್‌ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಪ್ರಶ್ನೆ ಕೇಳಿದ ಅಭಿಮಾನಿಗಳು, ನೀವು ಯಾಕೆ ನಮ್ಮ ದೇಶಕ್ಕೆ ಬರುತ್ತಿಲ್ಲ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್, ಅದ್ಯಾವುದು ನಮ್ಮ ಕೈಯಲ್ಲಿಲ್ಲ. ಅದನ್ನೆಲ್ಲ ಟೀಂ ಇಂಡಿಯಾ ಕ್ರಿಕೇಟ್ ಆಟಗಾರರು ನಿರ್ಧರಿಸುವುದಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ನಿರ್ಧರಿಸುತ್ತದೆ ಎಂದಿದ್ದಾರೆ.

- Advertisement -

Latest Posts

Don't Miss