Movie News: ಸದಾ ಒಂದಲ್ಲ ವಿಷಯಕ್ಕೆ ಸುದ್ದಿಯಾಗುವ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಈ ಬಾರಿ ಬರೀ ಸುದ್ದಿಯಾಗುತ್ತಿಲ್ಲ. ಬದಲಾಗಿ, ಜೈಲು ಸೇರುವ ಆತಂಕದಲ್ಲಿದ್ದಾರೆ. ಏಕೆಂದರೆ, ರಾಮ್‌ಗೋಪಾಲ್ ವರ್ಮಾ ಆಂಧ್ರ ಸಿಎಂ ವಿರುದ್ಧ ಟ್ವೀಟ್ ಮಾಡಿದ್ದು, ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಫ್‌ಐಆರ್ ದಾಖಲಿಸಲಾಗಿದೆ.
ಟಿಡಿಪಿ ಮುಖಂಡರೊಬ್ಬರು ವರ್ಮಾ ವಿರುದ್ಧ ದೂರು ದಾಖಲಿಸಿದ್ದು, ವರ್ಮಾರನ್ನು ಅರೆಸ್ಟ್ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ್ದು, ಅವರ ವಿರುದ್ಧ ಟ್ವೀಟ್ ಮಾಡಿದ್ದರು. ಬರೀ ನಾಯ್ಡು ವಿರುದ್ಧ ಮಾತ್ರವಲ್ಲದೇ, ಮಗ ಸೊಸೆಯ ವಿರುದ್ಧವೂ ಮಾನಹಾನಿಕರವಾದ ಟ್ವೀಟ್ ಮಾಡಿದ್ದರು.
ಹೀಗಾಗಿ ವರ್ಮಾ ಅವರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಕ್ಕೆ, ವೈಸಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ವರ್ಮಾರನ್ನು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.
ಕೆಲ ದಿನಗಳ ಹಿಂದೆ ರಾಮ್ ಗೋಪಾಲ್ ವರ್ಮಾರ ತಲೆ ಕಡಿದರೆ, 1 ಕೋಟಿ ಹಣ ಕೊಡುವುದಾಗಿ ಓರ್ವ ಸಂದರ್ಶನವೊಂದರಲ್ಲಿ ಹೇಳಿದ್ದ. ಅವನ ವಿರುದ್ಧ ವರ್ಮಾ ದೂರು ನೀಡಿದ್ದರು. ಇದೀಗ ವರ್ಮಾ ವಿರುದ್ಧ ದೂರು ದಾಖಲಾಗಿದೆ.