- Advertisement -
ಬೆಂಗಳೂರು: ನಗರದಲ್ಲಿ ತಲೆಮರೆಸಿಕೊಂಡಿದ್ದಂತ ಶಂಕಿತ ತಾಲಿಬಾನ್ ಉಗ್ರ ತಾಲಿಬ್ ಹುಸೇನ್ ಬಂಧಿಸುವಲ್ಲಿ, ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಶ್ಮೀರದಿಂದ ಬೆಂಗಳೂರಿಗೆ ಬಂದು, ನಗರದ ಶ್ರೀರಾಂಪುರದಲ್ಲಿ ವಾಸವಾಗಿ, ಓಕಳಿಪುರಂ ನಲ್ಲಿನ ಮಸೀದಿಯೊಂದರಲ್ಲಿ ಪಾಠ-ಪ್ರವಚನ ನೀಡುತ್ತಿದ್ದಂತ ತಾಲಿಬಾನ್ ಶಂಕಿತ ಉಗ್ರ ತಾಲಿಬ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉಗ್ರ ತಾಲಿಬ್ ಹುಸೇನ್, ನಗರದಲ್ಲಿ ತಾಲಿಕ್ ಎಂಬುದಾಗಿ ಹೆಸರು ಬದಲಾವಣೆ ಮಾಡಿಕೊಂಡು, ಕಾಶ್ಮೀರದಿಂದ ಬರುವಾಗ ಪೊಲೀಸ್ ಪತ್ನಿಯನ್ನು ಕರೆತಂದಿದ್ದನು. ಆಕೆಯೊಂದಿಗೆ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಇವರಿಗೆ ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷಾ ಆಶ್ರಯ ನೀಡಿದ್ದರು.
- Advertisement -