film News
ಬೆಂಗಳೂರು(ಫೆ.8): ಖ್ಯಾತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತರೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮಿ ಅವರು ಸೆಪ್ಟೆಂಬರ್ 1ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಭಾರೀ ಸದ್ದು ಮಾಡಿತ್ತು ಕೂಡ, ಇಬರಿಬ್ಬರ ಫೋಟೋಗಳಂತೂ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿ ಸಮಯದಲ್ಲೂ ವೈರಲ್ ಆಗುತ್ತಲೇ ಇರುತ್ತೆ. ಎಲ್ಲಿ ನೋಡಿದರೂ ಈ ಇಬ್ಬರದ್ದೇ ಮಾತಾಗಿತ್ತು. ಇದೀಗ ಈ ಜೋಡಿಗಳು ಮದುವೆಯಾಗಿ ತಿಂಗಳುಗಳೇ ಕಳೆದಿದೆ. ಇದೀಗ ನಟಿ ಮಹಾಲಕ್ಷ್ಮಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. ಒಂದು ಫೋಟೋದಲ್ಲಿ ಪ್ರೇಕ್ಷಕರಿಗೆ ಈ ಡೌಟ್ ಬಂದಿದೆ.
ನಟಿ ಮಹಾಲಕ್ಷ್ಮಿ ಸುಂದರವಾಗಿ, ಗ್ಲಾಮರಸ್ಸಾಗಿ ಇದ್ದಾರೆ. ಅದರೆ ನಿರ್ಮಾಪಕ ರವೀಂದ್ರ ಧಡೂತಿಯಾಗಿದ್ದಾರೆ. ಹಾಗಾಗಿ ಇವರ ಜೋಡಿ ನೋಡುವ ಜನರಿಗೆ ಒಪ್ಪಿಯಾಗಿಲ್ಲ. ಹಾಗಾಗಿ ಈ ಜೋಡಿ ಟ್ರೋಲ್‌ಗೂ ತುತ್ತಾಗಿದೆ. ನಟಿಯ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾಲಕ್ಷ್ಮಿ ಹಣಕ್ಕಾಗಿ ವಿವಾಹವಾಗಿದ್ದಾರೆ ಎಂದೆಲ್ಲ ಟ್ರೋಲ್ ಮಾಡಲಾಗುತ್ತಿದೆ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ನಿಜವೇ ಆಗಿದೆ ಎನ್ನುತ್ತಿದ್ದಾರೆ ಕೆಲವು ನೆಟ್ಟಿಗರು.
ರವೀಂದ್ರ ಚಂದ್ರಶೇಖರ್ ಭಾರಿ ಧಡೂತಿ ವ್ಯಕ್ತಿ. ನಟಿ ಮಹಾಲಕ್ಷ್ಮಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ದಪ್ಪ ಇದ್ದಾರೆ ರವೀಂದ್ರ. ಇವರಿಬ್ಬರ ಮದುವೆ ಸುದ್ದಿ ನಿಜವೋ, ಅಥವಾ ಯಾವುದಾದರೂ ಸಿನಿಮಾ, ಸೀರಿಯಲ್ ಗಾಗಿ ಆದ ಮದುವೆಯೋ ಎಂದು ಅಚ್ಚರಿ ಪಟ್ಟಿದ್ರು ಅದೆಷ್ಟೋ ಜನ. ಇವರ ಮದುವೆಯ ಸುದ್ದಿಯನ್ನು ಅಷ್ಟು ಸುಲಭಕ್ಕೆ ಯಾರೂ ನಂಬಲು ಸಾಧ್ಯವೂ ಇರಲಿಲ್ಲ.
ಈ ಹಿಂದೆ ತಮಿಳಿನ ಖ್ಯಾತ ನಟಿ ಮಹಾಲಕ್ಷ್ಮಿಅವರು ಅನಿಲ್ ಎಂಬರನ್ನು ಮದ್ವೆಯಾಗಿ ಕೆಲವು ಪರ್ಸನಲ್ ಕಾರಣಗಳಿಂದ 2019ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಬ್ಬರಿಗೂ ಈಗ ಒಂದು ಗಂಡು ಮಗುವಿದೆ. ಇನ್ನು ನಿರ್ಮಾಪಕ ರವೀಂದ್ರ ಅವರೂ ಕೂಡ ಆಗಸ್ಟ್ 29, 2012ರಲ್ಲಿ ಶಾಂತಿ ಎಂಬವರನ್ನು ಮದುವೆಯಾಗಿರ್ತಾರೆ. ಇವರಿಬ್ಬರೂ ಕೂಡ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದುಕೊಳ್ತಾರೆ. ಮಹಾಲಕ್ಷ್ಮಿ ಮತ್ತು ರವೀಂದ್ರ ಅವರು ‘ವಿದ್ಯುಮ್ ವರೈ ಕತಿರು’ ಚಿತ್ರದ ಸಮಯದಲ್ಲಿ ಭೇಟಿಯಾದರು. ಈ ಸೆಟ್ ನಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿತ್ತು.
ಇಷ್ಟೆಲ್ಲಾ ನಡೆದ ಬಳಿಕ ಸುಮಾರು ಎರಡು ತಿಂಗಳ ಹಿಂದೆ ರವೀಂದ್ರ ಚಂದ್ರಶೇಖರನ್ ಅವರು ನಟಿ ಮಹಾಲಕ್ಷ್ಮಿ ಅವರನ್ನು ಎರಡನೇ ವಿವಾಹವಾಗಿದ್ದು, ಇದೀಗ ನಟಿ ಮಹಾಲಕ್ಷ್ಮಿ ಅವರು ಗರ್ಭಿಣಿಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಇಬ್ಬರೂ ಕೂಡ ಎರಡನೇ ಮದುವೆ ಮಾಡ್ಕೊಂಡು ಖುಷ್ ಖುಷಿಯಾಗಿ ಜೀವನ ನಡೆಸ್ತಾ ಇದ್ದಾರೆ, ಇದೀಗ ಮತ್ತೆ ಕೆಲವು ದಿನಗಳ ಹಿಂದೆ, ರವೀಂದ್ರ ಚಂದ್ರಶೇಖರನ್ ಅವರು ಪತ್ನಿ ಲಕ್ಷ್ಮಿ ಅವರೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ನಟಿಯ ಹೊಟ್ಟೆ ಕಾಣಿಸುತ್ತಿದ್ದು, ಇದೀಗ ಶುಭ ಸುದ್ದಿ ನೀಡಲಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.
ಈ ಇಬ್ಬರು ಮಿಸ್ ಮ್ಯಾಚಿಂಗ್ ದಂಪತಿಗಳು ಈ ಹಿಂದೆ ಇಬ್ಬರೂ ದೇವಸ್ಥಾನದ ಮುಂದೆ ಫೋಟೋಗೆ ಪೋಸ್ ಕೊಡುವುದನ್ನು ಕಾಣಬಹುದು. ತಮಿಳಿನ ಹಬ್ಬವಾದ ತೈ ಪೂಸಂ ಸಂದರ್ಭದಲ್ಲಿ ದೇವರ ಆಶೀರ್ವಾದ ಪಡೆಯಲು ದಂಪತಿಗಳು ದೇವಸ್ಥಾನಕ್ಕೂ ಹೋಗಿದ್ದರು, ಈ ಎರಡು ಜೋಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ನಟ್ಟಿಗರು ಕೂಡ ಕಾಮೆಂಟ್ ಗಳನ್ನು ಮಾಡ್ತಾ ಇರುತ್ತಾರೆ.
ಈ ಫೋಟೋ ನೋಡಿದ ಕೆಲವು ನೆಟ್ಟಿಗರು ಅವರನ್ನು ಗರ್ಭಿಣಿ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಫೋಟೋ ನೋಡಿ ಇವರಿಬ್ಬರದ್ದು ನಿಜವಾದ ಪ್ರೇಮ ಎಂದಿದ್ದಾರೆ. ಆದರೆ ಈ ಕುರಿತಾದ ಈ ಇಬ್ಬರು ಸ್ಟಾರ್ ದಂಪತಿಗಳು ನಿಜವಾದ ವಿಚಾರ ಬಾಯಿಬಿಟ್ಟಿಲ್ಲ. ನಿಜಕ್ಕೂ ಮಹಾಲಕ್ಷ್ಮಿ ಅವರು ಗರ್ಭಿಣಿಯ ಅಥವಾ ಅಲ್ವಾ ಅನ್ನೋದನ್ನು ಮುಂದಿನ ದಿನಗಳಲ್ಲಿ ಅವರೇ ತಿಳಿಸಿದ್ರೆ ವಿಚಾರ ತಿಳಿಯುವುದು.