ಈ ಬಾರಿಯ ಶಿಕ್ಷಕರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಟಿ.ದಾಸರಹಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ, ಈ ಟಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್ ಅವರು ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮವನ್ನ ಆಯೋಜಿಸಿದ್ರು.. ಶಾಸಕ ಮಂಜುನಾಥ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ರೆ, ವಕೀಲರ ಸಂಘದ ಅಧ್ಯಕ್ಷರಾದ ಎ.ಪಿ ರಂಗನಾಥ್ ಅವರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ್ರು.. ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷದ ಉಪಾಧ್ಯಕ್ಷರಾದ ಅಂದಾನಪ್ಪನವರು , ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುನಿಶಾಮಣ್ಣ, ಗೌರವಾಧ್ಯಕ್ಷ ಗುಂಡಪ್ಪ, ಪ್ರಧಾನ ಕಾರ್ಯದರ್ಶಿ, ಜಗದೀಶ್ ಬಿ.ಎನ್, ಕ್ಷೇತ್ರದ ಬ್ಲಾಕ್ ಅಧ್ಯಕ್ಷರಾದ ಕೆ.ಸಿ ವೆಂಕಟೇಶ್, ಅಧ್ಯಕ್ಷ ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಚರಣ್ ಗೌಡ, ಜೊತೆಗೆ ನಿವೃತ್ತ ಮುಖ್ಯ ಶಿಕ್ಷಕರಾದ ಆರ್.ಗೋವಿಂದಯ್ಯ ಅವರು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ರು..
ಈ ಸಮಾರಂಭದಲ್ಲಿ ಟಿ.ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಾರ್ಡ್ ಶಾಲಾ ಕಾಲೇಜು ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.. ಈ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್ ಅವರು ನನಗೆ ಶಿಕ್ಷಕರ ಬಗ್ಗೆ ಬಹಳ ಗೌರವವಿದೆ.. ಈ ಸಮಾರಂಭದಲ್ಲಿ ನಮ್ಮ ಕ್ಷೇತ್ರದ ಎಲ್ಲಾ ಶಿಕ್ಷಕರಿಗೆ ಸನ್ಮಾನ ಮಾಡುವ ಮೂಲಕ ಅವರಿಗೆ ಗೌರವ ಅರ್ಪಿಸಿದ್ದೇವೆ ಅಂದ್ರು.. ಅಲ್ಲದೆ ಪ್ರಸ್ತುವ ಪರಿಸ್ಥಿತಿಯಲ್ಲಿ ಶಿಕ್ಷಕರು ಸಾಕಷ್ಟು ಕುಂದು ಕೊರತೆಗಳನ್ನ ಅನುಭವಿಸ್ತಿದ್ದಾರೆ.. ಸರಿಯಾದ ಪ್ಯಾಕೇಜ್ ಗಳನ್ನ ಘೊಷಿಸುವ ಮೂಲಕ ಅವರ ಸಂಕಷ್ಟಗಳಿಗೆ ಸರಿಯಾದ ಪರಿಹಾರ ದೊಎಕಿಸಿಕೊಡಲು ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಅಂತ ತಿಳಿಸಿದ್ರು..
ಈ ಸಮಾರಂಭವನ್ನ ಉದ್ಘಾಟನೆ ಮಾಡಿದ ಎ.ಪಿ ರಂಗನಾಥ್ ಹಾಗೂ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಬಿ.ಎನ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿದ್ರು.. ಈ ಬಾರಿಯ ಶಿಕ್ಷಕರ ದಿನಾಚರಣೆಯ ದಿನ ಆರ್.ಮಂಜುನಾಥ್ ಅವರು ಬಹಳ ಅದ್ಧೂರಿ ಸಮಾರಂಭವನ್ನೇರ್ಪಡಿಸಿ, ಶಿಕ್ಷಕರಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ.. ಇದುವರೆಗೂ ಯಾರೂ ಕೂಡ ಜನ ಶಿಕ್ಷಕರಿಗೆ ಒಟ್ಟಿಗೆ ಗೌರವ ಸನ್ಮಾನವನ್ನ ಮಾಡಿರಲಿಲ್ಲ.. ಇದು ನಿಜಕ್ಕೂ ಹೆಮ್ಮೆಯ ಪಡುವಂತದ್ದು ಅಂದ್ರು..
ಈ ಕಾರ್ಯಕ್ರಮದಲ್ಲಿ ದಾಸರಹಲ್ಳಿ ಕ್ಷೇತ್ರದ ಖಾಸಗಿ ಶಾಲೆ ಶಿಕ್ಷಕರ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಟಿ.ಕೆ ನರಸೇಗೌಡ ಹಾಗೂ ಸೂಡಿ ಸುರೇಶ್ ಅವರೂ ಸಹ ಸಮಾರಂಭದ ಬಗ್ಗೆ ಮಾತನಾಡಿ, ಸಂತಸ ವ್ಯಕ್ತಪಡಿಸಿದ್ರು.. ಅಲ್ಲದೆ ಈ ಕೊರೋನಾ ಸಮಯದಲ್ಲಿ ಶಿಕ್ಷಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.. ಅವರಿಗೆ ಅದಕ್ಕೆ ತಕ್ಕ ಪ್ಯಾಕೇಜ್ ಗಳನ್ನ ಘೋಷಿಸಿ ಪರಿಹಾರಗಳನ್ನ ಒದಗಿಸುವ ಅವಶ್ಯಕತೆ ಇದೆ.. ಆದ್ರೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದ್ರೂ ಶಿಕ್ಷಕರ ಬಗ್ಗೆ ಗಮನಹರಿಸಿಲ್ಲ.. ಈ ನಿಟ್ಟಿನಲ್ಲಿ ಸರ್ಕಾರ ಬಹಳ ನಿರ್ಲಕ್ಷ್ಯ ತೋರಿದೆ.. ಈ ಸರ್ಕಾರಕ್ಕೆ ಕಣ್ಣು, ಮೂಗು ಬಾಯಿ ಏನೂ ಇಲ್ಲ ಎಂದು ಸರ್ಕಾರದ ನಡೆಯನ್ನ ಟೀಕೆ ಮಾಡಿದ್ರು..
ಒಟ್ಟಾರೆ ಶಿಕ್ಷಕರ ದಿನಾಚರಣೆ ಸಲುವಾಗಿ ಆಯೋಜಿಸಲಾಗಿದ್ದ ಈ ಸಮಾರಂಭ ಉತ್ತಮ ರೀತಿಯಲ್ಲಿ ಜರುಗಿತು.. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿಕ್ಷಕರೂ ಸನ್ಮಾನ ಗೌರವಗಳನ್ನ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ರು..
ಚಂದನ.ಎಸ್, ಕರ್ನಾಟಕ ಟಿವಿ