Friday, March 14, 2025

Latest Posts

T Raja Singh : ಬಿಜೆಪಿ ಶಾಸಕನಿಗೆ ಡಬಲ್ ಖುಷಿ..! ಅಮಾನತು ಹಿಂಪಡೆದ ಹೈಕಮಾಂಡ್

- Advertisement -

National News : ಹಲವ ವರ್ಷಗಳಿಂದ ಹೈಕಮಾಂಡ್ ನಿರ್ಧಾರಕ್ಕಾಗಿ ಕಾದು ಕುಳಿತಿದ್ದ ಶಾಸಕನಿಗೆ ಇದೀಗ ಡಬಲ್ ಡಬಲ್ ಖುಷಿ ಸಿಕ್ಕಿದೆ. ವಿವಾದಾತ್ಮಕ ಹೇಳಿಕೇಯಿಂದಲೇ ಸದ್ದು ಮಾಡುತ್ತಿದ್ದ ಶಾಸಕನಿಗೆ ನೀಡಿದ್ದ ಅಮಾನತು ಹಿಂಪಡೆಯಲಾಗಿದೆ.

ಹಲವು ವರ್ಷಗಳಿಂದ ಹೈಕಮಾಂಡ್ ನಿರ್ಧಾರಕ್ಕಾಗಿ ಕಾದು ಕುಳಿತಿದ್ದ ಗೋಶಾಮಹಲ್ ಶಾಸಕ ರಾಜಾಸಿಂಗ್ ಗೆ ಸಂತಸದ ಸುದ್ದಿ ಸಿಕ್ಕಿದೆ. ವಿವಾದಾತ್ಮಕ ಹೇಳಿಕೆಗಳಿಗಾಗಿ ಈ ಹಿಂದೆ ವಿಧಿಸಲಾಗಿದ್ದ ಅಮಾನತು ರದ್ದುಗೊಳಿಸಲಾಗಿದ್ದು, ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ವಿವಾದಾತ್ಮಕ ಹೇಳಿಕೆಗಳ ಸಂಬಂಧ ಬಿಜೆಪಿ ಹೈಕಮಾಂಡ್ ರಾಜಾ ಸಿಂಗ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಆ ಬಳಿಕ ತಮ್ಮ ಹೇಳಿಕೆಗೆ ಶಾಸಕ ನೀಡಿದ ವಿವರಣೆಯಿಂದ ರಾಜಾ ಸಿಂಗ್ ಅಮಾನತು ಹಿಂಪಡೆಯಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಭಾನುವಾರ ಬೆಳಗ್ಗೆ ಹೇಳಿಕೆ ನೀಡಿದೆ.
2022ರ ಆಗಸ್ಟ್ 23 ರಂದು ಬಿಜೆಪಿ ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಿತು. ಸುಮಾರು 14 ತಿಂಗಳ ನಂತರ ಅವರ ಮೇಲಿನ ಅಮಾನತು ವಾಪಸ್ ಪಡೆದುಕೊಂಡಿದೆ. ಇನ್ನು, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಕಟಿಸಲಿರುವ ಮೊದಲ ಪಟ್ಟಿಯಲ್ಲಿ ರಾಜಾ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ಸದ್ಯ ಆಯ್ಕೆಯಾಗಿರುವ ಗೋಶಾಮಹಲ್ ಕ್ಷೇತ್ರದಿಂದಲೇ ಅವರು ಸ್ಪರ್ಧೆ ಮಾಡಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಅವರ ಹೆಸರು ಇದ್ದು, ಅವರ ಮೇಲೆ ಅಮಾನತು ಇರುವ ಕಾರಣ ನಿನ್ನೆ ಟಿಕೆಟ್ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಇಂದು ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜಾ ಸಿಂಗ್ಗೆ ಟಿಕೆಟ್ ನೀಡಿ ಡಬಲ್ ಗುಡ್ ನ್ಯೂಸ್ ನೀಡಿದೆ.

Bhupesh Baghel : ಅವಕಾಶ ಸಿಕ್ಕರೆ ಕೇಂದ್ರ ಸರ್ಕಾರ ನನನ್ನು ಬಂಧಿಸಬಹುದು : ಮುಖ್ಯಮಂತ್ರಿ ಭೂಪೇಶ್ ಬಾಘೆಲ್

ಪ್ರಧಾನಿ ಮೋದಿಯವರನ್ನ ಭೇಟಿ ಮಾಡುಸ್ತೀನಿ ಎಂದು ಜೋಶಿಯವರು ಹೇಳಿದ್ದಾರೆ

BIHAR: ಹಳಿ ತಪ್ಪಿದ ರೈಲು ದುರಂತ ; ನಾಲ್ವರ ದುರ್ಮರಣ..!

- Advertisement -

Latest Posts

Don't Miss