2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಭಾರತ, ಸದ್ಯ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ, ವಿಶ್ವ ಕಪ್ ತಯಾರಿ ನಡೆಸಿರುವ ಎರಡು ತಂಡಗಳಿಗೆ ಪೂರ್ವಸಿದ್ಧತೆಯ ಟೂರ್ನಿ ಎನಿಸಿಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ...