ಕಳೆದ ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಜಾತಿಗಣತಿ ಸಮೀಕ್ಷೆ ಶುರುವಾಗಿದೆ. ಆದ್ರೆ, ರಾಜಧಾನಿ ಬೆಂಗಳೂರಲ್ಲಿ ಮಾತ್ರ ಸಮೀಕ್ಷೆ ಸ್ಟಾರ್ಟೇ ಆಗಿರಲಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಅದು ವಿಳಂಬವಾಗಿತ್ತು. ಬರೋಬ್ಬರಿ 12 ದಿನಗಳ ಬಳಿಕ ಬೆಂಗಳೂರಿನ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಇಂದಿನಿಂದ ಆರಂಭವಾಗುತ್ತಿದೆ.
ಅಕ್ಟೋಬರ್ 2ರಂದು 17,500 ಸಿಬ್ಬಂದಿ ಹಾಗೂ...
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್ ಸರ್ಕಾರ, ಜಾತಿ ಸಮೀಕ್ಷೆ ನಡೆಸುತ್ತಿದೆ ಅನ್ನೋ ಮಾತುಗಳು ವಿಪಕ್ಷಗಳಿಂದ ಕೇಳಿ ಬಂದಿದೆ. ಇದಕ್ಕೆಲ್ಲಾ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ. ಜಾತಿ ಆಧಾರಿತ ಜನಗಣತಿ ಮಾಡುತ್ತಿರುವುದು ಗ್ಯಾರಂಟಿ ಕಡಿತಕ್ಕೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಯಾರೂ...
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಅತೀ ಹೆಚ್ಚಾಗಿ ಕೊಪ್ಪಳ ಜಿಲ್ಲೆಯ ಜನರು ಭಾಗಿಯಾಗಿದ್ದಾರೆ. ಸಮೀಕ್ಷೆಯ ಪ್ರಾರಂಭದಲ್ಲಿ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಎದುರಾಗಿತ್ತು.
ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ, ಯಲಬುರ್ಗಾ, ಕುಷ್ಟಗಿ, ಕುಕನೂರ, ಗಂಗಾವತಿ ತಾಲೂಕುಗಳಲ್ಲಿ, ಅತ್ಯಂತ ವೇಗವಾಗಿ ಸಮೀಕ್ಷೆ ಸಾಗಿದೆ. ದಸರಾ ರಜೆಯಲ್ಲೂ ಜಾತಿ ಗಣತಿ ಕಾರ್ಯದಲ್ಲಿ ಶಿಕ್ಷಕರು ಭಾಗಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ...
ಸ್ವಪಕ್ಷದವರ ವಿರೋಧ ಎದುರಾದ್ರೂ, ಸಿಎಂ ಸಿದ್ದರಾಮಯ್ಯ ಮಾತ್ರ ಜಾತಿಗಣತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಿದ್ದರಾಮಯ್ಯರ ಇಂಥದ್ದೊಂದು ನಿಲುವಿನ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಈ ಮಧ್ಯೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಜಾತಿಗಣತಿ ಹಿಂದೆ ಮೂರು ಕಾರಣಗಳು ಇವೆಯಂತೆ. ನಂಬರ್.1 ಆಡಳಿತ ವೈಫಲ್ಯ, ನಂಬರ್ 2. ಒಳಜಗಳ...
ಯಾರ ವಿರೋಧಕ್ಕೂ ಜಗ್ಗದ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ ಆದೇಶ ಕೊಟ್ಟಿದ್ರು. ಸೆಪ್ಟೆಂಬರ್ 22ರಿಂದ ಸಮೀಕ್ಷೆ ಶುರುವಾಗಿದೆ. 4 ದಿನ ಕಳೆದರೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಜಾತಿಗಣತಿಗೆ ಮುಗಿಸಲು ಅಕ್ಟೋಬರ್ 7ರ ಡೆಡ್‌ಲೈನ್ ಕೊಡಲಾಗಿದೆ. ಆದ್ರೆ, ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದಾಗಿ, ಸಮೀಕ್ಷೆಯ ವೇಗ ಕುಂಠಿತವಾಗುತ್ತದೆ. ಶಿಕ್ಷಕರು ಗಣತಿ ವೇಳೆ ಪರದಾಡುವಂತಾಗಿದೆ.
ಈ ಎಲ್ಲಾ...
ಮಹತ್ವದ ಜಾತಿ ಸಮೀಕ್ಷೆಗೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರು, ಬೆಂಬಲ ಘೋಷಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ, ಸಂತೋಷ್ ಲಾಡ್, ಮಧು ಬಂಗಾರಪ್ಪ, ಬಿ.ಎ. ಸುರೇಶ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ, ಹಿಂದುಳಿದ ವರ್ಗಗಳಿಗೆ ಸೇರಿದ ಹಿರಿಯ ನಾಯಕರುಗಳು, ಸಚಿವರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ಭಾಗವಹಿಸಿದ್ದರು. ಈ ವೇಳೆ...
ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ವಿಚಾರವನ್ನು, ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಯಾಕಂದ್ರೆ ಜಾತಿಗಣತಿ ವಿರುದ್ಧ ರಾಜ್ಯಾದ್ಯಂತ ವಿರೋಧ ಭುಗಿಲೆದ್ದಿದ್ದು, ಸಚಿವ ಸಂಪುಟದ ಸದಸ್ಯರು ಮುಂದೂಡುವಂತೆ ಒತ್ತಾಯಿಸಿದ್ದರು.
ಜಾತಿಗಣತಿ ವಿರುದ್ಧ ಲಿಂಗಾಯತ, ಒಕ್ಕಲಿಗ ನಾಯಕರು ತಮ್ಮ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಭಾರೀ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಇದು ಕಾಂಗ್ರೆಸ್...
ಸರ್ವರ್ ಸಮಸ್ಯೆ, ಗೊಂದಲ, ವಿರೋಧಗಳ ನಡುವೆಯೇ, ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದೆ. ಎಲ್ಲೇ ಹೋದ್ರೂ ಸರ್ವರ್ ಪ್ರಾಬ್ಲಂ, OTP ಬರ್ತಿಲ್ಲ, ತಾಂತ್ರಿಕ ಸಮಸ್ಯೆ. ಮೊಬೈಲ್ ನೆಟ್‌ವರ್ಕ್‌ಗಾಗಿ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು, ಮರ, ನೀರಿನ ಟ್ಯಾಂಕ್ ಹತ್ತುವ ಪರಿಸ್ಥಿತಿ ಬಂದಿದೆ.
ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ, ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಯ ಔರಾದ್,...
ಜಾತಿಗಣತಿಗೆ ಹೈಕೋರ್ಟ್ ಟೆನ್ಷನ್ ಶುರುವಾಗಿದ್ದು, ತಡೆ ಕೋರಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿದೆ. ರಾಜ್ಯಾದ್ಯಂತ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಯನ್ನು, ಮುಂದೂಡಲು ಸಾಧ್ಯವೇ ಅಂತಾ ಹಿಂದಿನ ವಿಚಾರಣೆಯಲ್ಲಿ, ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತ್ತು. ಜೊತೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿ ಬಗ್ಗೆ, ಸೆಪ್ಟೆಂಬರ್ 23ರಂದು ಮಂಗಳವಾರ ವಿಚಾರಣೆ ನಡೆಸೋದಾಗಿ ಹೇಳಿತ್ತು.
ರಾಜ್ಯ ಒಕ್ಕಲಿಗರ ಸಂಘ,...
ರಾಜ್ಯದೆಲ್ಲೆಡೆ ಜಾತಿಗಣತಿ ಭಾರೀ ಸದ್ದು ಮಾಡ್ತಿದೆ. ಎಲ್ಲಾ ಸಮುದಾಯಗಳು ನಿರಂತರ ಸಭೆಗಳನ್ನು ಮಾಡ್ತಿದ್ದು, ಜಾತಿ ಗಣತಿ ನೆಪದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಸೆಪ್ಟೆಂಬರ್ 20ರಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ, ಮಹತ್ವದ ಸಭೆ ಕರೆಯಲಾಗಿದೆ.
ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂಧನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಲಿದ್ದಾರೆ. ಪಕ್ಷಾತೀತವಾಗಿ ಸಮಾಜದ ಮುಖಂಡರು ಕೂಡ...