ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಏನು ಚರ್ಚೆ ಆಯಿತು ಎಂಬುದು ನನಗೆ ತಿಳಿದಿಲ್ಲ. ಆದರೆ ಈಗ ಎಲ್ಲವೂ ತಿಳಿಯಾಗಿದೆ ಎಂದು ನಾವು ಅಂದುಕೊಂಡಿದ್ದೇವೆ.
ನಮ್ಮಲ್ಲಿ ಯಾವುದೇ ಗೊಂದಲವೇ ಇಲ್ಲ. ಅನಾವಶ್ಯಕವಾಗಿ ಕೆಲವು ಗೊಂದಲಗಳ...
ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ನಿಶ್ಚಯ ಆದಂತಿದೆ. ಅವರ ಮಾತಿಂದ ನನಗೆ ಹಾಗೆ ಅನಿಸುತ್ತಿದೆ. ರಾಜೀನಾಮೆಗೆ ಕ್ಷಣಗಣನೆ ಶುರುವಾದಂತೆ ಕಾಣುತ್ತಿದೆ. ವೈರಾಗ್ಯದ ಮಾತು ಕೇಳಿದ್ರೆ ಜನವರಿಯಲ್ಲಿ ಸಿದ್ದರಾಮಯ್ಯ ಕುರ್ಚಿ ಬಿಡ್ತಾರೆ ಅಂತ...
ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬೆಳೆ ಖರೀದಿಸಲು ಸರ್ಕಾರಕ್ಕೆ ಹಣವಿಲ್ಲ. ಆದರೆ ಶಾಸಕರನ್ನು ಖರೀದಿಸಲು ಕೋಟಿ ಕೋಟಿ ರೂಪಾಯಿ ಇದೆ ಎಂದು ಟೀಕಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಒಬ್ಬೊಬ್ಬ ಶಾಸಕನಿಗೆ 50–60 ಕೋಟಿ ರೂಪಾಯಿ ಕೊಡಲಾಗುತ್ತಿದೆ ಎಂಬ ಮಾಹಿತಿ...
K.R. ನಗರ ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಅವರು ತಮ್ಮ ಸ್ವಂತ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿರುವ ಘಟನೆ ಜಿಲ್ಲೆಯಲ್ಲೇ ಚರ್ಚೆಗೆ ಕಾರಣವಾಗಿದೆ. ವೇದಿಕೆ ಮೇಲೆಯೇ ಶಾಸಕರು ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮಹದೇವ್ ಅವರು ಗ್ರಾಮಕ್ಕೆ ಡೈರಿ ಕಟ್ಟಡ ನಿರ್ಮಾಣಕ್ಕೆ ಮನವಿ...
ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ತಲೆ ಇಲ್ಲ, ಬುಡ ಇಲ್ಲ. ಗಾಂಭೀರ್ಯತೆ ಅನ್ನೋದೇ ಗೊತ್ತಿಲ್ಲ. ಇಚ್ಛಾಶಕ್ತಿ ಇಲ್ಲದ, ಸಮಸ್ಯೆ ಅರಿವಿಲ್ಲದ ಮೊಂಡುತನದ ವ್ಯವಸ್ಥೆ ಸಿದ್ದರಾಮಯ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಚಾಟಿ...
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ಬಂದಾಗ ಮಾತ್ರ ಭಾರತಕ್ಕೆ ಬಂದು, ನಂತರ ವಿದೇಶ ಪ್ರವಾಸಕ್ಕೆ ತೆರಳುವವರಂತು ಅವರ ಟೀಕೆ. ವರನಟ ಡಾ. ರಾಜ್ ಕುಮಾರ್ ರಂಗಮಂದಿರದ ಬಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧಿ ಕುಟುಂಬದ ವಿರುದ್ಧ...
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಇದರ ಪರಿಣಾಮ ‘ನವೆಂಬರ್ ಕ್ರಾಂತಿ’ ಅನ್ನೋ ನಿರೀಕ್ಷೆಗಳು ಸಂಪೂರ್ಣ ಹುಸಿ ಆಗಿದೆ. ಪಕ್ಷದ ಉತ್ಸಾಹಕ್ಕೆ ಗಟ್ಟಿಯಾದ ತಗ್ಗು ಉಂಟಾಗಿದೆ. ರಾಜ್ಯದಲ್ಲಿ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ನಾಯಕತ್ವ ಬದಲಾವಣೆ ಕುರಿತು ನಿರೀಕ್ಷೆ ಇತ್ತು. ಬಿಹಾರದ ಫಲಿತಾಂಶಗಳು ಈ ಎಲ್ಲಾ...
ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಆಕಾಂಕ್ಷಿ ಶಾಸಕರ ಚಟುವಟಿಕೆ ಚುರುಕುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 15ರಂದು ದೆಹಲಿಗೆ ತೆರಳಲಿರುವ ಹಿನ್ನೆಲೆ, ಸಂಪುಟ ಸೇರ್ಪಡೆಗಾಗಿ ಲಾಬಿ ಆರಂಭವಾಗಿದೆ.
ಈ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಆಕಾಂಕ್ಷಿ ಶಾಸಕರ ಪರೇಡ್ ನಡೆದಿದ್ದು, ಮಂಗಳವಾರ ಹಲವು ಶಾಸಕರು ಖರ್ಗೆ ಅವರನ್ನು...
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆ, ಸಂಸ್ಥೆಯ ದುರವಸ್ಥೆಗೆ ಕಾರಣ ಯಾರದು ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ.
ಬ್ರಿಮ್ಸ್ ಹಾಳಾಗಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕಾರಣವೆಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ...
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡಿದ್ದಾರೆ, ಹಾಗಿದ್ದಾಗ ಜೈಲಿನ ಬಗ್ಗೆ ಮಾತನಾಡಿ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ಈ ಮೊದಲೇ ಜೈಲು ಅಧಿಕಾರಿಗಳ ನಡುವಿನ ಜವಾಬ್ದಾರಿ ವೈಫಲ್ಯ ಮತ್ತು ರಾಜಕಾರಣದ ವಿಷಯ ಚರ್ಚೆಗೆ ಕಾರಣವಾಗಿತ್ತು....
ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್...