ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ "ಶುಗರ್ ಫ್ಯಾಕ್ಟರಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣ ಮುಕ್ತಾಯ ದಿನದ ಸಂಭ್ರಮವನ್ನು ಚಿತ್ರತಂಡ ಸಂತಸದಿಂದ ಆಚರಿಸಿದೆ.
ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ 55 ದಿನಗಳ ಚಿತ್ರೀಕರಣ...