Dharwad News: ಮಾವಿನ ನಾಡು ಧಾರವಾಡದಲ್ಲಿ ಈ ಬಾರಿಯೂ ರೈತರಿಗೆ ಸಂಕಷ್ಟದ ಸಮಯ ಶುರುವಾಗಿದೆ. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ನಷ್ಟ ಅನುಭವಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ಒಳ್ಳೆಯ ಬೆಳೆಯ ನಿರೀಕ್ಷೆ ಇತ್ತು. ಆದರೆ, ಇದೀಗ ಎರಡು ದಿನಗಳಿಂದ ಬೀಳುತ್ತಿರುವ ಮಂಜು ಆತಂಕವನ್ನುಂಟು ಮಾಡಿದೆ. ಈ ಮಂಜು ಹೀಗೆಯೇ ಮುಂದುವರೆದಲ್ಲಿ...
Dharwad News: ಧಾರವಾಡ: ಧಾರವಾಡದ ಗ್ರಾನೈಟ್ ವ್ಯಾಪಾರಿಯೊಬ್ಬರ ಮನೆಯ ಕೀಲಿ ಮುರಿದು ಒಳನುಗ್ಗಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಧಾರವಾಡದ ಸಂಗಮ ಚಿತ್ರಮಂದಿರ ಬಳಿಯ ಕೆಂಪಗೇರಿಯಲ್ಲಿ ನಡೆದಿದೆ.
ಅರುಣ ಬಸವರಾಜ ಹುನಗುಂದ ಎಂಬುವರ ಮನೆಯಲ್ಲೇ ಈ ಕಳ್ಳತನ ನಡೆದಿದ್ದು, ಹುನಗುಂದ ಕುಟುಂಬದವರು ಸಂಬಂಧಿಯೊಬ್ಬರ ಮದುವೆ ಕಾರ್ಯಕ್ಕೆ ಯಾದಗಿರಿಗೆ ತೆರಳಿದ್ದಾಗ ಕಳ್ಳರು ತಮ್ಮ...
Dharwad News: ಇತ್ತೀಚೆಗೆ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಅನ್ನೋ ಬರಹವನ್ನು ಬದಲಿಸಿ, ಧೈರ್ಯವಾಗಿ ಪ್ರಶ್ನಿಸು ಎಂಬ ಬರಹ ಹಾಕಬೇಕು ಎಂದು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಆದರೆ ಧಾರವಾಡದ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ಬಿಸಿಯೂಟದ ವಿಷಯವಾಗಿ ರಾಕ್ಷಸಿಯಂತೆ ವರ್ತಿಸಿದ್ದಾಳೆ. ಈಕೆಯ ವರ್ತನೆಯನ್ನು ಧೈರ್ಯವಾಗಿ ಪ್ರಶ್ನಿಸುವವರಿಗೆ ಯಾರು ರಕ್ಷಣೆ ನೀಡುತ್ತಾರೆಂಬುದೇ ಪ್ರಶ್ನೆಯಾಗಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ...
Dharwad News: ಧಾರವಾಡ: ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಧಾರವಾಡದ ಯುವಕನೋರ್ವ, ಸೈಕಲ್ ಮೂಲಕ ರಾಜ್ಯ ಸುತ್ತಲು ಹೊರಟಿದ್ದಾನೆ.
ದೇಶ ಉಳಿಸಲು ಬಿಜೆಪಿ ಗೆ ಮತ ನೀಡಿ ಎಂದು ಭರತ್ ಜೈನ್ ಎಂಬ ಯುವಕ ಸೈಕಲ್ ಸವಾರಿ ಶುರು ಮಾಡಿದ್ದಾನೆ. ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಭರತ್, ಧಾರವಾಡ ಜಿಲ್ಲೆಯಿಂದ ಯಾತ್ರೆ ಕೈಗೊಂಡು, ಸೈಕಲ್‌ನಲ್ಲಿಯೇ,...
Dharwad News: ಧಾರವಾಡ: ಧಾರವಾಡದ ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸವನ್ನು ಏಕಾಏಕಿ ಆರಂಭಿಸಿದ ಬೆನ್ನಲೇ, ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ.
ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಂದು ಪಾಲಿಕೆ ಅಧಿಕಾರಿಗಳು...
Dharwad News: ಧಾರವಾಡ: ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಬಿಜೆಪಿ ಕಾರ್ಯಕರ್ತರು ಪ್‌ರತಿಭಟನೆ ನಡೆಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆಸಿದ್ದು, ಜಾನುವಾರುಗಳನ್ನು ನಿಲ್ಲಿಸಿ, ವಿಭಿನನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
10ರಿಂದ 15 ಎಮ್ಮೆಗಳನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ತಂದು ನಿಲ್ಲಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಡ ಬಿಜೆಪಿ ನಾಯಕರು...
Dharwad News: ಧಾರವಾಡ: ಧಾರವಾಡ ದಲಿತ ಸಂಘಟನಾ ಸಮಿತಿಯವರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರ್ಗಿ ನಗರದ ಕೋಟಾನೂರು ಪ್ರದೇಶ ಹಾಗೂ ಗಂಗಾವತಿ ನಗರದಲ್ಲಿ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚನೆ ಆಗಬೇಕು. ಅವಮಾನ ಮಾಡಿದ ಆರೋಪಿಗಳ ಮೇಲೆ ಸೂಕ್ತ...
Dharwad News: ಧಾರವಾಡ: ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ವೃದ್ಧೆಯ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಧಾರವಾಡದ ನವಲೂರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಕರೆವ್ವ ಈರಬಗೇರಿ(58) ಕೊಲೆಯಾದ ವೃದ್ಧೆಯಾಗಿದ್ದು, ಆಸ್ತಿ ವಿಚಾರವಾಗಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೆ. ಈ ವೃದ್ಧೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದು, ಇಂದು ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ಹೋಗುವಾಗ,...
Dharwad Political News: ಧಾರವಾಡ: ಬೈರಿದೇವರ ಕೊಪ್ಪ ಸಮೀಪ ವೇಗವಾಗಿ ಬಂದ ಬಿಆರ್‌ಟಿಎಸ್ ಬಸ್ ಜೆಸಿಬಿಗೆ ಡಿಕ್ಕಿಯಾದ ನಂತರ, ಉಂಟಾಗಿದ್ದ ಗಲಾಟೆಯನ್ನು ಶಮನಗೊಳಿಸಿದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಸಂತೋಷ್ ಲಾಡ್ ಅವರು...
Dharwad News: ಧಾರವಾಡ: ಕುಖ್ಯಾತ ದರೋಡೆಕೊರರ ಹೆಡೆಮುರಿ ಕಟ್ಟುವಲ್ಲಿ ಧಾರವಾಡ ವಿದ್ಯಾಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.
ರಾತ್ರಿ ವೇಳೆಯಲ್ಲಿ ಕಾರು, ಬೈಕ್ ಹಾಗೂ ಒಂಟಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಟೀಮ್ ಇದಾಗಿದ್ದು, ಜ.1 ರಂದು ಧಾರವಾಡ ಐಐಐಟಿ ಹತ್ತಿರ ಹುಬ್ಬಳ್ಳಿಯ ನಿವಾಸಿ ಮಲ್ಲಿಕಾರ್ಜುನ ಬಡ್ನಿ ಎಂಬಾತರ ಕಾರನ್ನು ಅಡ್ಡಗಟ್ಟಿ, ಕಾರಿನ ಕ್ಲಾಸ್ ಒಡೆದು...