Haveri News: ತೆರಿಗೆ ಹಣ ದುರುಪಯೋಗ ಆರೋಪ: ಮನೆ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

Haveri News: ತೆರಿಗೆ ಹಣ ದುರುಪಯೋಗ ಮಾಡಿಕೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ, ಹಾನಗಲ್ ತಾಲೂಕಿನ ಮಾರನ ಬೀಡ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

ಮನೆ ಮಾಲಿಕತ್ವ ಪಡೆದುಕೊಂಡ ಫಲಾನುಭವಿಗಳು ತಮ್ಮ ಆಸ್ತಿ ನೋಂದಣಿಗಾಗಿ ಭರಣೆ ಮಾಡಿದ ತೆರಿಗೆ ಮೊತ್ತ ಮತ್ತು ಗ್ರಾಮಸ್ಥರು ನಿಯಮಿತವಾಗಿ ಬರಿಸಿದ ತೆರಿಗೆಯಲ್ಲಿ ಸುಮಾರು 21 ಲಕ್ಷ ದುರುಪಯೋಗ ಆಗಿದೆ ಎಂದು ಪ್ರತಿಭಟನ ನಿರತರು ಹೇಳಿದರು.

ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿ ಚರಂಡಿ ಸ್ವಚ್ಛಗೊಳಿಸುವ ಸಣ್ಣಪುಟ್ಟ ಕೆಲಸಗಳಿಗೆ 14 ಲಕ್ಷ ಖರ್ಚು ಹಾಕಲಾಗಿದೆ ಒಂದು ಕೆಲಸಕ್ಕೆ ಹಲವಾರು ಬಾರಿ ಬಿಲ್ ಸೃಷ್ಟಿಸಲಾಗಿದೆ. ಕಚೇರಿ ಪ್ರೀಟೋಪಕರಣಕ್ಕೆ ಅಂದಾಜಿಗಿಂತ ಹೆಚ್ಚು ಹಣ ಖರ್ಚು ತೋರಿಸಲಾಗಿದೆ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತ್ ಇ ಓ ಜಗದೀಶ್ ಕಮ್ಮಾರ್ ಹಣ ದುರುಪಯೋಗದ ಬಗ್ಗೆ ತನಿಕಾ ಸಮಿತಿ ರಚಿಸಿ ವರದಿ ಪಡೆದುಕೊಳ್ಳುಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ವರದಿ ಸಲ್ಲಿಸಲಾಗುತ್ತದೆ. ಶಿಸ್ತು ಪ್ರಾಧಿಕಾರದಿಂದ ಅಭಿವೃದ್ಧಿ ಅಧಿಕಾರಿ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

About The Author