ಮೈಸೂರು: ಭ್ರೂಣ ಪತ್ತೆ ಹಾಗೂ ಹತ್ಯೆ ಎಂಬ ಕಾನೂನುಬಾಹಿರ ಕೃತ್ಯಕ್ಕೆ ಮೈಸೂರಿನಲ್ಲೊಂದು ಗ್ಯಾಂಗ್ ಬಲೆಯೊಡ್ಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮೆಲ್ಲಹಳ್ಳಿ ಸಮೀಪದ ಹುನಗನಹಳ್ಳಿ ಗ್ರಾಮದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ದಾಳಿ ನಡೆಸಿ, ಓರ್ವ ಮಹಿಳೆ ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಂಗಲೆಯಲ್ಲೇ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಎಂದು ತಿಳಿದರೆ ಹತ್ಯೆ...