Sunday, October 26, 2025

Hassan

ಅಕ್ಟೋಬರ್ 29ರವರೆಗೂ ರಾಜ್ಯದಲ್ಲಿ ಭಾರಿ ಮಳೆ – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ದಿನ ಬಿಡುವು ಕೊಟ್ಟರೆ ಮರುದಿನವೇ ಮತ್ತೆ ಮಳೆ ಶುರುವಾಗುತ್ತಿದೆ. ಈಗ ಮತ್ತೆ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಅಕ್ಟೋಬರ್ 29ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ...

ಹಾಸನದಲ್ಲಿ ದಳದ ಹವಾ : JDS-BJP ತೆಕ್ಕೆಗೆ ಆಡಳಿತ!

ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಎಚ್.ಎಂ. ದಿನೇಶ್ ಅವರು ಆಯ್ಕೆಯಾಗಿದ್ದಾರೆ. ಅವರು 5 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಉಪಾಧ್ಯಕ್ಷರಾಗಿ ತೀರ್ಥಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 15 ಸದಸ್ಯರ ಬಲದ ಬ್ಯಾಂಕಿನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಎಂ. ದಿನೇಶ್ ಮತ್ತು ಎಸ್‌.ಎಚ್....

3.5 ಲಕ್ಷ ಜನರಿಂದ ಹಾಸನಾಂಬ ದೇವಿ ದರ್ಶನ : ಲಡ್ಡುವಿನಿಂದ 2.24 ಕೋಟಿ ಹಣ

ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭವಾಗಿ ಮೂರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ದರ್ಶನ ಸ್ಥಗಿತಗೊಳಿಸಲಾಗಿದ್ದು, ಭಾನುವಾರ ಬೆಳಿಗ್ಗೆ 5 ಗಂಟೆಗೆ ಪುನಃ ಆರಂಭವಾಯಿತು. ಮಧ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್ ರಸ್ತೆ ಉದ್ದಕ್ಕೂ ಸಹಸ್ರಾರು...

Political News: ಜಿಲ್ಲಾಸ್ಪತ್ರೆಗಳನ್ನು ಸುಮ್ಮನೆ ಮುಚ್ಚಿಸಿಬಿಡಿ: ಹೆಚ್.ಡಿ.ರೇವಣ್ಣ

Political News: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಚಿವ ರೇವಣ್ಣ, ಜಿಲ್ಲೆಯಲ್ಲಾಗುತ್ತಿರುವ ಹೃದಯಾಘಾತದ ಸಾವಿನ ಬಗ್ಗೆ ಮಾತನಾಡಿದ್ದಾರೆ. ಹಾಸನದಲ್ಲಿ ಲಂಚಾವತಾರ, ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರೇನಾದರೂ ಕ್ರಮ ಕೈಗ``ಳ್ಳುತ್ತಾರಾ ಅಂತಾ ಕಾದು ನೋಡೋಣವೆಂದು ರೇವಣ್ಣ ಹೇಳಿದ್ದಾರೆ. ಇನ್ನು ಹಾಸನದಲ್ಲಿ ಹೃದಯಾಘಾತ ಸಮಸ್ಯೆ ಜೋರಾಗಿ, ಸಾವು ಹೆಚ್ಚಾಗುತ್ತಿರುವ...

ಹಾಸನವನ್ನ ಮೀರಿಸುವಂತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ.

Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇದೀಗ ಹುಬ್ಬಳ್ಳಿ ಕಮ್ಸ್ ಆಸ್ಪತ್ರೆಯಲ್ಲಿಯೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದೇ ತಿಂಗಳು 26 ಜನ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಇದೇ ಜನವರಿಯಿಂದ ಇಲ್ಲಿಯವರೆಗೂ 101 ಜನ...

Hassan News: ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು: ಪ್ರಿಯಕರನ ಜತೆ ವಿವಾಹ

Hassan News: ಮದುವೆ ಅಂದರೆ ಬರೀ ಒಂದು ಸಂಭ್ರಮದ ಕಾರ್ಯಕ್ರಮವಲ್ಲ. ಅದು ಆ ಮಕ್ಕಳನ್ನು ಹೆತ್ತ ಅಪ್ಪ ಅಮ್ಮನ ಹಲವು ವರ್ಷದ ಕನಸು. ಯಾರ ಬಳಿಯೂ ಸಾಲ ಮಾಡದೇ, ಸ್ವಾಭಿಮಾನದಿಂದ ಮದುವೆ ಮಾಡಬೇಕು ಅಂತಾ ಕೆಲವರು ವರ್ಷಗಟ್ಟಲೇ ಕೂಡಿಟ್ಟ ಎಲ್ಲ ಸೇವಿಂಗ್ಸ್ ಸುರಿದುಬಿಡುವ ದಿನ. ಇನ್ನು ಕೆಲವರು ಸಾಲ ಸೋಲ ಮಾಡಿ, ಹೇಗೋ ದುಡ್ಡು...

HASSAN : ಪತ್ನಿಯ ಟಾರ್ಚರ್ ಗೆ ಬೇಸತ್ತ ಗಂಡನ ಈ ನಿರ್ಧಾರ ಸರಿಯೇ..?

ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಘಟನೆಯೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಇಂಜಿನಿಯರ್ ಒಬ್ಬರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ನಗರದ ಪ್ರಮೋದ್ ಆತ್ಮಹತ್ಯೆಗೆ ಶರಣಾದ...

HASSAN: ಕರೆ ಸ್ವೀಕರಿಸದ ಪ್ರಿಯಕರ ರೊಚ್ಚಿಗೆದ್ದ ಪ್ರೇಯಸಿ ಮಾಡಿದ್ದೇನು..?

ಪ್ರಿಯಕರನ ಮೇಲೆ ಮುನಿಸಿಕೊಂಡ ಪ್ರಿಯತಮೆ ಆತನಿಗೆ ಚಾಕುವಿನಿಂದ ಇರಿದಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ಹಾಸನದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ತಡರಾತ್ರಿ ಘಟನೆ ನಡೆದಿದೆ. ಮನುಕುಮಾರ್ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು....

ಸಿಡಿ ಬಿತ್ತಿದ್ದೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಟ್ಟ ಕೊಡುಗೆ: ಡಿಕೆಶಿಗೆ ಹೆಚ್ಡಿಕೆ ತಿರುಗೇಟು

Hassan News: ಹಾಸನ: ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂದು ಕೇಳಿರುವ ಡಿಸಿಎಂ ಡಿ‌.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು; ಹಾಗಾದರೆ ಈ ಜಿಲ್ಲೆಗೆ *lಕಾಂಗ್ರೆಸ್ ನಾಯಕರ ಕೊಡುಗೆ ಏನು? ಎಂದು ಕೇಳಿದ್ದಾರೆ. ಹರದನಹಳ್ಳಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಕಾಂಗ್ರೆಸ್ ನಾಯಕರ ಕೊಡುಗೆ ಅದೆಂತಹದ್ದು ಎನ್ನುವುದು ನನಗೆ...

Bhavani Revanna ; ತವರಿಗೆ ಬಾ ಭವಾನಿ! ; ಹೈಕೋರ್ಟ್‌ ಅನುಮತಿ ಕೊಟ್ಟಿದ್ಯಾಕೆ?

ಕೆ.ಆರ್‌. ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣಗೆ ವಿಧಿಸಿದ್ದ ಜಾಮೀನಿನ ಷರತ್ತು ಸಡಿಲಿಕೆ ಮಾಡಿರುವ ಕರ್ನಾಟಕ ಹೈಕೋರ್ಟ್‌, ಅವರಿಗೆ 15 ದಿನಗಳ ಕಾಲ ಹಾಸನ, ಮೈಸೂರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಷರತ್ತು ಸಡಿಲಗೊಳಿಸುವಂತೆ ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ...
- Advertisement -spot_img

Latest News

ಸ್ನಾನಕ್ಕೆ ಹೋಗಿ ಸಾವಿನಲ್ಲೂ ಒಂದಾದ ಸಹೋದರಿಯರು!

ಪಿರಿಯಾಪಟ್ಟಣದಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಕಳವಳಗೊಳಿಸಿದೆ. ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಜೋನಿಗರಿ ಬೀದಿಯಲ್ಲಿ ವಾಸಿಸುತ್ತಿದ್ದ...
- Advertisement -spot_img