ಹಾಸನದ ಆಲೂರು ತಾಲೂಕಿನ ಹಂಚೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಓರ್ವ ವಿದ್ಯಾರ್ಥಿನಿಯನ್ನು ಅಪಹಿರಿಸಲು ಯತ್ನಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಬೆಳಗ್ಗೆ ಹಾಂಜಿಹಳ್ಳಿಯಲ್ಲಿನ ತನ್ನ ಮನೆಯಿಂದ 2 ಕಿಮೀ ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ಮಾರುತಿ ಓಮಿನಿ ಕಾರೊಂದು ರಸ್ತೆ ಮಧ್ಯೆಯೇ ನಿಂತಿದೆ.
ಆಗ, ವಿದ್ಯಾರ್ಥಿನಿ...
ಹಾಸನದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲಹೀನತೆ ವಿರುದ್ಧ ಈಗ ಜನಪ್ರತಿನಿಧಿಗಳನ್ನೇ ಎಚ್ಚರಿಸುವ ಹೋರಾಟ ಆರಂಭವಾಗಿದೆ. ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಇನ್ನೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ, ಜನಪರ ಸಂಘಟನೆಗಳು, ಮಹಿಳಾ ಪರ ಸಂಘಟನೆಗಳು ಮತ್ತು ನಾಗರಿಕರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಆಗಸ್ಟ್ 14 ಮತ್ತು 15ರಂದು ಹೋರಾಟದ ಕಠಿಣ ಹಂತವನ್ನು ಘೋಷಣೆ ಮಾಡಲಾಗಿದೆ.
ನಗರದ ಹಿಮ್ಸ್ ಸೂಪರ್...
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಇರುವ ವೆಂಕಟೇಶ್ವರ ಸ್ವಾಮಿ ದೇಗುಲದ ಜಾತ್ರೆಯಲ್ಲಿ ಆಹಾರ ಸೇವಿಸಿದ್ದ 50ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. ಈ ದೇಗುಲ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾಗಿದ್ದು, ಜಾತ್ರೆಗೆ ಸಾವಿರಾರು ಜನ ಆಗಮಿಸಿದ್ದು, ಭಾನುವಾರ ರಾತ್ರಿ ಸುಮಾರು ಒಂದುವರೆ ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿತ್ತು.
ಭಾನುವಾರ ರಾತ್ರಿ 7.30...
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ನಿಜವಾದ ಕಾರಣಗಳನ್ನು ತಿಳಿಯಲು ತಾಂತ್ರಿಕ ಸಮಿತಿ ಸದಸ್ಯರ ತಂಡವನ್ನು ರಚಿಸಲಾಗಿತ್ತು. ಇದೀಗ ಆ ವರದಿಯನ್ನು ಸಿದ್ಧಪಡಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆ ಬಳಿಕ ಸಚಿವ ದಿನೇಶ್ ಗುಂಡುರಾವ್ ತಾಂತ್ರಿಕ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ...
ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಹವರ್ ನಲ್ಲಿ ತುರ್ತು ಚಿಕಿತ್ಸೆ ಸಿಕ್ಕಿದರೆ ಬದುಕುಳಿಯುತ್ತಾರೆ. ತುರ್ತು ಚಿಕಿತ್ಸೆ ನೀಡುವ ಸ್ಟೆಮಿ ವ್ಯವಸ್ಥೆ, ಹಾಸನ ಜಿಲ್ಲೆಯ 3 ತಾಲೂಕು ಆಸ್ಪತ್ರೆಗಳಲ್ಲಿವೆ. ಈ 3 ಆಸ್ಪತ್ರೆಗಳಲ್ಲಿ ಕಳೆದ 2 ವರ್ಷದಲ್ಲಿ 37,774 ರೋಗಿಗಳಿಗೆ ಚಿಕಿತ್ಸೆ ಲಭಿಸಿದೆ. ಶೇಕಡ 87ರಷ್ಟು ಜನರು ಹೃದಯಾಘಾತ ಸಾವಿನಿಂದ ಬಚಾವಾಗಿದ್ದಾರೆ.
ಸ್ಟೆಮಿ ವ್ಯವಸ್ಥೆ ಎಂದರೇನು..?
ಹೃದಯಾಘಾತಕ್ಕೆ ಒಳಗಾದ ಜನರನ್ನು...
ಇತ್ತಿಚೀಗೆ ಹಾಸನ ಜಿಲ್ಲೆಯಲ್ಲಿ ಯುವಕ ಯುವತಿಯರಿಂದ ಹಿಡಿದು ವಯಸ್ಸಾದವರೂ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ದಿನಕ್ಕೆ ಒಂದು ಸಾವಾದರೂ ಆಗುತ್ತಲೇ ಬರುತ್ತಿದೆ. ಕಳೆದ 40 ದಿನಗಳಲ್ಲಿ ಹಾಸನದವ್ರೇ ಒಟ್ಟು 22 ಮಂದಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದ ಈ ಆಘಾತಕಾರಿ ಸುದ್ದಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಇವತ್ತೂ ಕೂಡ ಹೃದಯಾಘಾತದ ಸರಣಿ ಮುಂದುವರೆದಿದೆ. ಒಂದೇ ದಿನ...
ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನಾಂಬ ಉತ್ಸವದ ಕುರಿತು ಪೂರ್ವಭಾವಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಆಗಮಿಸಿದ್ದರು. ಈ ವೇಳೆ ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡದ ಹಿನ್ನೆಲೆ ಕರವೇ ಕಾರ್ಯಕರ್ತರು ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ರಾಜ್ಯಾದ್ಯಂತ ಹಲವಾರು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದರೂ ಹಾಸನ ಜಿಲ್ಲೆಯನ್ನು ಮಾತ್ರ ಬರಪೀಡಿತ ಪ್ರದೇಶದ...