ನಾರ್ವೆ: ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದ ರಷ್ಯಾದ ಬೇಹುಗಾರ ತಿಮಿಂಗಿಲ ಇದೀಗ ನಾರ್ವೆ ಕರಾವಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ರಷ್ಯನ್ ಸ್ಪೈ ತಿಮಿಂಗಿಲ (Russian Spy Whale) ಅಂತಾನೇ ಫೇಮಸ್ ಆಗಿದ್ದ ಹ್ವಾಲ್ಡಿಮಿರ್ (Hvaldimir) ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ಪತ್ತೆಯಾಗಿದ್ದು, ಕ್ರೇನ್ ಸಹಾಯದಿಂದ ತಿಮಿಂಗಿಲ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ...