ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...