Sunday, December 28, 2025

kannada movies

ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಪಾಕ್ ನಟಿ ಕೈಹಿಡಿದ ಶೊಯೇಬ್ ಮಲ್ಲಿಕ್‌

Sports News: ಹಲವು ದಿನಗಳಿಂದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೇಟಿಗ ಶೊಯೇಬ್ ಮಲ್ಲಿಕ್ ವೈವಾಹಿಕ ಜೀವನ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇಂದು ಅದು ನಿಜವಾಗಿದ್ದು, ಶೋಯೇಬ್ ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು, ಮೂರನೇಯ ಮದುವೆಯಾಗಿದ್ದಾನೆ. ಪಾಕ್ ನಟಿ ಸನಾ ಜಾವೇದ್‌ರನ್ನು ಶೋಯೇಬ್ ವಿವಾಹವಾಗಿದ್ದು, ಈಕೆ 2020ರಲ್ಲಿ ವಿವಾಹವಾಗಿದ್ದರು....

ಅನ್ನಪೂರ್ಣಿ ಸಿನಿಮಾದಲ್ಲಿ ರಾಮನ ಡೈಲಾಗ್ ಬಗ್ಗೆ ಹೇಳಿಕೆ ನೀಡಿದ ನಟಿ ನಯನತಾರಾ

Movie News: ಅನ್ನಪೂರ್ಣಿ ಸಿನಿಮಾದಲ್ಲಿ ರಾಮ ಕೂಡ ವನವಾಸದಲ್ಲಿದ್ದಾಗ, ಮಾಂಸಾಹಾರ ಸೇವಿಸುತ್ತಿದ್ದ ಎಂಬ ಡೈಲಾಗ್ ಹೇಳಲಾಗಿತ್ತು. ಈ ಬಗ್ಗೆ ರಾಮಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನೆಟ್‌ಫ್ಲಿಕ್ಸ್ ವಿರುದ್ಧ ದೂರು ದಾಖಲಿಸಿದ್ದರು. ಈ ಕಾರಣಕ್ಕೆ ನೆಟ್ ಫ್ಲಿಕ್ಸ್‌ನವರು, ತಮ್ಮ್ ಆ್ಯಪಿನಿಂದ ಅನ್ನಪೂರ್ಣಿ ಸಿನಿಮಾ ಡಿಲೀಟ್ ಮಾಡಿದ್ದರು. ಇದೀಗ ಮೊದಲ ಬಾರಿ, ಈ ಚಿತ್ರದ ನಟಿ ನಯನತಾರಾ ಮೌನ...

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ನಾಮ ನಿರ್ದೇಶನ ಅನೌನ್ಸ್

Movie News: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು, ನಟ...

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

Movie News: ಈಗ ಎಲ್ಲೆಲ್ಲೂ ಬರೀ ರಾಮನದ್ದೇ ಭಜನೆ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಯಾವ ಚಾನೆಲ್ ಹಾಕಿದರೂ ಅಯೋಧ್ಯಾದ್ದೇ ಸುದ್ದಿ. ಒಟ್ಟಾರೆಯಾಗಿ ಸರ್ವಂ ರಾಮಮಯಂ ಅಂತಾನೇ ಹೇಳಬಹುದು. ಏಕೆಂದರೆ ಹಲವು ವರ್ಷಗಳ ರಾಮಭಕ್ತರ ಕನಸಾದ ರಾಮಮಂದಿರ ಉದ್ಘಾಟನೆ ಇದೇ ತಿಂಗಳು 22ರಂದು ನೆರವೇರಲಿದೆ. ಈ ಮಧ್ಯೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಯೋಧ್ಯಾ...

ಉಪಾಧ್ಯಕ್ಷನಿಗೆ ಶಿವಣ್ಣ ಸಾಥ್.. ಟ್ರೇಲರ್ ರಿಲೀಸ್ ಮಾಡಿದ ಸೆಂಚುರಿ ಸ್ಟಾರ್ :ಜ.26ಕ್ಕೆ ಉಪಾಧ್ಯಕ್ಷರ ಆರ್ಭಟ

Movie News: ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ "ಉಪಾಧ್ಯಕ್ಷ" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ ಎಂದು ಮಾತನಾಡಿದ ಶಿವರಾಜಕುಮಾರ್,...

ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪೊಂಗಲ್ ಆಚರಿಸಿದ ಅಭಿಮಾನಿ..

Movie News: ಭಾರತದಲ್ಲಿ ನೀವು ಚಿತ್ರ ವಿಚಿತ್ರ ಅಭಿಮಾನಿಗಳನ್ನು ಕಾಣಬಹುದು. ಕೆಲವರು ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿಸುತ್ತಾರೆ. ಅವರ ಮೂರ್ತಿಯನ್ನೇ ಸ್ಥಾಪಿಸುತ್ತಾರೆ. ಮತ್ತೆ ಕೆಲವರು ನೆಚ್ಚಿನ ನಟನಿಗಾಗಿ ಉಪವಾಸ ಮಾಡುತ್ತಾರೆ. ಹುಟ್ಟುಹಬ್ಬದ ದಿನ ತಾವು ಅನ್ನ ದಾನ, ರಕ್ತದಾನ ಶಿಬಿರ ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಅದೇ ರೀತಿ ರಜನಿಕಾಂತ್...

ಇರಾ ಖಾನ್ ಮದುವೆಯಲ್ಲಿ ಜೈ ಶ್ರೀರಾಮ್ ಎಂದ ನಟಿ ಕಂಗನಾ ರಾಣಾವತ್

Movie News: ಹಿಂದೂ, ಕ್ರಿಶ್ಚಿಯನ್ ಧರ್ಮದ ಪ್ರಕಾರ ವಿವಾಹವಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್, ಮದುವೆ ರಿಸೆಪ್ಶನ್ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆಯಿತು. ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಮಗಳಾಗಿರುವ ಇರಾ ಖಾನ್, ನುಪೂರ್ ಶಿಖರೆ ಎಂಬುವವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಇವರ ರಿಸೆಪ್ಶನ್ ಕಾರ್ಯಕ್ರಮ...

ಹಿರಿಯ ನಟಿ ದಿ.ಲೀಲಾವತಿ ಸ್ಮಾರಕದ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್‌

Movie News: 2023ರ ಡಿಸೆಂಬರ್‌ 8ರಂದು ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇಂದು ಅವರ ಸ್ಮಾರಕ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಅವರ ಮಗ, ನಟ ವಿನೋದ್ ರಾಜ್, ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ನಟಿ ಲೀಲಾವತಿ ಮನೆ ಇದ್ದು, ಅಲ್ಲೇ ಇರುವ ತೋಟದ ಪಕ್ಕದಲ್ಲಿ, ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ....

ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಕಾಂತಾರ ಬೆಡಗಿ ಸಪ್ತಮಿ..

Movie News: ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದ ಮೂಲಕ ಸಪ್ತಮಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೂ ಕೂಡ, ಫೇಮಸ್ ಆಗಿದ್ದು ಮಾತ್ರ ಕಾಂತಾರ ಸಿನಿಮಾದಿಂದ. ಕಾಂತಾರ ಸಿನಿಮಾ ಬಳಿಕ ಪ್ರಸಿದ್ಧಿ ಪಡೆದಿದ್ದ ಸ್ಯಾಂಡಲ್‌ವುಡ್ ಬೆಡಗಿ ಸಪ್ತಮಿ ಗೌಡ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ನಟಿಯಾದ ಸಪ್ತಮಿ ಗೌಡ, ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ...

ಕಂಗನಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು..? ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು..

Movie News: ನಟಿ ಕಂಗನಾ ರಾಣಾವತ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಪ್ಪು ಮಾಡಿದವರ ಬಗ್ಗೆ ಮುಖಕ್ಕೆ ಹೊಡೆದಂತೆ ಮಾತನಾಡುವ ಕಂಗನಾ, ಇಲ್ಲಿಯವರೆಗೂ ಹಲವರಿಗೆ ಪ್ರತ್ಯುತ್ತರ ಕೊಟ್ಟೇ ಸುದ್ದಿಯಾಗಿದ್ದು. ಆದರೆ ಈ ಬಾರಿ ಕಂಗನಾ, ಓರ್ವ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಸೆರೆಹಿಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಯಾರು ಆ ವ್ಯಕ್ತಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದು,...
- Advertisement -spot_img

Latest News

ಯೂನಸ್ ಆಟಕ್ಕೆ ಭಾರತ ಟಾರ್ಗೆಟ್?

ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮ‌ರ್ ಸೋನಾರ್...
- Advertisement -spot_img