Banglore News : ಸಚಿವ ಡಿ.ಸುಧಾಕರ್ ಮಹಿಳೆಗೆ ಅವಾಜ್ ಹಾಕಿದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರ್ತೀನಿ ಬಾ. ಯಾವನ್ ನನ್ನತ್ರ ಗಾಂಚಾಲಿ, ಗೀಂಚಾಲಿ ನಡೆಯಲ್ಲ. ಎಲ್ಲದಕ್ಕೂ ರೆಡಿಯಾಗಿ ಬಂದಿರ್ತೀವಿ. ಸತ್ತೋಗಿರೋ ಪ್ರಾಪರ್ಟಿ ಉಳಿಸಿದ್ದೀನಿ. ಏ ಕೇಳಮ್ಮಾ ಸುಮ್ಮನೇ ಇಲ್ಲಿ’ ಇದು ಸಿದ್ದರಾಮಯ್ಯ ಸರ್ಕಾರದ ಯೋಜನೆ...
International News : ಭಾರೀ ಪ್ರವಾಹಕ್ಕೆ ತತ್ತರಿಸಿ ಹೋಗಿದೆ ಉತ್ತರ ಆಫ್ರಿಕಾದ ಲಿಬಿಯಾ. ಭಾರೀ ಮಳೆ ಮತ್ತು ಪ್ರವಾಹದಿಂದ 2,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲಿಬಿಯಾ ದೇಶದ ಪ್ರಧಾನಿ ಒಸಾಮಾ ಹಮದ್ ತಿಳಿಸಿದ್ದಾರೆ.
ಸುಮಾರು 5-6 ಸಾವಿರ ಜನರು ನಾಪತ್ತೆಯಾಗಿದ್ದಾರೆ. ಮೆಡಿಟರೇನಿಯನ್ ಸಮುದ್ರದಲ್ಲಿ ಡೇನಿಯಲ್ ಚಂಡಮಾರುತವು ಈ ಅನಾಹುತಕ್ಕೆ ಕಾರಣವಾಗಿದೆ.
ಪ್ರಮುಖವಾಗಿ 'ಡೆರ್ನಾ' ನಗರದ ಬಳಿ...
Political News : ರಾಜಕೀಯದಲ್ಲಿ ಇದೀಗ ಮೈತ್ರಿ ಸದ್ದು ಕೇಳಿ ಬರುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಬಿಎಸ್ ವೈ ಮಾತನಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿ ಎಸ್ ಯಡಿಯೂರಪ್ಪ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ಹೋಗುತ್ತಿರುವೆನೆಂದು ಹೇಳಿದರು.
ಜೆಡಿಎಸ್ ಜೊತೆ ಮೈತ್ರಿಯ ಪ್ರಸ್ತಾಪ ಅವರೇ...
Film News : 'ಕಾಟೇರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರೋ ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ್ದಾರೆ.
'ಕಾಟೇರ' ದರ್ಶನ್ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾಟೇರ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಆರಾಧನಾ ನಟನೆಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಹೋಲಿಕೆ ಮಾಡಿದ್ದಾರೆ. ದರ್ಶನ್ ಜೊತೆ ರಕ್ಷಿತಾ ಹಾಗೂ ರಚಿತಾ...
Chithradurga News : ಅಪೌಷ್ಟಿಕತೆ ಮಕ್ಕಳು ಹುಟ್ಟುವುದನ್ನು ತಡೆಗಟ್ಟಲು ಕಿಶೋರಿಯರನ್ನು, ಗರ್ಭಿಣಿಯರನ್ನು, ಅಪೌಷ್ಟಿಕತೆಯಿಂದ ರಕ್ಷಿಸುವುದೆ ಏಕೈಕ ಮಾರ್ಗ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವೃತ್ತ ಮೇಲ್ವಿಚಾರಕಿ ಯಾದ ನಾಗರತ್ನಮ್ಮ ರವರು ಅಭಿಪ್ರಾಯಸಿದರು.
ನಾಯಕನಹಟ್ಟಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಇಲಾಖೆ ವತಿಯಿಂದ ನಡೆದ ಪೋಷಣೆ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ನಾಗರತ್ನ ರವರು ಕೇಂದ್ರ...
Technology News : ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲವಾರು ವರ್ಷಗಳಿಂದ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಡೀಸೆಲ್ ಕಾರುಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹಾಕಲು ಮುಂದಾಗಿರುವಂತಿದೆ.
ವರದಿ ಪ್ರಕಾರ ಸರ್ಕಾರ ಡೀಸೆಲ್ ಕಾರುಗಳ ಮೇಲೆ ಶೇ. 10ರಷ್ಟು ತೆರಿಗೆ ಹೆಚ್ಚಳ ಮಾಡಲು ಯೋಜಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕೇಂದ್ರ...
Banglore News : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಜ್ಜಾಗಿದೆ.
ಕೆಂಪೇಗೌಡ ಏರ್ಪೋಟ್ ಎಂಡಿ ಹರಿಮಾರನ್ ಅವರು ಇಂದು ಟರ್ಮಿನಲ್-2ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಿದರು. ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿದಿದೆ. ಇನ್ನು ಹಳೆಯ ಟರ್ಮಿನಲ್-1 ದೇಶಿಯ ವಿಮಾನಗಳ ಹಾರಾಟಕ್ಕೆ ಮೀಸಲಿಡಲಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ...
Manglore News : ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ. ಇವರು ಕೇರಳದ ತಿರುವನಂತಪುರ ನಿವಾಸಿ ಹಾಗೂ ಯುನಿಯನ್ ಬ್ಯಾಂಕ್ ಅಧಿಕಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್‌ನಲ್ಲಿ ಬ್ಯಾಂಕ್ ಅಧಿಕಾರಿ ಉಳಿದುಕೊಂಡಿದ್ದರು. ಇಂದು...
State News : ಶಾಲೆಗೆ ಹೋಗದೆ ಕುರಿ ಕಾಯುತ್ತಿದ್ದ ಬಾಲಕನನ್ನು ಸಿಎಂ ಸಿದ್ದರಾಮಯ್ಯ ಮರಳಿ ಶಾಲೆಗೆ ಸೇರ್ಪಡೆಗೊಳಿಸಿದ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ 11 ವರ್ಷದ ಬಾಲಕ ಯೋಗೀಶ್ ಎಂದು ಹೇಳಲಾಗಿದೆ. ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದ.ಹೀಗಾಗಿ ಈ ವಿಚಾರವನ್ನು ಗ್ರಾಮದ ಮಹೇಂದ್ರ ಎಂಬ ಯುವಕ ಸಿಎಂ ಎಕ್ಸ್ ಅಂದರೆ ಟ್ಟಿಟ್ಟರ್ ಖಾತೆಗೆ...
Banglore News : ಖಾಸಗಿ ಸಾರಿಗೆ ಟೆನ್ಷನ್ ಮುಕ್ತಾಯದ ಬಳಿಕ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಮುಷ್ಕರಕ್ಕೆ ಮುಂದಾಗಿದ್ದಾರೆ.
ಶಿಕ್ಷಣ ಇಲಾಖೆಯ ಹೊಸ ನಿರ್ಧಾರಕ್ಕೆ ಅಂಗನವಾಡಿ ಸಿಬ್ಬಂದಿ ಸಿಡಿದೆದ್ದು, ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 15ರಂದು ಶುಕ್ರವಾರ ಬೃಹತ್ ಪ್ರತಿಭಟನೆಗೆ ಅಂಗನವಾಡಿ...
Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..!
ಬೆಳಗಾವಿಯ ಸಾಂಬ್ರಾ...