ಕೊಪ್ಪಳದಲ್ಲಿ ಕೇಂದ್ರ ಸರ್ಕಾರದ ದಮನಕಾರಿ ನೀತಿ ಖಂಡಿಸಿ ಪಂಜಿನ ಮೆರವಣಿಗೆ

Koppala News: ​ದೆಹಲಿ ಹೋರಾಟಕ್ಕೆ ಬೆಂಬಲ ಸೂಚಿಸಿ ಹಾಗೂ ಕೇಂದ್ರ ಸರ್ಕಾರದ ದಮನಕಾರಿ ನೀತಿಯನ್ನು ಖಂಡಿಸಿ ಕೊಪ್ಪಳದಲ್ಲಿ ಆಕ್ರೋಶದ ಪಂಜಿನ ಮೆರವಣಿಗೆ ನಡೆಯಿತು.

​ಕೊಪ್ಪಳದ ಹೃದಯಭಾಗವಾದ ಅಶೋಕ ಸರ್ಕಲ್ ನಲ್ಲಿ ​ಹೋರಾಟಗಾರರ ತಡೆಗೆ ರೈಲು ಹಾಗೂ ಬಸ್ ಸಂಚಾರ ಬಂದ್ ಮಾಡಿರುವುದು ಮತ್ತು ಹೋರಾಟಗಾರರನ್ನು ಎಲ್ಲೆಂದರಲ್ಲಿ ಬಂಧಿಸುತ್ತಿರುವ ಕೇಂದ್ರದ ಕ್ರಮವನ್ನು ತೀವ್ರವಾಗಿ ವಿರೋಧಿಸಲಾಯಿತು.

​ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ಹತ್ತಿಕ್ಕದೆ, ಕೂಡಲೇ ರೈತರ ಮತ್ತು ಹೋರಾಟಗಾರರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು.

​ಜನರ ಧ್ವನಿಯನ್ನು ಅಧಿಕಾರದ ಬಲದಿಂದ ಅಡಗಿಸಲು ಸಾಧ್ಯವಿಲ್ಲ. ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ಎಂದೆಂದಿಗೂ ನಿರಂತರ!” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

About The Author