Sunday, March 8, 2026

]karnataka tv

50 ವರ್ಷ ಭವಿಷ್ಯಕ್ಕೆ ಬೃಹತ್ ಯೋಜನೆ – ಕುಮಾರಸ್ವಾಮಿ ಮೇಗಾ ಅನೌನ್ಸ್‌ಮೆಂಟ್

ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಹೊಸ ಜೀವ ತುಂಬುವ ಪ್ರಯತ್ನಕ್ಕೆ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ. ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕಾಗಿ ₹4,000 ಕೋಟಿಗಳ ವಿಸ್ಕೃತ ಯೋಜನಾ ವರದಿ ಸಿದ್ಧವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಪುನಶ್ಚೇತನ ಯೋಜನೆಗೆ ಭಾರತೀಯ ಉಕ್ಕು ಪ್ರಾಧಿಕಾರ ಬಂಡವಾಳ ಹೂಡಿಕೆ...

ನಾವೆಲ್ಲ ಒಂದಾಗಲು ಕಾಲ ಬಂದಿದೆ – ಮರಾಠ ಸಮಾಜಕ್ಕೆ ಲಾಡ್ ಕರೆ!

ಬೀದರ್‌ನಲ್ಲಿ ನಡೆದ ಸ್ವಾಭಿಮಾನಿ ಮರಾಠ ಸಮಾವೇಶದಲ್ಲಿ, ಮರಾಠ ಸಮುದಾಯದ ಒಗ್ಗಟ್ಟು, ಪ್ರಗತಿ ಮತ್ತು ಶೈಕ್ಷಣಿಕ ಶಕ್ತಿಕರಣದ ಬಗ್ಗೆ ದಿಟ್ಟ ಸಂದೇಶ ನೀಡಿದ್ದಾರೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌. ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ, ಮರಾಠ ಸಮಾಜದ ಬಂಧುಗಳು ಸಂಕಷ್ಟದಲ್ಲಿದ್ದಾರೆ, ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು...

ಗರ್ಭಿಣಿಯ ಮೇಲೆ ಅತ್ಯಾ*ಚಾರ? ಕಾಂಗ್ರೆಸ್‌ ಶಾಸಕ ಮನೆಯಲ್ಲಿ ಶೋಧ

ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪಗಳು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತಿಗೊಳಗಾಗಿರುವ ರಾಹುಲ್ ಮಾಂಕೂಟತ್ತಿಲ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಪೊಲೀಸರು ಶೋಧ ನಡೆಸಿದ್ದಾರೆ. ಅತ್ಯಾಚಾರದ ಆರೋಪಕ್ಕೆ ಗುರಿಯಾದ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಅಮಾನತಿಗೆ ಒಳಪಡಿಸಿದ ಬಳಿಕ, ಪೊಲೀಸರು ಭಾನುವಾರ ಅವರ...

ಡಿಕೆಶಿ ಸಿಎಂ ಅಂತಾ ಘೋಷಿಸಲಿ! ಒಕ್ಕಲಿಗ ಸಂಘದಿಂದ ಬೈಕ್‌ ರ್ಯಾಲಿ

ಮೈಸೂರು ನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಘೋಷಿಸುವಂತೆ ಒತ್ತಾಯಿಸಿ ಇಂದು ಬೈಕ್ ರ್ಯಾಲಿ ಆಯೋಜಿಸಲಾಯಿತು. ಒಕ್ಕಲಿಗ ನೇತೃತ್ವದಲ್ಲಿ ನಡೆದ ಈ ಮೆರವಣಿಗೆ ಒಂಟಿಕೊಪ್ಪಲಿನ ಚಂದ್ರಮೌಳೇಶ್ವರ ದೇಗುಲದಿಂದ ಆರಂಭವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಮಾರೋಪಗೊಂಡಿತು. ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್ ಅವರ...

DK ಆಗಮನಕ್ಕೂ ಮುನ್ನವೇ ಅಪಚಾರ? ದೇಗುಲದಲ್ಲಿ ದಿಢೀರ್ ಹೆಜ್ಜೇನು ದಾಳಿ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನದಲ್ಲಿ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧಾರ್ಮಿಕ ಭೇಟಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್‌ ಮುಗಿಸಿದ ಬಳಿಕ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಮೃತ್ಯುಂಜಯ ಹೋಮದಲ್ಲಿ ಭಾಗವಹಿಸಿದರು. ವಿಶೇಷ ಪೂಜಾ ವಿಧಿಗಳು ಮುಕ್ತಾಯವಾದ ನಂತರ ಅವರು...

ಏನೇ ಮಾತುಕತೆ ಆದ್ರೂ ಅಂತಿಮವಾಗಿ ದೆಹಲಿಗೆ ಹೋಗಬೇಕು!

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಏನೇ ಮಾತುಕತೆ ಆದರೂ ಅಂತಿಮವಾಗಿ ದೆಹಲಿಗೆ ಹೋಗಬೇಕು ಎಂದರು. ಮಾಧ್ಯಮಗಳ ಜೊತೆ ಇಂದು ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ, ಇವರ ಹಂತದಲ್ಲಿ ಮುಗಿದರೆ ಹೋಯ್ತು ಹೈಕಮಾಂಡ್ ನಿರ್ದೇಶನದ ಮೇರೆಗೆ ಮೀಟಿಂಗ್ ಮಾಡಿದ್ದಾರೆ....

ದಕ್ಷಿಣ ಭಾರತಕ್ಕೆ ಭಾರಿ ಅಪಾಯ – ದಿತ್ವಾ ಸೈಕ್ಲೋನ್‌! ರೆಡ್ ಅಲರ್ಟ್

ದಿತ್ವಾ’ ಚಂಡಮಾರುತ ತಮಿಳುನಾಡನ್ನು ಸಮೀಪಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ಜಾರಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಪ್ರಸ್ತುತ ಶ್ರೀಲಂಕಾ ಮತ್ತು ನೈಋತ್ಯ ಬಂಗಾಳ ಕೊಲ್ಲಿಯ ಸಮೀಪದಲ್ಲಿರುವ ಈ ಚಂಡಮಾರುತವು ಸ್ವಲ್ಪ ತೀವ್ರಗೊಂಡಿದೆ ಮತ್ತು ನವೆಂಬರ್ 30ರ ಮುಂಜಾನೆ ಉತ್ತರ ತಮಿಳುನಾಡು–ಪುದುಚೇರಿ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉತ್ತರ–ವಾಯವ್ಯ ದಿಕ್ಕಿಗೆ...

ದಾಳಿ ಬಳಿಕ ಅಮೆರಿಕ ಮಹತ್ವದ ಹೆಜ್ಜೆ – ಇನ್ಮುಂದೆ ಯಾರಿಗೂ ಆಶ್ರಯ ಇಲ್ಲ

ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿ ಘಟನೆಯ ನಂತರ, ಅಮೆರಿಕ ಸರ್ಕಾರದಿಂದ ಪ್ರಮುಖ ನಿರ್ಧಾರ ಪ್ರಕಟವಾಗಿದೆ. ಟ್ರಂಪ್ ಆಡಳಿತವು ಅಮೆರಿಕದ ಆಶ್ರಯ ಪ್ರಕರಣಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಇದರೊಂದಿಗೆ, ಅಫ್ಘಾನ್ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ನೀಡುವಿಕೆಯನ್ನು ಕೂಡ ನಿಲ್ಲಿಸಲಾಗಿದೆ. ಶ್ವೇತಭವನದಿಂದ ಅಲ್ಪ ದೂರದಲ್ಲೇ ನಡೆದ ದಾಳಿಯಲ್ಲಿ, ಇಬ್ಬರು ರಾಷ್ಟ್ರೀಯ ಗಾರ್ಡ್ ಸೈನಿಕರು ಗುಂಡೇಟಿಗೆ ಗುರಿಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ,...

ಶೀಘ್ರದಲ್ಲೇ 18,000 ಶಿಕ್ಷಕರ ನೇಮಕಾತಿ – ಸಚಿವ ಮಧು ಬಂಗಾರಪ್ಪ ಘೋಷಣೆ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಕೊರತೆಯನ್ನು ನಿವಾರಿಸಲು, ಒಟ್ಟು 18 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ 12 ಸಾವಿರ ಮತ್ತು ಅನುದಾನಿತ ಶಾಲೆಗಳಿಗೆ 6 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಮುಂದಿನ...

APMCಯಲ್ಲಿ ಕಮೀಷನ್ ಹಾವಳಿಗೆ ಗರಂ ಆದ ಉಪ ಲೋಕಾಯುಕ್ತ !

ಇಂದು ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಪಟೂರು ನಗರದ ವಿವಿಧ ಸ್ಥಳಗಳಿಗೆ ಅಚಾನಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ತರಕಾರಿ ಮಾರುಕಟ್ಟೆ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಬಾಲಕರ ವಿದ್ಯಾರ್ಥಿ ವಸತಿಗೃಹ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರು ಪರಿಸ್ಥಿತಿ ನೇರವಾಗಿ ಅವಲೋಕಿಸಿದರು. ತರಕಾರಿ ಮಾರುಕಟ್ಟೆ ಪರಿಶೀಲನೆಯ ವೇಳೆ, ದಲ್ಲಾಳಿಗಳ ಕಮಿಷನ್ ಹಾವಳಿ ಕುರಿತು ರೈತರು...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img