Wednesday, October 21, 2026

]karnataka tv

ಅಂಬಾರಿಯಿಂದ ರಥದವರೆಗೆ ಚಾಮುಂಡೇಶ್ವರಿ ವಿಜಯಯಾತ್ರೆ!

ಮೊನ್ನೆ ಮೊನ್ನೆಯಷ್ಟೆ ಅದ್ದೂರಿಯಾಗಿ ನಡೆದ ನಾಡಹಬ್ಬ ದಸರಾದಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ವಿಜೃಂಭಿಸಿದ ನಂತರ, ಇಂದು ಚಾಮುಂಡಿ ಬೆಟ್ಟದಲ್ಲಿ ರಥಾರೂಢಳಾಗಿ ಭಕ್ತರಿಗೆ ಕೃಪ ಕಟಾಕ್ಷ ನೀಡಿದ್ದಾಳೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಚಾಮುಂಡೇಶ್ವರಿಗೆ ಜಯವಾಗಲಿ… ಎಂಬ ಘೋಷಣೆ, ವಾದ್ಯಗೋಷ್ಟಿಗಳ ನಾದ,...

ತಿಮ್ಮಪ್ಪನ ಭಕ್ತರಿಗೆ ವರುಣನ ಅಡ್ಡಿ : 24 ಗಂಟೆ ಆರೆಂಜ್‌ ಅಲರ್ಟ್‌ ಘೋಷಣೆ

ಶನಿವಾರ ಬೆಳಿಗ್ಗೆಯಿಂದ ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಜನ ಜೀವನವನ್ನು ಸ್ತಬ್ಧಗೊಳಿಸಿದೆ. ಕೆಳಮಟ್ಟದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಮುಂದಿನ 24 ಗಂಟೆಗಳವರೆಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿದೆ. ತಿರುಪತಿ ನಗರದಲ್ಲಿ ಪೂರ್ವ ಭಾಗದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ, ಲಕ್ಷ್ಮೀಪುರಂ ಸರ್ಕಲ್‌, ನಾರಾಯಣಪುರಂ ಹಾಗೂ ಪ್ರಮುಖ ಅಂಡರ್‌ಪಾಸ್‌ಗಳು...

ಗಜಪಡೆ ನಾಡಿನಿಂದ ಮತ್ತೆ ಕಾಡಿಗೆ! : ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬೀಳ್ಕೊಡುಗೆ ನೀಡಲಾಗಿದೆ. ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ ಕಾಡಿನತ್ತ ಹೊರಟಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಬೀಳ್ಕೊಡುಗೆ ನೀಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ. 14 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಲಾಯಿತು. ಎಲ್ಲ ಆನೆಗಳು ಏಕಕಾಲಕ್ಕೆ ಸೊಂಡಿಲನ್ನೆತ್ತಿ...

ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ : ₹25 ಲಕ್ಷ ಬಹುಮಾನ!

ಮಂಡ್ಯ ಜಿಲ್ಲೆಗೆ ಮತ್ತೊಂದು ಹೆಮ್ಮೆ ತಂದುಕೊಡುವ ಸಾಧನೆ ದಾಖಲಾಗಿದೆ. ಜಲ ಶಕ್ತಿ ಅಭಿಯಾನದ ಅಂಗವಾಗಿ ಜನ ಸಂಚಯ – ಜನ ಭಾಗಿದಾರಿ ಅಭಿಯಾನದಡಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹಾಗೂ ನೀರಿನ ಸಮಸ್ಯೆ ಪರಿಹಾರಕ್ಕಾಗಿ...

ಹಿಂದೂ ಯುವತಿಯರೇ ಟಾರ್ಗೆಟ್.. ಗರ್ಭಿಣಿ ಮಾಡೋದೇ ಫ್ಯಾಷನ್ ಅಂತೆ!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಚಿನ್ ಎಂಬ ಹೆಸರಿನಲ್ಲಿ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಶಾದ್ ಸಿದ್ದಿಖಿ ಎಂಬ ಯುವಕ ತನ್ನ ನಿಜವಾದ ಗುರುತನ್ನು ಮುಚ್ಚಿಟ್ಟು ಹಿಂದೂ ಹುಡುಗಿಯರ ಮೇಲೆ ಮೋಸ ಮಾಡುತ್ತಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಆತ ತನಗೆ ಮಚಲಿ ಗ್ಯಾಂಗ್ ಸದಸ್ಯತ್ವವಿದೆ ಹಾಗೂ ಹಿಂದೂ ಯುವತಿಯರನ್ನು ಗರ್ಭಿಣಿಯರನ್ನಾಗಿ...

ದೇವೇಗೌಡರ ಮಾತೇ ಶಾಸನ : ಅಶ್ವಥ್ ನಾರಾಯಣ ಸ್ಪಷ್ಟನೆ

ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಬಿಜೆಪಿ–ಜೆಡಿಎಸ್ ಮೈತ್ರಿ ಮುಂದುವರಿಕೆಯನ್ನು ಸ್ವಾಗತಿಸಿದ್ದಾರೆ. ಮೈತ್ರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಗತ್ಯ. ಈ ಬಗ್ಗೆ ರಾಜ್ಯಾಧ್ಯಕ್ಷರು, ದೇವೇಗೌಡರು ಎಲ್ಲರೂ ಹೇಳಿರುವರು. ಲೋಕಸಭೆ ಚುನಾವಣೆಯಲ್ಲಿ ಕಂಡ ಶಕ್ತಿ ಮುಂದುವರಿಯುತ್ತದೆ ಎಂದರು. ಜಾತಿ ಗಣತಿ ಕುರಿತಾಗಿ ಸಚಿವ ಕೃಷ್ಣ ಭೈರೇಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎನ್ನುವುದು...

ಚಂಡಮಾರುತದ ಆರ್ಭಟ : ಅ.11ವರೆಗೂ ಭೀಕರ ಮಳೆ

ಈ ವರ್ಷ ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಕಡಿಮೆಯಾಗುವ ಹಾಗೇ ಕಾಣುತ್ತಿಲ್ಲ. ಅಬ್ಬಾ! ಮಳೆ ಕಡಿಮೆಯಾಯ್ತು ಎಂದು ಅಂದು ಕೊಳ್ಳುವಷ್ಟರಲ್ಲಿ ಮರುದಿನವೇ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 11ರವರೆಗೂ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಚಂಡಮಾರುತ ಪ್ರಭಾವದಿಂದ ಕಳೆದ ಒಂದು ವಾರದಿಂದಲೂ ಧಾರಕಾರ ಮಳೆ...

ತಮ್ಮನ ಅಕಾಲಿಕ ಸಾವು ಅಣ್ಣನ ಹೃದಯ ನಿಲ್ಲಿಸಿತು!

ಅಣ್ಣ–ತಮ್ಮ ಎನ್ನುವುದು ಕೇವಲ ಸಂಬಂಧವಲ್ಲ… ಅದು ಹೃದಯದಿಂದ ಹುಟ್ಟುವ ಸುಂದರ ಬಾಂಧವ್ಯ. ಆಸ್ತಿಗಾಗಿ ಜಗಳವಾಡುವ ಸಹೋದರರು ಒಂದು ಕಡೆ ಇದ್ದರೆ, ಬದುಕಿನ ಕೊನೆಯ ಕ್ಷಣಗಳಲ್ಲೂ ಬಾಂಧವ್ಯದ ನಂಟು ಅಳೆಯದ ಈ ಅಣ್ಣ–ತಮ್ಮರ ಕಥೆ ಮತ್ತೊಂದು ಕಡೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಊರನ್ನು ಮೌನದಲ್ಲಿ...

ನಟಿ ತ್ರಿಷಾ, ಸ್ಟಾಲಿನ್ ಮನೆಗೆ ಬಾಂಬ್ ಬೆದರಿಕೆ : ವಿಜಯ್ ಅಭಿಮಾನಿಗಳ ಕೆಲಸ?

ಚೆನ್ನೈನಲ್ಲಿ ಶುಕ್ರವಾರ ಬೆಳಿಗ್ಗೆ ಕೆಲ ಅಜ್ಞಾತರು ಪೊಲೀಸರಿಗೆ ನಕಲಿ ಬಾಂಬ್ ಕರೆ ನೀಡಿ ಗಲಿಬಿಲಿಗೊಳಿಸಿದ್ದಾರೆ. ಖ್ಯಾತ ನಟಿ ತ್ರಿಷಾ ಸೇರಿದಂತೆ ಹಲವು ಗಣ್ಯರ ಮನೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಧಮ್ಕಿ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ತುರ್ತು ಕ್ರಮ ಕೈಗೊಂಡಿದ್ದಾರೆ. ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್‌ ಸಹಿತ ಪೊಲೀಸರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ...

ರಾಜಕೀಯದಲ್ಲಿ ನವೆಂಬರ್​ ಕ್ರಾಂತಿ? ಸುರ್ಜೇವಾಲ ಸ್ಫೋಟಕ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವ ನವೆಂಬರ್ ಕ್ರಾಂತಿ ಕುರಿತು ಸಿಎಂ ಹಾಗೂ ಡಿಸಿಎಂ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದೊಳಗೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿ...
- Advertisement -spot_img

Latest News

ಖಾಸಗಿ ಏಜೆನ್ಸಿಗಳಿಂದ ಇಲಾಖಾ ತಪಾಸಣೆ – ಸರ್ಕಾರದಿಂದ ಮಹತ್ವದ ಆದೇಶ!

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯಂತ್ರಣಾತ್ಮಕ ತಪಾಸಣೆ ಮತ್ತು ಸರ್ಟಿಫಿಕೇಶನ್‌ಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದಕ್ಕೆ ಅಂತ್ಯಹಾಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪರಿಶೀಲನಾ ಸಿಬ್ಬಂದಿ ಅಭಾವವಿರುವ...
- Advertisement -spot_img