ರಾಜ್ಯ ಕಾಂಗ್ರೆಸ್‌ನೊಳಗೆ ಏನೋ ಸರಿ ಇಲ್ಲ ಅನ್ನುವುದು ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆಯೇ ಶೀತಲ ಸಮರ ತಾರಕಕ್ಕೇರುತ್ತಿದೆ. ಸಿದ್ದು ಬಲಗೈ ಬಂಟ ಕೆ.ಎನ್. ರಾಜಣ್ಣ ಮತ್ತು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ನಡುವೆ ಟಾಕ್ ವಾರ್ ಮುಂದುವರೆದಿದೆ.
ತಾವು ಸಿದ್ದರಾಮಯ್ಯ ಪರವಾಗಿದ್ದೇವೆ ಎಂಬ ಕಾರಣಕ್ಕೆ ಷಡ್ಯಂತ್ರ ಮಾಡಲಾಯಿತು ಅಂತಾ ರಾಜಣ್ಣ...
ಸೆಪ್ಟೆಂಬರ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ ಎನ್ನುತ್ತಿದ್ದ ಕೆ.ಎನ್ ರಾಜಣ್ಣ ಅವ್ರೇ ಸಚಿವ ಸ್ಥಾನದಿಂದ ವಜಾ ಆದರು. ಸಚಿವ ಸ್ಥಾನ ಕಳೆದುಕೊಂಡ್ರು ಅವರು ಆಡಿದ ಮಾತು ಸುಳ್ಳಾಗೋದಿಲ್ಲ ಅನ್ಸುತ್ತೆ. ಸೆಪ್ಟೆಂಬರ್ ತಿಂಗಳು ಶುರುವಾಗುತ್ತಿದ್ದಂತೆ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದದ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಚಿವ ಸ್ಥಾನ ಅಲಂಕರಿಸಿದ್ದ ಹಿರಿಯ ನಾಯಕ ಕೆ.ಎನ್....
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಹಕಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಮಾಗಡಿ ತಾಲೂಕಿನ ಬೆಳಗುಂಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿರ್ದೇಶಕರ ಆಯ್ಕೆಗೆ ಜಿದ್ದಾಜಿದ್ದಿನ ಸ್ಪರ್ಧೆ ಇತ್ತು. ಚುನಾವಣೆಯಲ್ಲಿ JDS ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಒಟ್ಟು 11 ನಿರ್ದೇಶಕರ ಸ್ಥಾನದಲ್ಲಿ JDS ಬೆಂಬಲಿತ 9 ನಿರ್ದೇಶಕರು ಜಯಶಾಲಿಗಳಾಗಿದ್ದಾರೆ.
ಮಾಗಡಿಯಲ್ಲಿ ಕಾಂಗ್ರೆಸ್ ಆಡಳಿತ ಇದ್ದು,...
Ramanagara News: ರಾಮನಗರ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರವಾಗಿ, ರಾಮನಗರದ ಮಾಗಡಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
https://youtu.be/2ZqKqS8pI-I
ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನ ಅಕ್ಕಪಕ್ಕ ಸೇರಿಸದೇ...