ಬಿಹಾರ ಚುನಾವಣೆ ಬಳಿಕ ನವೆಂಬರ್ ಕ್ರಾಂತಿಯಾಗಲಿದೆ ಅನ್ನೋ ಚರ್ಚೆಗಳಿಗೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಬದಲಾವಣೆಗೆ ಚುನಾವಣೆಯೇ ಬೇಕಾ ಅಂತಾ ಪ್ರಶ್ನಿಸಿದ್ದಾರೆ. ಹೈಕಮಾಂಡ್ನವರು ಮಾಡೋದಿದ್ರೆ ಮಾಡ್ತಾರೆ. ಚುನಾವಣೆ ಅನ್ನೋ ಪ್ರಶ್ನೆಯೇ ಇಲ್ಲ. ಉಪಮುಖ್ಯಮಂತ್ರಿಗಳು ನಮ್ಮ ಪಕ್ಷದ ಅಧ್ಯಕ್ಷರು. ನಮ್ಮೆಲ್ಲರಿಗೂ ಜವಾಬ್ದಾರಿ ಇದೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರವಾಹ ಆಗ್ತಿದೆ. ದಕ್ಷಿಣ...
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪಟ್ಟಿಯಲ್ಲಿರುವ ಪ್ರಶ್ನೆಗಳ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿಯಲ್ಲಿ ಹೆಚ್ಚು ಪ್ರಶ್ನೆಗಳಿವೆ. 60 ಪ್ರಶ್ನೆಗಳಿಗೆ ಉತ್ತರ ಕೇಳೋದು ಕಷ್ಟದ ಕೆಲಸ.
ಪ್ರಶ್ನೆಗಳು ಹೆಚ್ಚಾದವು ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ. ಡಿಸಿಎಂ ಡಿಕೆಶಿ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ...
ಹುಕ್ಕೇರಿ ಸಹಕಾರ ಸಂಘದ ಚುನಾವಣೆಯಲ್ಲಿ, ರಮೇಶ್ ಕತ್ತಿ ವಿರುದ್ಧ ಜಾರಕಿಹೊಳಿ ಕುಟುಂಬಕ್ಕೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಎಲೆಕ್ಷನ್ನಲ್ಲಿ ಸೋಲು ಗೆಲುವು ಇದ್ದಿದ್ದೇ. ಮುಂದೆ ಗೆಲ್ಲಬಹುದು. ಹುಕ್ಕೇರಿ ಸೋಲು ಪಾಠ ಇದ್ದಂತೆ. ಸ್ಟ್ರ್ಯಾಟಜಿ ಮಾಡುವಲ್ಲಿ ವಿಫಲ ಆಗಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಸೋತಿದ್ದೇವೆ ಅಂತಾ...
ಪ್ರತಿಷ್ಠಿತ ಹುಕ್ಕೇರಿ ಸಹಕಾರ ಸಂಘದ ಚುನಾವಣಾ ಕಣ ರಣರಂಗವಾಗಿದೆ. ಬಿಜೆಪಿಯ ಮಾಜಿ ಸಂಸದ ರಮೇಶ್ ಕತ್ತಿ ಬಣ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಸಚಿವ ಸತೀಶ್ ಜಾರಕಿಹೊಳಿ ಬಣ ಸೋಲಿಸಿ, ಎಲ್ಲಾ 15 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬಾಪೂಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲಾಯ್ತು.
ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ರಮೇಶ್ ಕತ್ತಿ...
ಹುಬ್ಬಳ್ಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ, ಖಾಲಿ ಕುರ್ಚಿಗಳ ದರ್ಬಾರ್ ಹೆಚ್ಚಾಗಿದೆ. ಬೆಳಗ್ಗೆ ಇರಲಿ... ಮಧ್ಯಾಹ್ನವೇ ಆಗ್ಲಿ.. ಕಚೇರಿ ಅವಧಿ ಮುಗಿಯುವ ಸಮಯಕ್ಕೆ ಹೋದರೂ, ಅಧಿಕಾರಿಗಳು ಇರೋದೇ ಇಲ್ಲ. ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚೇಂಬರ್, ಆಡಳಿತ ಶಾಖೆ, ಇಂಜಿನಿಯರ್ ವಿಭಾಗ, ಮೀಟಿಂಗ್ ಹಾಲ್ ಎಲ್ಲಾ ವಿಭಾಗದಲ್ಲೂ, ಖಾಲಿ ಕುರ್ಚಿಗಳ ದರ್ಶನವಾಗುತ್ತಿದೆ.
ಈ...
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ, ಜಾರಕಿಹೊಳಿ ಕುಟುಂಬದ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಉಮೇಶ್ ಕತ್ತಿ ಬದುಕಿರುವ ತನಕ ಹಿಡಿತ ಸಾಧ್ಯವಾಗಿರಲಿಲ್ಲ. ಆದ್ರೀಗ, ಬದಲಾದ ಪರಿಸ್ಥಿತಿಯ ಲಾಭ ಪಡೆಯೋಕೆ, ಜಾರಕಿಹೊಳಿ ಫ್ಯಾಮಿಲಿ ಹವಣಿಸುತ್ತಿದೆ. 3 ದಶಕಗಳ ಕಾಲ ಪಾರಮ್ಯ ಸಾಧಿಸಿದ್ದ ಕತ್ತಿ ಕುಟುಂಬವನ್ನು, ಡಿಸಿಸಿ ಬ್ಯಾಂಕಿನಿಂದಲೇ ದೂರು ಇಡಲು, ಸ್ಟ್ರ್ಯಾಟಜಿ ರೂಪಿಸುತ್ತಿದ್ದಾರೆ. ಆದ್ರೆ, ಜಾರಕಿಹೊಳಿ...
ಸಚಿವ ಸತೀಶ್ ಜಾರಕಿಹೊಳಿಯನ್ನು ಬೆಂಬಲಿಸಿದ್ದಕ್ಕೆ, ಗಂಡನ ಕೊರಳಪಟ್ಟಿ ಹಿಡಿದು ಪತ್ನಿಯೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 8ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ನಡೆದಿತ್ತು. ಸೋಮವಾರ ಮಧ್ಯಾಹ್ನ ಮದಿಹಳ್ಳಿ ಗ್ರಾಮದಲ್ಲಿ, ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದೊಡ್ಡವರೇ ತೊಡೆ ತಟ್ಟಿ ಅಖಾಡಕ್ಕೆ ನಿಂತಿದ್ದು, ಇಡೀ ಜಿಲ್ಲೆಯ ಜನರನ್ನೇ...
ಬೆಳಗಾವಿ ಜಿಲ್ಲೆ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು, ಪ್ರತಿಷ್ಠಿತ ಕುಟುಂಬಗಳ ಕಾಳಗ ಶುರುವಾಗಿದೆ. ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಇನ್ನೆರಡು ತಿಂಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧಿಕಾರಕ್ಕಾಗಿ ನೇರ ಹಣಾಹಣಿ ಶುರುವಾಗ್ತಿದೆ.
ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ...
ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ, ತಪ್ಪು ಮಾಡಿದ್ದೇನೆಂದು ಭಾವಿಸಿದ್ರೆ ಕ್ಷಮೆ ಇರಲಿ ಅಂತಾ ಮನವಿ ಮಾಡಿದ್ದಾರೆ.
ಕಳೆದ ಆಗಸ್ಟ್ 22ರಂದು ವಿಧಾನಸಭಾ ಅಧಿವೇಶನದಲ್ಲಿ, ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂಬ ಗೀತೆಯನ್ನ ಡಿಕೆಶಿ ಹಾಡಿದ್ರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಕುರಿತು ಚರ್ಚೆ ನಡೆಯುತ್ತಿದ್ದಾಗ ಗದ್ದಲ...
ನಮಸ್ತೇ ಸದಾ ವತ್ಸಲೇ.. ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದ ಡಿಸಿಎಂ ಡಿಕೆಶಿ ವಿರುದ್ಧ, ಸ್ವಪಕ್ಷದವರೇ ಆದ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟೀಕಿಸಿದ್ದಾರೆ. ಡಿ.ಕೆ ಶಿವಕುಮಾರ್ ಸಂಸ್ಕೃತ ಬಲ್ಲವರು. ಹೀಗಾಗಿ ಅಧಿವೇಶನದಲ್ಲಿ ಸಮಯಕ್ಕೆ ತಕ್ಕಂತೆ ಉತ್ತರಿಸುವ ಬದಲು, RSS ಗೀತೆ ಹಾಡಿದ್ದಾರೆ.
RSS ಗೀತೆ ಹಾಡಿದ್ರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದ್ರೆ, ನಾನು ಮತ್ತು ಶಾಸಕ ಚನ್ನಾರೆಡ್ಡಿ ಪಾಟೀಲ್...