ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಭೀತಿಗೆ ತಳ್ಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣವಾಗಿ ಉರಿದುಹೋಗಿದೆ.
ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ನಂಜನಗೂಡಿನ ಹೊಸಳ್ಳಿ ಗೇಟ್ ಸಮೀಪ ಈ ಘಟನೆ ಸಂಭವಿಸಿದೆ. ಬಸ್‌ನೊಳಗೆ ಸುಮಾರು 40...
ಪತ್ನಿಯ ದಬ್ಬಾಳಿಕೆ ವರ್ತನೆಯಿಂದ ಬೇಸತ್ತು, ಆಕೆಯ ಹತ್ಯೆಗೆ ಸುಪಾರಿ ನೀಡಿದ ಪತಿ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ನಾಗರತ್ನ (46) ಅವರ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪಾನಿಪೂರಿ ವ್ಯಾಪಾರಿ ಮಹೇಶ್ (44) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. “ನಾನು ಗಳಿಸಿದ್ದ ಹಣವನ್ನೆಲ್ಲ ಕಿತ್ತುಕೊಂಡು, ಬಡ್ಡಿ ವ್ಯವಹಾರ ನಡೆಸುತ್ತಿದ್ದ ಪತ್ನಿ...
ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಠೇವಣಿ ಹಣವಾಗಿ ಸುಮಾರು ₹157 ಕೋಟಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದೆ. ಈ ಹಣವನ್ನು ಅರ್ಹ ಗ್ರಾಹಕರು ಅಥವಾ ವಾರಸುದಾರರು ಪಡೆದುಕೊಳ್ಳುವಂತೆ ಆರ್‌ಬಿಐ ಅವಕಾಶ ನೀಡಿದೆ.
ಕೇಂದ್ರ ಸರ್ಕಾರದ ‘ನಿಮ್ಮ ಹಣ – ನಿಮ್ಮ ಅಧಿಕಾರ’ ಅಭಿಯಾನದಡಿ, ವರ್ಷಗಳಿಂದ ವಾಪಸ್ ಪಡೆಯದೇ ಉಳಿದಿರುವ ಹಣದ ಬಗ್ಗೆ ಗ್ರಾಹಕರಿಗೆ...
ವಿಶ್ವಪ್ರಸಿದ್ಧ ಮೈಸೂರು ಅರಮನೆಯ ನಿರ್ವಹಣೆಯಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಅರಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾದ ವರಹ ಗೇಟ್‌ನ ಮೇಲ್ಛಾವಣಿ ದಿಢೀರ್ ಕುಸಿದು, ಅಲ್ಲಿ ಓಡಾಡುತ್ತಿದ್ದ ಪ್ರವಾಸಿಗರ ಗೈರಿಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ಸಮಯದಲ್ಲಿ ಗೇಟ್ ಕೆಳಗೆ ನಿಲ್ಲಿಸಲಾಗಿದ್ದ ಅರಮನೆ ಸಿಬ್ಬಂದಿಯೊಬ್ಬರ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಟ್ಟಡಗಳ ಸುರಕ್ಷತಾ ಕ್ರಮಗಳ...
ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಣ ಮಾಡಿದ್ದ ಪ್ರಕರಣವನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಭೇದಿಸಿ, ಕಿಡ್ನ್ಯಾಪ್ ಆದ ಕೆಲವೇ ಗಂಟೆಯಲ್ಲೇ ಆರೋಪಿಗಳನ್ನು ಸಿಕ್ಕಿಬಿದ್ದಿಸಿದ್ದಾರೆ. ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ, ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಅವರನ್ನು ಟಾಟಾ ಸುಮೋದಲ್ಲಿ ಬಂದ ಐವರು ಅಪಹರಣ ಮಾಡಿದ್ದರು. ಬಳಿಕ ಲೋಕೇಶ್ ಅವರ ಮೊಬೈಲ್‌ನಿಂದಲೇ ಪತ್ನಿಗೆ ಕರೆಮಾಡಿ,...
ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಈಗ ಹೊಸ ಅನುಭವವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಮೃಗಾಲಯ ನೋಡಲು ಕನಿಷ್ಠ 4 ರಿಂದ 5 ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಸುತ್ತಾಡಬೇಕಾಗುತ್ತದೆ. ವಯಸ್ಸಾದವರು ಅಥವಾ ಹೆಚ್ಚು ಸಮಯ ನಡೆದುಬರಲು ಆಗದವರಿಗೆ ಈಗಾಗಲೇ ಎಲೆಕ್ಟ್ರಿಕ್ ಬಗ್ಗಿ ಸೌಲಭ್ಯವಿದೆ. ಆದರೆ ಏಕಾಂತವಾಗಿ, ಸ್ವಂತವಾಗಿ ಮೃಗಾಲಯದ ಸುತ್ತಾಟವನ್ನು ಮಾಡಲು ಬಯಸುವ ಪ್ರವಾಸಿಗರಿಗೆ ಇದೀಗ...
ಶ್ರೀರಾಂಪುರದಲ್ಲಿರುವ ತಾಲ್ಲೂಕು ನಾಯಕರ ಸಂಘದ ಆವರಣದಲ್ಲಿ ವರ್ಷಗಳಿಂದ ಅಪೂರ್ಣವಾಗಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಬುಧವಾರ ಸ್ಥಳೀಯವಾಗಿ ಪರಿಶೀಲಿಸಿದರು. ಪರಿಶೀಲನೆಯ ಬಳಿಕ ಸಂಘದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವರು, ಕಾಲತೀಪು ಕಂಡಿರುವ ವಾಲ್ಮೀಕಿ ಭವನದ ನಿರ್ಮಾಣವನ್ನು ಸಂಪೂರ್ಣಗೊಳಿಸಲು ₹3 ಕೋಟಿ ಹೆಚ್ಚುವರಿ ಅನುದಾನವನ್ನು...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ, ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಎಂಟು ಎಕರೆ ಜಾಗವನ್ನು ಕೋರಲಾಗಿದೆ.
ಪ್ರಸ್ತುತ ಇರುವ ಹಿಂಕಾಳ್, ಕುವೆಂಪುನಗರ ಮತ್ತು ಸತ್ತಗಳ್ಳಿ ಡಿಪೋಗಳ ಜೊತೆಗೆ, ಹುಣಸೂರು, ಟಿ. ನರಸೀಪುರ, ನಂಜನಗೂಡು...
ಐತಿಹಾಸಿಕ ಕುಸ್ತಿ ಕಲೆಗೆ ರಾಜ್ಯದಲ್ಲಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ವತಿಯಿಂದ ಹನುಮ ಜಯಂತಿ ಹಾಗೂ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಅಂಗವಾಗಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪುರುಷರು...
ಮೈಸೂರು ನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಘೋಷಿಸುವಂತೆ ಒತ್ತಾಯಿಸಿ ಇಂದು ಬೈಕ್ ರ್ಯಾಲಿ ಆಯೋಜಿಸಲಾಯಿತು. ಒಕ್ಕಲಿಗ ನೇತೃತ್ವದಲ್ಲಿ ನಡೆದ ಈ ಮೆರವಣಿಗೆ ಒಂಟಿಕೊಪ್ಪಲಿನ ಚಂದ್ರಮೌಳೇಶ್ವರ ದೇಗುಲದಿಂದ ಆರಂಭವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಮಾರೋಪಗೊಂಡಿತು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್ ಅವರ...
Political News: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯ ಇಂಡಿಪಂಪ್ ವೃತ್ತದಲ್ಲಿ ಅಲ್ಪಸಂಖ್ಯಾತ...