Tuesday, September 23, 2025

Mysuru

ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿ ಪತ್ತೆ, ಮೂರರಲ್ಲಿ ಒಂದು ಕಪ್ಪು!

Mysuru News: ಮೈಸೂರು: ಮರಿಗಳು, ಪುಟ್ಟ ಪುಟ್ಟ ಜೀವಿಗಳು ಸಾಧು ಪ್ರಾಣಿಗಳ ಸಂತಾನಗಿರಲಿ ಅಥವಾ ಹಿಂಸ್ರ ಪಶುಗಳು- ನೋಡಲು ಮುದ್ದಾಗಿಯೇ ಕಾಣುತ್ತವೆ. ಮನೆಗಳಲ್ಲಿ ನಾವು ಸಾಕುವ ನಾಯಿ ಬೆಕ್ಕುಗಳ ಮರಿಗಳು ಬಹಲ ಮುದ್ದಾಗಿರುತ್ತವೆ. ಬೆಕ್ಕು ಮರಿಗಳಂತೆ ಕಾಣುವ ಚಿರತೆಗಳು ಸಹ ಮುದ್ದಾಗಿವೆ. ಅಂದಹಾಗೆ, ಮರಿಗಳು ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ರೈತ ದ್ಯಾವಣ್ಣ ಎನ್ನುವವರ ಕಬ್ಬಿನ...

ಕಾರು ನಿಲ್ಲಿಸೋಕೆ 100*100 ಸೈಟು, ಕೋಟಿ-ಕೋಟಿ ಆಸ್ತಿ: ಸರ್ಕಾರಿ ಕಾಲೇಜು ಉಪನ್ಯಾಸಕನ ಮನೆ ಮೇಲೆ ಲೋಕಾಯುಕ್ತ ರೇಡ್‌

Mysuru News: ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಇದರೊಂದಿಗೆ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ನಡೆದಿದೆ. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಕುಟುಂಬದ...

ಭ್ರೂಣ ಹತ್ಯೆ ಪ್ರಕರಣ ಬೆನ್ನಲ್ಲೇ ಮೈಸೂರಿನಲ್ಲಿ ಆರೋಗ್ಯ ಇಲಾಖೆ ಅಲರ್ಟ್!

Mysuru News: ಮೈಸೂರು: ರಾಜ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಹಿನ್ನೆಲೆ ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಮೈಸೂರು ಜಿಲ್ಲೆಯ ನರ್ಸಿಂಗ್ ಹೋಂ, ಖಾಸಗಿ ಆಸ್ಪತ್ರೆ ಕ್ಲಿನಿಕ್ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಕ್ರಮ ತಡೆಗಟ್ಟಲು ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್ ಪಡೆಯನ್ನು ನಿಯೋಜಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸಲಿದ್ದು...

ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ

Mysuru News: ಮೈಸೂರು: ಜಿಲ್ಲೆಯ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕೇಂದ್ರ ಕಾರಾಗೃಹ ದೊಡ್ಡ ಕಾಂಪೌಂಡ್ ಹಿಂಭಾಗ ಗಾಂಜಾ (Ganja) ಮಾರಾಟ ವೇಳೆ ಅಬಕಾರಿ (Excise) ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಅಬಕಾರಿ ಎಸ್ಪಿ ಪಿ.ಮಹೇಶ್ ಕುಮಾರ್ ಮಾರ್ಗದರ್ಶನಲ್ಲಿ‌ ಉಪ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡದಿಂದ ಈ ದಾಳಿ ನಡೆದಿದೆ. ದಾಳಿ ವೇಳೆ...

ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!

Mysuru News: ಮೈಸೂರು: ಬಿಳಿಗೆರೆ ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಮೈಸೂರು SP ಸೀಮಾ ಲಾಟ್ಕರ್ ಅಮಾನತು ಮಾಡಿದ್ದಾರೆ. ನಂಜೇಶ್ ಹಾಗೂ ಪ್ರಸನ್ನಕುಮಾರ್ ಅಮಾನತುಗೊಂಡ ಸಿಬ್ಬಂದಿ. ಕರ್ತವ್ಯ ಲೋಪ ಅಡಿಯಲ್ಲಿ ಕ್ರಮಕ್ಕೆ ಆದೇಶಿಸಿದ್ದಾರೆ. ನವೆಂಬರ್ 12 ರಂದು ಬಿಳಿಗೆರೆ ಪೊಲೀಸರು ಕಿರಣ್ ಕುಮಾರ್ ಎಂಬ ಯುವಕನನ್ನು...

ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ!

Mysuru News: ಮೈಸೂರು: ಮದುವೆಗಾಗಿ ಕೊಟ್ಟ ಸಾಲ ಹಿಂದಿರುಗಿ ಕೇಳಿದ ಕಾರಣಕ್ಕೆ ತಾಯಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ, ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಗಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಯುವತಿ ಸಂಗೀತಾಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಂಗೇನಹಳ್ಳಿಯ ಸೀನಾ, ಶಂಕರ, ಮಂಚಮ್ಮ, ಬೋರಮ್ಮ ಹಾಗೂ...

ಹಸು, ಕರುವಿನ ಮೇಲೆ ಹುಲಿ ದಾಳಿ; ಬಿಡಿಸಲು ಹೋದ ವ್ಯಕ್ತಿ ಮೇಲೂ ಎರಗಿದ ವ್ಯಾಘ್ರ

Mysuru News: ಮೈಸೂರು: ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ನಂಜನಗೂಡು ತಾಲೂಕಿನ ಮಹದೇವ ನಗರದ ಹೊರವಲಯದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದೆ. ದನ ಮೇಯಿಸುತ್ತಿದ್ದ ರೈತ ವೀರಭದ್ರ ಭೋವಿ (70) ಎಂಬುವವರ ಮೇಲೆ ಹುಲಿ‌ ದಾಳಿ ಮಾಡಿದ್ದು ಗಾಯಾಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗ್ರಾಮದ ಮತ್ತಿಮರದ ಜೇನುಕಟ್ಟೆಯ...

ನಿವೃತ್ತ ಪೊಲೀಸ್ ಅಧಿಕಾರಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ

Mysuru Crime News: ಮೈಸೂರು: ಪೊಲೀಸ್ ಅಧಿಕಾರಿಯಾಗಿದ್ದವರ ಮನೆ ಇದು ಎನ್ನುವ ಭಯ ಇಲ್ಲದೇ ಅವರ ಕಟ್ಟಡ ಬಾಡಿಗೆ ಪಡೆದು ವೇಶ್ಯಾವಾಟಿಕೆ  ದಂಧೆ ನಡೆಸುತ್ತಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಮೈಸೂರಿನ ಲಲಿತ‌ಮಹಲ್ ನಗರದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯನ್ನು ಬಾಡಿಗೆ ಪಡೆದು ಫ್ಯಾಮಿಲಿ ಸಲೂನ್ ಹೆಸರಲ್ಲಿ ಮಹೇಶ್ ಎಂಬಾತ ವೇಶ್ಯಾವಾಟಿಕೆ...

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

Hunasuru: ಹುಣಸೂರು: ಕರ್ತವ್ಯ ನಿರತ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹುಣಸೂರು ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ಮೂರ್ತಿರಾವ್ ಪುತ್ರ ಅರವಿಂದ್ ಬಂಧಿತ ಆರೋಪಿ. ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ಬಂದಿದ್ದ ಅರವಿಂದ ನೋ ಪಾರ್ಕಿಗ್ ಸ್ಥಳದಲ್ಲಿ ತನ್ನ ಬೈಕ್...

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು

Mysuru: ಹುಣಸೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ಕಾವೇರಿ ನೀರು ಇಲ್ಲಿನ ನಗರಸಭೆ ನೀರು ಸಂಗ್ರಹ ಘಟಕದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿ ಚರಂಡಿ ಸೇರುತ್ತಿದೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ವಾರದಲ್ಲಿ ಎರಡು ಮೂರು ದಿನ ಬಿಡುವ ವ್ಯವಸ್ಥೆ ಇದ್ದು, ನಿವಾಸಿಗರು ಪರದಾಡುತ್ತಿದ್ದಾರೆ. ಆದರೆ ಇದೀಗ ಶುದ್ಧ ನೀರು ಸಮರ್ಪಕವಾಗಿ...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img